Advertisement

ಬೆಲ್ಲದಿಂದ ಮಾಡಿದ ಸಿಹಿ ಪದಾರ್ಥಗಳು ಇಂದು ಸಿಗುವುದೇ ಅಪರೂಪ: ಶಾಸಕ ಅಮರೇಗೌಡ ಪಾಟೀಲ್

07:49 PM Aug 21, 2022 | Team Udayavani |

ದೋಟಿಹಾಳ: ಸಾಮಾನ್ಯವಾಗಿ ಇಂದು ಯಾವುದೇ ಸಭೆ ಸಮಾರಂಭಗಳಾಗಲಿ, ಹಬ್ಬ ಹರಿದಿನಗಳಲ್ಲಿ ಸಕ್ಕರೆಯಿಂದ ತಯಾರಿಸಿ ಸಿಹಿ ಪದಾರ್ಥಗಳು ನಾವು ಸೇವಿಸುತ್ತಿದ್ದೇವೆ. ಆದರೇ ಬೆಲ್ಲದಿಂದ ಮಾಡಿದ ಸಿಹಿ ಪದಾರ್ಥಗಳು ಸಿಗುವುದು ಅಪರೂಪ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.

Advertisement

ಅಡವಿಭಾವಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ತಹಶೀಲ್ದಾರ್ ಗುರುರಾಜ ಎಮ್ ಮತ್ತು ಸಿಡಿಪಿಒ ಅಮರೇಶ ಹಾವಿನ ಅವರು ಭೇಟಿ ನೀಡಿ ಪೌಷ್ಟಿಕ ಆಹಾರ ಪದಾರ್ಥಗಳು ವೀಕ್ಷಣೆ ಮಾಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಮತ್ತು ತಾಯಂದಿರಲ್ಲಿ ರಕ್ತದ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ ಇದಕ್ಕೆ ಮುಖ್ಯ ಕಾರಣ ಹೀಗಿನ ಆಹಾರ ಪದಾರ್ಥಗಳ ಸೇವನೇಯಿಂದ. ಈಗಿನ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಕಬ್ಬಿನ ಕಡಿಮೆ ಇಲ್ಲದಿರುವುದು. ಇಂದಿನ ಕಾಲದಲ್ಲಿ ಪ್ರತಿ ಮನೆಗಳಲ್ಲಿ ಬೆಳಗ್ಗೆ ಬೆಲ್ಲದ ಚಹಾ ಹಾಗೂ ಹಬ್ಬ ಹರಿದಿನಗಳಲ್ಲಿ ಬೆಲ್ಲದಿಂದ ಮಾಡಿದ ಸಿಹಿ ಪದಾರ್ಥಗಳು ಹೆಚ್ಚಾಗಿ ಜನ ಸೇವಿಸುತ್ತಿದರು. ಹೀಗಾಗಿ ಮಹಿಳೆಯರು 6-7 ಬಾರಿ ಹೆರಿಗೆಯಾದರು ಅವರಲ್ಲಿ ರಕ್ತದ ಕೊರತೆ ಕಂಡು ಬರುತ್ತಿದ್ದಿಲ್ಲ. ಆದರೆ ಹೀಗ ಮಹಿಳೆಯರಲ್ಲಿ ಮೊದಲ ಗರ್ಭಿಣಿಯ ಸಮಯದಲ್ಲಿಯೆ ರಕ್ತರದ ಕೊರತೆ ಕಂಡುಬರುತ್ತಿದೆ. ಕಾರಣ ಇಂದು ಯಾವುದೇ ಸಭೆ ಸಮಾರಂಭಗಳಾಗಲಿ, ಹಬ್ಬ ಹರಿದಿನಗಳಲ್ಲಿ ಸಕ್ಕರೆಯಿಂದ ತಯಾರಿಸಿ ಸಿಹಿ ಪದಾರ್ಥಗಳು ನಾವು ಸೇವಿಸುತ್ತಿದ್ದೇವೆ. ಈಗ ಸಾಮಾನ್ಯವಾಗಿ ಎಲ್ಲರಲ್ಲಿ ರಕ್ತದ ಕೊರತೆ ಇದೆ. ಇಂದು ಬೆಲ್ಲದಿಂದ ಮಾಡಿದ ಸಿಹಿ ಪದಾರ್ಥಗಳು ಕಣ್ಮರೆಯಾಗುತ್ತಿವೆ ಎಂದು ಹೇಳಿದರು.

ತಹಶೀಲ್ದಾರ್ ಗುರುರಾಜ ಎಮ್ ಅವರು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ತಾಯಿಯಂದಿರಿಗೆ ಯಾವುದೇ ಪೌಷ್ಟಿಕ ಆಹಾರದ ಕೊರತೆ ಆಗದಂತೆ  ಪ್ರತಿ ಹಳ್ಳಿಗಳಲ್ಲಿ ಗರ್ಭಿಣಿಯರಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಬೆಲ್ಲದಿಂದ ತಯಾರಿಸಿದ ಸಿಹಿ ಪದಾರ್ಥಗಳನ್ನು, ಮೊಳಕೆ ಒಡೆದ ಕಾಳು ಮತ್ತು ಪೌಷ್ಟಿಕ ಆಹಾರ ಪದಾರ್ಥಗಳನ್ನು ವೀಕ್ಷಣೆ ಮಾಡಿದರು.

Advertisement

ಈ ವೇಳೆ ಸಿಡಿಪಿಒ ಅಮರೇಶ ಹಾವಿನ, ಮುದೇನೂರ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶಾರದಾ ಪೂಜಾರಿ, ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದ್ದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next