Advertisement

ಕರಾವಳಿಯ ಅಮರನಾಥ ಯಾತ್ರಿಕರು ಸುರಕ್ಷಿತ

01:13 AM Jul 10, 2022 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಶ್ಮೀರದ ಅಮರನಾಥ ಯಾತ್ರೆಗೆ ತೆರಳಿರುವ ಬಹುತೇಕ ಯಾತ್ರಿಕರೂ ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.

Advertisement

ಜಿಲ್ಲೆಯಲ್ಲಿ ಈ ಕುರಿತು ಮಾಹಿತಿ ಪಡೆಯಲು ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದ್ದು, ಇದುವರೆಗೆ ಯಾರೂ ಸಂಪರ್ಕಿಸಿಲ್ಲ, ಆದರೆ ರಾಜ್ಯದಿಂದ ಬಂದಿರುವ ಮಾಹಿತಿ ಪ್ರಕಾರ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿರುವ ನರೇಶ್‌ ಸಸಿಹಿತ್ಲು ಹಾಗೂ ಅವರನ್ನೊಳಗೊಂಡ ಐವರ ತಂಡ ಜು. 7ರಂದು ಶಿವಲಿಂಗ ದರ್ಶನ ಮಾಡಿ ಅಲ್ಲಿ ನಿಲ್ಲುವ ಯೋಜನೆಯಲ್ಲಿದ್ದರು. ಆದರೆ ಹವಾಮಾನ ಸರಿಯಿಲ್ಲದ ಕಾರಣ ಅಲ್ಲಿದ್ದ ಬೀದರ್‌ ಮೂಲದ ಸೈನಿಕರೊಬ್ಬರ ಸಲಹೆಯಂತೆ ಕೆಳಕ್ಕಿಳಿದಿದ್ದರಿಂದ ಯಾವುದೇ ಅಪಾಯವಾಗಿಲ್ಲ.

ನಿರ್ಮಲಾ ಟ್ರಾವೆಲ್ಸ್‌ ಯಾತ್ರಿಗಳು ಕ್ಷೇಮ
ಮಂಗಳೂರಿನ ನಿರ್ಮಲಾ ಟ್ರಾವೆಲ್ಸ್‌ ನೀಡಿರುವ ಪ್ರಕಟನೆಯಂತೆ ಅವರ ಮೂಲಕ ತೆರಳಿರುವ ರಾಜ್ಯದ ಎಲ್ಲ ಯಾತ್ರಿಕರೂ ಸುರಕ್ಷಿತವಾಗಿದ್ದಾರೆ. ರಾಜ್ಯದಿಂದ ತಲಾ 36 ಮಂದಿಯ ಮೂರು ತಂಡಗಳು ಗುಹಾಲಿಂಗ ದರ್ಶನಕ್ಕೆ ತೆರಳಿವೆ. ಒಂದು ತಂಡ ಈಗಾಗಲೇ ದರ್ಶನ ಮುಗಿಸಿ ವಾಪಸಾಗಿದೆ. ಒಂದು ತಂಡ ತೆರಳುತ್ತಿದೆ. ಮೇಘಸ್ಫೋಟದ ಬಳಿಕ ಅಮರನಾಥ ದರ್ಶನ ಮತ್ತೆ ಪುನರಾರಂಭಗೊಳ್ಳುತ್ತಿದ್ದು, ಮತ್ತೆ ತಂಡಗಳು ತೆರಳತೊಡಗಿವೆ ಎಂದು ನಿರ್ಮಲಾ ಟ್ರಾವೆಲ್ಸ್‌ ಮಾಲಕರಾದ ನಿರ್ಮಲಾ ಕಾಮತ್‌ ತಿಳಿಸಿದ್ದಾರೆ.

ಜಿಲ್ಲಾಡಳಿತ ಮನವಿ
ಉಡುಪಿ ಜಿಲ್ಲಾಡಳಿತವೂ ನಿಯಂ ತ್ರಣ ಕೊಠಡಿಯನ್ನು ತೆರೆದಿದ್ದು, ಜಿಲ್ಲೆಯಿಂದ ಅಮರನಾಥ ಯಾತ್ರೆ ತೆರಳಿ
ತೊಂದರೆಗೆ ಸಿಲುಕಿರುವ ಸುರಕ್ಷಿತವಾಗಿರುವ ಯಾತ್ರಾರ್ಥಿಗಳ ಸಂಬಂಧಿಕರು ವಿವರ ನೀಡುವಂತೆ ತಿಳಿಸಿದೆ.

Advertisement

ಬಂಟ್ವಾಳ, ಸುಳ್ಯದ ತಂಡದಿಂದ ಮಾಹಿತಿ
ಬಂಟ್ವಾಳ: ಅಮರನಾಥದಲ್ಲಿ ಜು. 8ರ ಮೇಘಸ್ಫೋಟದಿಂದ ಸುಮಾರು 15 ಮಂದಿ ಯಾತ್ರಾರ್ಥಿ
ಗಳು ಸಾವನ್ನಪ್ಪಿದ್ದು, ಬಂಟ್ವಾಳದಿಂದ ತೆರಳಿರುವ ಎಲ್ಲ 27 ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಪ್ರಸ್ತುತ ಅವರು ಜಮ್ಮು ಕಾಶ್ಮೀರದ ಪಹಲ್ಗಾಮ್‌ ಬೇಸ್‌ಕ್ಯಾಂಪ್‌ನಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ.

ಸದ್ಯಕ್ಕೆ ಯಾತ್ರೆ ಸ್ಥಗಿತಗೊಂಡಿದ್ದರೂ ಯಾತ್ರೆ ಪುನರಾರಂಭಗೊಂಡು ದರ್ಶನಕ್ಕೆ ಅವಕಾಶ ಸಿಗುವ ಭರವಸೆ ಲಭಿಸಿರುವ ಹಿನ್ನೆಲೆಯಲ್ಲಿ ಬಂಟ್ವಾಳದ ಯಾತ್ರಿಕರು ದರ್ಶನ ಮುಗಿಸಿಯೇ ಹಿಂದಿರುವುದಾಗಿ ತಿಳಿಸಿದ್ದಾರೆ.
ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ತಂಡದ ಜತೆ ಮಾತನಾಡಿದ್ದು, ಯಾವುದೇ ತೊಂದರೆಯಾದರೂ ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಬಂಟ್ವಾಳದ ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಕುರಿತು ಸುರೇಶ್‌ ಕೋಟ್ಯಾನ್‌ ವೀಡಿಯೋ ಸಂದೇಶ ಕಳು
ಹಿಸಿದ್ದು, ನಾವೆಲ್ಲರೂ ಸುರಕ್ಷಿತವಾಗಿ ದ್ದೇವೆ. ಸೈನಿಕರು ಪೂರ್ತಿ ಬೆಂಗಾವಲಿ ದ್ದಾರೆ ಎಂದು ತಿಳಿಸಿದ್ದಾರೆ. ಯಾತ್ರೆ
ಪೂರೈಸಿಯೇ ಹಿಂದಿರುಗುವ ಆಲೋಚನೆಯಲ್ಲಿದ್ದೇವೆ. ಕರ್ನಾಟಕದ ಹೆಲ್ಪ್ ಲೈನ್ ಕೂಡ ಇದೆ ಎಂದು ಯಾತ್ರಾರ್ಥಿ ಯಶೋಧರ ಕರ್ಬೆಟ್ಟು “ಉದಯವಾಣಿ’ಗೆ ತಿಳಿಸಿದ್ದಾರೆ.

ಸುಳ್ಯದ ತಂಡವೂ ಸುರಕ್ಷಿತ
ಸುಳ್ಯ: ಅಮರನಾಥ ಯಾತ್ರೆ ಕೈಗೊಂಡಿರುವ ನಾವೂ ಸುರಕ್ಷಿತ ರಾಗಿದ್ದೇವೆ. ತಂಡದಲ್ಲಿರುವ 11 ಮಂದಿಯೂ ಸುರಕ್ಷಿತವಾಗಿ ಜಮ್ಮು ಕಾಶ್ಮೀರ ಸೇರಿದ್ದೇವೆ ಎಂದು ಸುಳ್ಯದ ತಂಡದವರು ಮಾಹಿತಿ ನೀಡಿದ್ದಾರೆ.ಯಾತ್ರೆ ಮುಗಿಸಿಯೇ ಮರಳುತ್ತೇವೆ ಎಂದು ಯಾತ್ರೆಯ ನೇತೃತ್ವ ವಹಿಸಿಕೊಂಡಿರುವ ಸಂಘಟಕರು ಸಾಮಾಜಿಕ ಜಾಲತಾಣದ ಮೂಲಕ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next