Advertisement

ವೃಂಧಗಳ ವರ್ಗೀಕರಣ ನೌಕರರನ್ನು ಸ್ಥಳೀಯ ವೃಂಧಕ್ಕೆ ಹಂಚಿಕೆ ಮಾಡದಿರುವುದು ಅಕ್ಷಮ್ಯ : ಬಯ್ಯಾಪೂರ

07:00 PM Feb 01, 2022 | Team Udayavani |

ಕುಷ್ಟಗಿ : ಜಲ ಸಂಪನ್ಮೂಲ ಇಲಾಖೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೋರಿದ್ದು 371(ಜೆ) ನಿಯಮ ಜಾರಿಯಾಗಿ 7 ವರ್ಷಗಳಾದರೂ ವೃಂಧಗಳ ವರ್ಗೀಕರಣ ನೌಕರರನ್ನು ಸ್ಥಳೀಯ  ವೃಂಧಕ್ಕೆ ಹಂಚಿಕೆ ಮಾಡದಿರುವುದು ಅಕ್ಷಮ್ಯ ಅಪರಾಧವಾಗಿದೆ. 371 (ಜೆ) ನಿಯಮ ಪಾಲಿಸದಿರುವುದರಿಂದ ಕಲ್ಯಾಣ ಕರ್ನಾಟಕ ಉದ್ಯೋಗ ಆಕಾಂಕ್ಷಿಗಳ ಸಂವಿಧಾನಾತ್ಮಕ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Advertisement

ಜಲಸಂಪನ್ಮೂಲ ಇಲಾಖೆ ಪ್ರಧಾನ ಇಂಜೀನೀಯರಿಂಗ್ ಇಲಾಖೆಯ, ಜಲ ಸಂಪನ್ಮೂಲ ಅಭಿವೃಧ್ಧಿ ಸಂಸ್ಥೆ ಬೆಂಗಳೂರು ಇವರ ನೇಮಕಾತಿ ಪ್ರಾಧಿಕಾರವಾಗಿರುವ ಪ್ರಥಮ ದರ್ಜೆ ಸಹಾಯಕರು, ಶೀಘ್ರ ಲಿಪಿಕಾರ ಹುದ್ದೆಗಳನ್ನು 371 (ಜೆ ಅನ್ವಯ ಸ್ಥಲಿಯ ಹಾಗೂ ಮಿಕ್ಕುಳಿದ ವೃಂಧಗಳಿಗೆ ಹಂಚಿಕೆ ಮಾಡಿಲ್ಲ. ನಿಯಮದಂತೆ ಸ್ಥಳೀಯ ಮಿಕ್ಕುಳಿದ ವೃಂಧದ ಜೇಷ್ಠತೆ ಪಟ್ಟಿಯನ್ನು ತಯಾರಿಸದೇ ಇರುವುದು ಕಲ್ಯಾಣ ಕರ್ನಾಟಕ ಪ್ರದೇಶ ನೌಕರರಿಗೆ ಸಂವಿಧಾನ ಬದ್ದವಾಗಿ ಬಂದಂತಹ ಸೌಲಭ್ಯದಿಂದ ವಂಚಿತಗೊಳಿಸಿದಂತಾಗಿದೆ.

371 ಅಡಿಯಲ್ಲಿ ರಚಿಸಲಾದ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ ಕರ್ನಾಟಕ ನೇಮಕಾತಿಯ ಮೀಸಲಾತಿ) ಆದೇಶ 2013ರ ನಿಯಮದಂತೆ ನೇಮಕಾತಿ ಹಾಗೂ ಬಡ್ತಿಯಲ್ಲಿ ವೃಂದಗಳ ಆಧಾರದಲ್ಲಿ ಮೀಸಲಾತಿ ನಿಗದಿಗೊಳಿಸುವುದು, ಹುದ್ದೆಗಳ ವರ್ಗೀಕರಣ ಮಾಡುವುದು, ಪ್ರತ್ಯೇಕ ಜೇಷ್ಠತೆ ರಚಿಸುವುದು ಪ್ರತಿಯೊಂದು ಇಲಾಖೆಯ ಕರ್ತವ್ಯವಾಗಿದೆ. ಈ ಪ್ರಕರಣದಲ್ಲಿ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದು 371 (ಜೆ) ನಿಯಮ ಪಾಲಿಸಿಲ್ಲ 29-1-2014 ರ ಅಧಿಸೂಚನೆ ಯನ್ವಯ ಜಾರಿಯಾದ ಮೂರು ತಿಂಗಳ ಅನ್ವಯ ಈ ಎಲ್ಲಾ ಪ್ರಕ್ರಿಯೆಯನ್ನು ಮಾಡಬೇಕಿತ್ತು.

ಆದರೆ ಈಗ ಸದರಿ ಇಲಾಖೆ 371 (ಜೆ) ನಿಯಮಗಳಂತೆ ಸ್ಥಳೀಯ ಹಾಗೂ ಮಿಕ್ಕುಳಿದ ವೃಂಧದ ಜೇಷ್ಠತಾ ಪಟ್ಟಿಯನ್ನು ತಯಾರಿಸದೇ ಪ್ರಥಮ ದರ್ಜೆ ಸಹಾಯಕರು, ಹಾಗೂ ಶೀಘ್ರಲಿಪಿಕಾರ ಹುದ್ದೆಯಿಂದ ಅಧೀಕ್ಷರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಆರಂಭಿಸಿದೆ. ಸದರಿ ಹುದ್ದೆಗೆ ಬಡ್ತಿ ನೀಡುವುದನ್ನು ತಡೆ ಹಿಡಿದು ಸ್ಥಳೀಯ ನೌಕರರ ಹಾಗೂ ಮಿಕ್ಕುಳಿದ ವೃಂದದ ಜೇಷ್ಠತಾ ಪಟ್ಟಿಯನ್ನು ತಯಾರಿಸಿದ ನಂತರ ಬಡ್ತಿ ನೀಡುವಂತೆ ಸಂಬಂಧಿಸಿದ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next