Advertisement

ರಾಜ್ಯದ ಅಮರನಾಥ ಯಾತ್ರಿಗಳು ಸುರಕ್ಷಿತ: ಸಚಿವ ಎಚ್.ಕೆ. ಪಾಟೀಲ

03:04 PM Jul 09, 2023 | Team Udayavani |

ಗದಗ: ಅಮರನಾಥ ಯಾತ್ರೆಗೆ ಗದಗ ಜಿಲ್ಲೆ ಸೇರಿ ರಾಜ್ಯದಿಂದ ತೆರಳಿದ್ದ 300ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅವರನ್ನು ಆದಷ್ಟು ಬೇಗ ಕರೆ ತರುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಹಾಗೂ ಗುಡ್ಡ ಕುಸಿತದಿಂದಾಗಿ ಜಿಲ್ಲೆಯ 23 ಯಾತ್ರಿಗಳು ಪಂಚತರಣಿ ಬೇಸ್ ಕ್ಯಾಂಪ್ ಕಳೆದರಡು ದಿನಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ. ಕೆಲವರ ಜತೆ ನಾನು ಮಾತನಾಡಿದ್ದೇನೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂದರು.

ರವಿವಾರ ಬೆಳಗ್ಗೆ ತೊಂದರೆಯಲ್ಲಿದ್ದ ಪಂಚತರಣಿ ಕ್ಯಾಂಪ್ ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ನೀಲ್ ಗ್ರಥ ಕ್ಯಾಂಪ್ ಗೆ ಲಿಫ್ಟ್ ಮಾಡಲಾಗುತ್ತಿದ್ದು, ಈಗಾಗಲೇ ಕೆಲವು ಯಾತ್ರಿಗಳು ನೀಲ್ ಗ್ರಥ್ ಕ್ಯಾಂಪ್ ಗೆ ಬಂದಿಳಿದಿದ್ದಾರೆ. ಪ್ರತಿ 8 ನಿಮಿಷಕ್ಕೊಂದರಂತೆ ಹೆಲಿಕಾಪ್ಟರ್ ಗಳು ರೆಸ್ಕ್ಯೂ ಕಾರ್ಯ ನಡೆಸುತ್ತಿವೆ ಎಂದರು.

ಗದಗ ಜಿಲ್ಲೆಯ ಎಲ್ಲ 23 ಯಾತ್ರಿಗಳು ರಾತ್ರಿಯೊಳಗಾಗಿ ನೀಲ್ ಗ್ರಥ್ ಕ್ಯಾಂಪ್ ನಿಂದ ಶ್ರೀನಗರಕ್ಕೆ ಆಗಮಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಹವಾಮಾನ ವೈಪರೀತ್ಯ ಹಾಗೂ ಅತೀಯಾದ ಚಳಿಯಿಂದಾಗಿ ಸಮಸ್ಯೆಯಾಗಿತ್ತು. ಅಮರನಾಥ ಆಡಳಿತ ಮಂಡಳಿ, ಮಿಲಿಟರಿ ಅಧಿಕಾರಿಗಳು ಎಲ್ಲರಿಗೂ ಅಗತ್ಯ ನೆರವನ್ನು ನೀಡಿದ್ದು ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು.

ಇದನ್ನೂ ಓದಿ:ಎಚ್ಚರ ಎಕ್ಸ್‌ಪ್ರೆಸ್‌ ವೇನಲ್ಲಿ ಯಾಮಾರಿದ್ರೆ ದಂಡ!

Advertisement

ಅಲ್ಲಿರುವ ಯಾರಿಗೂ ಯಾವುದೇ ತೊಂದರೆ ಇಲ್ಲ. ಹಾಗಾಗಿ ಯಾರೂ ಭಯ ಪಡುವಂತ ಅವಶ್ಯಕತೆ ಇಲ್ಲ. ಯಾತ್ರಾರ್ಥಿಗಳಿಗೆ ಮೆಡಿಕಲ್ ಹಾಗೂ ಹಾಸಿಗೆ ಹೊದಿಕೆ ನೀಡಿ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.

ರವಿವಾರ ಬೆಳಗ್ಗೆ ನಾನು ತೊಂದರೆಯಲ್ಲಿದ್ದ ವಿನೋದ ಅನ್ನುವವರ ಜತೆ ನಾನು ಮಾತನಾಡಿದ್ದೇನೆ. ರಾಜ್ಯ ಸರಕಾರದ ಹಿರಿಯ ಅಧಿಕಾರಿ ರಶ್ಮಿ ಮಹೇಶ ಹಾಗೂ ಇನ್ನೋರ್ವ ಹಿರಿಯ ಅಧಿಕಾರಿ ಸುನೀಲಕುಮಾರ ಶ್ರೀನಗರ ತಲುಪಿದ್ದಾರೆ. ನಾಲ್ಕೈದು ದಿನಗಳಲ್ಲಿ ಅವರೆಲ್ಲರೂ ಸೇಫ್ ಆಗಿ ಜಿಲ್ಲೆಗೆ ಮರಳಿ ಬರುತ್ತಾರೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next