ಶ್ರೀನಗರ: ಅಮರನಾಥದ ಗುಹೆಯಲ್ಲಿ ಹಿಮದಿಂದ ಉಂಟಾಗಿರುವ ಶಿವಲಿಂಗ ಕರಗಲು ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸಕ್ತ ವರ್ಷ ಉತ್ತರ ಭಾರತದ ಹೆಚ್ಚಿನ ಸ್ಥಳಗಳಲ್ಲಿ ಉಷ್ಣ ಮಾರುತದ ಛಾಯೆ ಬಿರುಸಾಗಿ ಇದ್ದದ್ದು ಈ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮೇನಿಂದ ಹಿಮದಲ್ಲಿ ಶಿವಲಿಂಗ ಉಂಟಾಗಲು ಆರಂಭವಾಗುತ್ತದೆ. ಅದು ಆಗಸ್ಟ್ ವರೆಗೆ ಹಾಗೆಯೇ ಇರುತ್ತದೆ. ಅಮರನಾಥ ಯಾತ್ರೆಯ ಮುಕ್ತಾಯದ ಬಳಿಕ ನಿಧಾನವಾಗಿ ಶಿವಲಿಂಗ ಕರಗಲು ಆರಂಭವಾಗುತ್ತದೆ. ಆದರೆ ಈ ಬಾರಿ ಜಾಗತಿಕ ತಾಪಮಾನ ವ್ಯತ್ಯಯದಿಂದ ಜುಲೈನಲ್ಲಿ ಶಿವಲಿಂಗ ಕರಗಲು ಆರಂಭಿಸಿದೆ.
ಭಾರೀ ಮಳೆ: ಯಾತ್ರೆ ತಾತ್ಕಾಲಿಕ ಸ್ಥಗಿತ!
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ ಆಗುತ್ತಿದ್ದು, ಅಮರನಾಥ ಯಾತ್ರೆ ಸಾಗುವ 2 ಮಾರ್ಗಗಳಲ್ಲೂ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆ ಯಲ್ಲಿ ಯಾತ್ರೆಯನ್ನು ಶನಿವಾರ ತಾತ್ಕಾಲಿ ಕವಾಗಿ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ರಾತ್ರಿಯಿಂದ ಮಳೆ ಹೆಚ್ಚಾಗಿದ್ದಕ್ಕೆ ಮುಂಜಾಗ್ರತೆಯಾಗಿ ಕ್ರಮ ಕೈಗೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.