ಛತ್ತೀಸ್ ಘಡ್ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವಲಿನ್ ಥ್ರೋ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವತಃ ತಾವೇ ಅಡುಗೆ ಮಾಡಿ ಬಳಹಿಸಿದ್ದು, ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ‘’ಮನಿ ಹೈಸ್ಟ್’’ ಜಗತ್ತನ್ನೇ ದೋಚಿಬಿಟ್ಟ ಖದೀಮರ ಕತೆ…!
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸಾಧನೆಗೈದ ಪಂಜಾಬ್ ಕ್ರೀಡಾಪಟುಗಳಿಗೆ ಕ್ಯಾ.ಅಮರಿಂದರ್ ಸಿಂಗ್ ಭರ್ಜರಿ ಔತಣಕೂಟ ಆಯೋಜಿಸಿದ್ದರು. ವಿವಿಧ ಬಗೆಯ ಅಡುಗೆಯನ್ನು ಸ್ವತಃ ತಾವೇ ಮಾಡಿ, ಕ್ರೀಡಾಪಟಗಳಿಗೆ ಬಡಿಸಿದ್ದು, ವಿಶೇಷ.
ಚಿನ್ನದ ಹುಡುಗ ನೀರಜ್ ಚೋಪ್ರಾ ಗೆ ಅಡುಗೆ ಬಡಿಸಿದ ವೀಡಿಯೋವನ್ನು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅವರು, ‘ಬೆಳಗ್ಗೆ 11 ಗಂಟೆಯಿಂದ ಸಂಜೆ 5 ರವರೆಗೆ ಅಡುಗೆಯನ್ನು ಮಾಡಿದ್ದೇವೆ. ದೇಶಕ್ಕಾಗಿ ಗೆಲುವು ತಂದುಕೊಡಲು ನಮ್ಮ ಕ್ರೀಡಾಪಟುಗಳು ತುಂಬಾ ಶ್ರಮ ಪಟ್ಟಿದ್ದಾರೆ. ಅವರ ಜೊತೆಗಿನ ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆದಿದ್ದೇವೆ. ಅವರಿಗಾಗಿ ನಾವು ಏನೂ ಮಾಡಿದರು ಕಡಿಮೆಎಂದು ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಔತಣಕೂಟದಲ್ಲಿ ಪುಲಾವ್, ಮಟನ್ ಖಾರಾ ಪಿಶೋರಿ, ಲಾಂಗ್ ಎಲೈಚಿ ಚಿಕನ್ ಮತ್ತು ದಾಲ್ ಮಸ್ರಿ, ಚಿಕನ್, ಆಲೂ ಮತ್ತು ಜರ್ದಾ ಅಕ್ಕಿ ಸೇರಿ ಬಗೆ ಬಗೆಯ ಅಡುಗೆಗಳಿದ್ದವು. ಇನ್ನು, ಈ ಹಿಂದೆ ಅಮರಿಂದರ್ ಸಿಂಗ್ ಟೋಕಿಓ ಒಲಿಂಪಿಕ್ಸ ನಲ್ಲಿ ಪದಕ ಗೆದ್ದವರೊಂದಿಗೆ ಔತಣಕೂಟ ಏರ್ಪಡಿಸಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ : ಪ್ರತಿಭಟನೆಯ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನಿಗಳ ಅಮಾನುಷ ಹಲ್ಲೆ