Advertisement

ಅಮರನಾಥ ಯಾತ್ರೆಗೆ ಮೆಹಬೂಬ ಮುಫ್ತಿ ಕ್ಯಾತೆ : ಸ್ಥಳೀಯರ ಬದುಕು ತೀವ್ರ ಬಾಧಿತ !

09:55 AM Jul 09, 2019 | Sathish malya |

ಹೊಸದಿಲ್ಲಿ : ಅಮರನಾಥ ಯಾತ್ರೆಗೆ ಸಂಬಂಧಿಸಿದ ಪೂರ್ವ ಸಿದ್ಧತೆಗಳು ಮತ್ತು ವ್ಯಾಪಕ ಭದ್ರತೆಯೇ ಮೊದಲಾದ ಕಾರಣಗಳಿಂದಾಗಿ ಸ್ಥಳೀಯರ ದಿನನಿತ್ಯದ ಬದುಕು ತೀವ್ರವಾಗಿ ಬಾಧಿತವಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.

Advertisement

ಅಮರನಾಥ ಯಾತ್ರಿಕರಿಗೆ ಒಂದೆಡೆ ಉಗ್ರರ ಬೆದರಿಕೆ ಇದೆಯಾದರೆ ಇನ್ನೊಂದೆಡೆ ಪ್ರತಿಕೂಲ ಹವಾಮಾನವನ್ನು ಎದುರಿಸಬೇಕಾದ ಗುರುತರ ಸವಾಲು ಇದೆ. ಇವನ್ನು ನಿಭಾಯಿಸುವ ಸಲುವಾಗಿ ಸರಕಾರ ಪೂರ್ಣ ಪ್ರಮಾಣದಲ್ಲಿ ಯಾತ್ರಿಕರಿಗೆ ಮೂಲ ಸೌಕರ್ಯ, ಭದ್ರತೆ, ಸಾಗಾಟ, ಆಹಾರ, ವೈದ್ಯಕಿಯ ಇತ್ಯಾದಿ ವ್ಯವಸ್ಥೆಗಳನ್ನು ಮಾಡಬೇಕಾಗಿದೆ.

ಆದರೆ ಸರಕಾರದ ಈ ಸಮರೋಪಾದಿಯ ಕಾರ್ಯಾಚರಣೆಯಿಂದ ಸ್ಥಳೀಯರ ದಿನ ನಿತ್ಯದ ಬದುಕು ತೀವ್ರವಾಗಿ ಬಾಧಿತವಾಗಿದೆ ಎಂದು ಮೆಹಬೂಬ ಮುಫ್ತಿ ಟೀಕಿಸಿರುವುದು ವ್ಯಾಪಕ ಚರ್ಚೆ, ಖಂಡನೆಗೆ ಗುರಿಯಾಗಿದೆ.

ವರ್ಷಂಪ್ರತಿಯ 45 ದಿನಗಳ ಅಮರನಾಥ ಯಾತ್ರೆ ಕಳೆದ ವಾರ ಆರಂಭಗೊಂಡಿತ್ತು. ಸಮುದ್ರ ಮಟ್ಟದಿಂದ 3,888 ಮೀಟರ್‌ ಎತ್ತರದಲ್ಲಿರುವ ವಿಶ್ವ ಪ್ರಸಿದ್ಧ ಹಿಂದೂ ಗುಹಾಲಯಕ್ಕೆ ಕಳೆದ ವಾರ ಸುಮಾರು 67,000 ಯಾತ್ರಿಕರು ತಮ್ಮ ಪವಿತ್ರ ಯಾತ್ರೆಯನ್ನು ಆರಂಭಿಸಿದ್ದರು.

ಅಮರನಾಥ ಯಾತ್ರಿಕರ ಭದ್ರತೆಗಾಗಿ ಸರಕಾರ ಈ ಬಾರಿ ಅಭೂತಪೂರ್ವ ಸಂಖ್ಯೆಯ ಸಿಆರ್‌ಪಿಎಫ್ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಿದೆ.

Advertisement

ಸಿಆರ್‌ಪಿಎಫ್ ಮಾತ್ರವಲ್ಲದೆ ಜಮ್ಮು ಕಾಶ್ಮೀರ ಪೊಲೀಸ್‌ ಪಡೆ ಕೂಡ ಈ ಬಾರಿ ಗಮನಾರ್ಹ ಸಂಖ್ಯೆಯಲ್ಲಿ ಅಮರನಾಥ ಯಾತ್ರಿಕರ ಭದ್ರತೆ ಮತ್ತು ಸೌಕರ್ಯಕ್ಕಾಗಿ ನಿಯೋಜಿತವಾಗಿದೆ.

ಈ ಬಗ್ಗೆ ಮೆಹಬೂಬ ಮುಫ್ತಿ ಎತ್ತಿರುವ ಆಕ್ಷೇಪದ ಮಾತುಗಳು ಹೀಗಿವೆ : ಅಮರನಾಥ ಯಾತ್ರೆ ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಈ ಬಾರಿ ಯಾತ್ರಿಕರ ಭದ್ರತೆ ಮತ್ತು ಸೌಕರ್ಯಕ್ಕಾಗಿ ವ್ಯಾಪಕ ಮತ್ತು ಪೂರ್ಣ ಪ್ರಮಾಣದ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸ್ಥಳೀಯ ಜನರ ದಿನನಿತ್ಯದ ಬದುಕು ತೀವ್ರವಾಗಿ ಬಾಧಿತವಾಗಿದೆ’ ಎಂದು ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next