Advertisement

ಕಾಂಗ್ರೆಸ್ ಕಾರ್ಯಕರ್ತರ ಟಾರ್ಗೆಟ್ : ಠಾಣೆಯ ಮುಂದೆ ಶಾಸಕ ಅಮರೇಗೌಡ ಪಾಟೀಲ ಏಕಾಏಕಿ ಧರಣಿ

09:23 PM Jul 16, 2022 | Team Udayavani |

ಕುಷ್ಟಗಿ : ಕಾಂಗ್ರೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವ ಕುಷ್ಟಗಿ ಸಿಪಿಐ ಏಕಪಕ್ಷೀಯ ವರ್ತನೆಗೆ ಬೇಸತ್ತ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಪೊಲೀಸ್ ಠಾಣೆಯ ಮುಂದೆ ಏಕಾಏಕಿ ಧರಣಿ ನಡೆಸಿ ಪಿಎಸೈ, ಸಿಪಿಐ ವಿರುದ್ದ ಹರಿಹಾಯ್ದ ಪ್ರಸಂಗ ನಡೆಯಿತು

Advertisement

2017 ರಲ್ಲಿ ಅಕ್ರಮ ಮರಳು ಸಾಗಾಣಿಕೆ ಪ್ರಕರಣದಲ್ಲಿ ಗಂಗನಾಳ‌ ಗ್ರಾಮದ ಯಮನೂರಪ್ಪ ಯಡ್ಡೋಣಿ ಅವರು ಗಂಗನಾಳ ಗ್ರಾಮದ ನಾಗರಾಜ ಟ್ರಾಕ್ಟರ್ ಪ್ರಕರಣದ ಸಾಕ್ಷಿಯಾಗಿದ್ದರು. ಕುಷ್ಟಗಿ ಮೊದಲ ವಿಚಾರಣೆಯಲ್ಲಿ ಕೋರ್ಟ್ ಗೆ ಹೋಗಿರಲಿಲ್ಲ. ಎರಡನೇ ವಿಚಾರಣೆಯಲ್ಲಿ ಕೋರ್ಟಗೆ ಹಾಜರಾಗಿದ್ದರು. ಶನಿವಾರ ಮೂರನೇ ವಿಚಾರಣೆ ವಾರಂಟ್ ಸಂದರ್ಭದಲ್ಲಿ ಗಂಗನಾಳ ಮರಳು ಪ್ರಕರಣದ ಜೊತೆಗೆ ಬಿಜಕಲ್ ಪ್ರಕರಣದಲ್ಲಿ ಪೊಲೀಸರು ಹೆಸರು ಸೇರಿಸಿದ್ದಾರೆ ಈ‌ ವಿಚಾರಣೆ ಸಾಕ್ಷಿದಾರ ಯಮನೂರಪ್ಪ ಯಡ್ಡೋಣಿ ಸಹಿ ಮಾಡಿರಲಿಲ್ಲ ಎನ್ನುವ ವಾದ ಅವರದು.

ಇದನ್ನೇ ನೆಪ ಮಾಡಿಕೊಂಡ ವಾರಂಟ್ ನಿರ್ವಹಿಸುವ ಪೊಲೀಸ್ ಒಬ್ಬರು, ಪಿಎಸೈ ಗೆ ಸಾಕ್ಷಿದಾರ ಅವಾಶ್ಚವಾಗಿ ನಿಂದಿಸಿದ್ದಾನೆಂದು ತಿಳಿಸಿದ್ದರಂತೆ. ಇದಕ್ಕೆ ಪಿಎಸೈ ತಿಮ್ಮಣ್ಣ ನಾಯಕ್ ಏಕಾಏಕಿ ಯಮನೂರಪ್ಪ ಯಡ್ಡೋಣಿ ಮನೆಗೆ ಹೋಗಿ, ಯಮನೂರಪ್ಪ ಪತ್ನಿಗೆ ಬಾಯಿಗೆ ಬಂದು ಬೈದಾಡಿದ್ದರು.ಕುಷ್ಟಗಿಯಲ್ಲಿದ್ದ ಯಮನೂರಪ್ಪ ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಹೆದರಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಮನೆಗೆ ಬಂದು ನಡೆದ ವಿಷಯ ಹೇಳಿಕೊಂಡಿದ್ದ. ಈ ಬೆಳವಣಿಗೆಗೆ ಬೇಸತ್ತ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಕುಷ್ಟಗಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಗುರಿಯಾಗಿಸಿ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಹಿಂದೆ ಮಲ್ಕಾಪೂರ ಪ್ರಕರಣದಲ್ಲಿ‌ ಪೋಲೀಸರು ಬಿಜೆಪಿ ಪರವಾಗಿ ವರ್ತಿಸುತ್ತಿದ್ದಾರೆಂದು ನೇರವಾಗಿ ಪೊಲೀಸ್ ಠಾಣೆಗೆ ದೌಡಾಯಿಸಿ ಧ್ವಜದ ಕಟ್ಟೆಯಲ್ಲಿ ಧರಣಿ ಕುಳಿತರು. ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸಿಪಿಐ ಏಕಪಕ್ಷೀಯ ವರ್ತನೆಗೆ ಹರಿಹಾಯ್ದರಲ್ಲದೇ ನಮ್ಮ ಕಾರ್ಯಕರ್ತರ ತಂಟೆಗೆ ಬಂದರೆ ನೆಟ್ಟಗೆ ಇರುವುದಿಲ್ಲ ತಾಕೀತು ಮಾಡಿದರು.

ಇದನ್ನೂ ಓದಿ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೊದಲ ಪತ್ನಿ ನಿಧನ

ಇದೇ ವೇಳೆ ಪೊಲೀಸರು ಸಮರ್ಥನೆಗೆ‌‌ ಮುಂದಾಗಿದ್ದು ಕಂಡು ಬಂತು.‌ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು, ಇಂತಹ ಪ್ರಕರಣ ಪುನರಾವರ್ತನೆ ಆಗದಂತೆ ನಿಗಾವಹಿಸುವುದಾಗಿ ಭರವಸೆ ನೀಡಿದ ಮೇಲೆ ಅಲ್ಲಿಂದ ನಿರ್ಗಮಿಸಿದರು.

Advertisement

ಈ ಕುರಿತು ಪ್ರತಿಕ್ರಿಯಿಸಿದ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು, ಸದರಿ ವ್ಯಕ್ತಿಯ ಮೇಲೆ ವಾರಂಟ್ ಆಗಿತ್ತು ಆತನನ್ನು ಕರೆದುಕೊಂಡು ಬರಲು ಪಿಎಸೈ ಹೋಗಿದ್ದರು. ವಾರಂಟ್ ಆದ ಮೇಲೆ ಕೋರ್ಟಗೆ ಬರಲೇಬೇಕು. ಬಾರದೇ ಇದ್ದರೆ ಪೋಲೀಸರು ಹೋಗಬೇಕು. ಈ ವಾರಂಟ್ ವಿಷಯ ಮರೆ ಮಾಚಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆಗಿದೆ ಶಾಸಕರಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಸ್ಪಷ್ಟ ಪಡಿಸಿದರು.

ಶಾಸಕ‌ ಅಮರೇಗೌಡ ಪಾಟೀಲ ಬಯ್ಯಾಪೂರ ಪ್ರತಿಕ್ರಿಯಿಸಿ ಕುಷ್ಟಗಿ ಸಿಪಿಐ ಬಿಜೆಪಿ ಪರವಾಗಿದ್ದು, ನಮ್ಮ ಕಾರ್ಯಕರ್ತರ ವಿಷಯದಲ್ಲಿ ಒನ್ ಸೈಡ್ ಆಗಿದ್ದಾರೆ. ಸಿಪಿಐ ಕಾಂಗ್ರೆಸ್ ಕಾರ್ಯಕರ್ತರನ್ನು ವಿನಾಕಾರಣ ಹೊಡೆಯುವುದು ಬಡೆಯುವುದು ಮಾಡುತ್ತಿದ್ದು ನೀವೇಕೆ ಕಾಂಗ್ರೆಸ್ ನಲ್ಲಿ ಇದ್ದೀರಿ ಬಿಜೆಪಿಗೆ ಹೋಗಿ ಎಂದು ಹೆದರಿಸುತ್ತಿದ್ದರಿಂದ ಠಾಣೆಗೆ ಹೋಗಬೇಕಾಯಿತು. ಅಲ್ಲಿ ಸಿಪಿಐ ಯೊಂದಿಗೆ ವಾಗ್ವದವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next