Advertisement

ಅಮರನಾಥ ಯಾತ್ರೆ: ವ್ಯಾಪಕ ಭದ್ರತೆಯೊಂದಿಗೆ ಮೊದಲ ಬ್ಯಾಚ್‌ ಪ್ರಯಾಣ 

10:00 AM Jun 27, 2018 | Team Udayavani |

ಜಮ್ಮು:  ಪ್ರಸಕ್ತ ಸಾಲಿನ ಮೊದಲ ಬ್ಯಾಚ್‌ ಬುಧವಾರ ಬೆಳಗ್ಗೆ ಜಮ್ಮುವಿನ ಭಗವತಿ ನಗರದ ಬೇಸ್‌ ಕ್ಯಾಂಪ್‌ನಿಂದ ಅಮರನಾಥ ಯಾತ್ರೆ ಕೈಗೊಂಡಿದೆ. 

Advertisement

ಸೋಮವಾರ ನಸುಕಿನ ವೇಳೆ ಜಮ್ಮು  ಕಾಶ್ಮೀರದ ಸಿಎಸ್‌ ಬಿವಿಆರ್‌ ಸುಬ್ರಹ್ಮಣ್ಯನ್‌ , ರಾಜ್ಯ ಪಾಲರ ಸಲಹೆಗಾರರಾದ ಬಿ.ಬಿ.ವ್ಯಾಸ್‌, ವಿಜಯ್‌ ಕುಮಾರ್‌ ಅವರು ಧ್ವಜ ತೋರಿಸಿ ಯಾತ್ರೆಗೆ ಚಾಲನೆ ನೀಡಿದರು. 

ಪ್ರಯಾಣ ಆರಂಭಿಸಿದ ತಂಡಕ್ಕೆ ಉಧಮ್‌ಪುರ್‌ನಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯರು  ಭವ್ಯ ಸ್ವಾಗತ ಕೋರಿದರು. 

ನಮಗೆ ಭದ್ರತೆ ಯಿಂದ ಹಿಡಿದು ಎಲ್ಲಾ ರೀತಿಯ ವ್ಯವಸ್ಥೆಗಳು ಬಹಳ ಸಂತಸ ತಂದಿವೆ ಎಂದು ಯಾತ್ರಿಗಳು ಮಾಧ್ಯಮಗಳ ಎದರು ಸಂಭ್ರಮ ವ್ಯಕ್ತ ಪಡಿಸಿದ್ದಾರೆ. 

Advertisement

ಉಗ್ರರ ದಾಳಿ ಸಾಧ್ಯತೆಯ ಹಿನ್ನೆಲೆಯಲ್ಲಿ  ವ್ಯಾಪಕ ಭದ್ರತೆಯ ನಡುವೆ ಅಮರ ನಾಥ ಯಾತ್ರೆ ನಡೆಸಲಾಗುತ್ತಿದೆ. 

ಪ್ರಸಕ್ತ ಸಾಲಿನಲ್ಲಿ ದೇಶದ ಎಲ್ಲಾ ಭಾಗಗಳಿಂದ 2 ಲಕ್ಷ ಮಂದಿ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಸಾಧುಗಳೂ ಪಾಲ್ಗೊಳ್ಳುತ್ತಿದ್ದಾರೆ. 

ಬಲ್ತಾಲ್‌ ಮತ್ತು ಪಹಲ್ಗಾಂ ಕ್ಯಾಂಪ್‌ನಿಂದ ಭಾರೀ ಭದ್ರತೆಯಲ್ಲಿ ಮೊದಲ ತಂಡ ಬೆಳಗ್ಗೆ ಪ್ರಯಾಣ ಆರಂಭಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next