ನಟ ಜಗ್ಗೇಶ್ ಪುತ್ರ ಗುರುರಾಜ್ ನಾಯಕರಾಗಿ ನಟಿಸುತ್ತಿರುವ “ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.
ಮೊದಲ ದೃಶ್ಯಕ್ಕೆ ನಟ ಜಗ್ಗೇಶ್ ಅವರು ಕ್ಲಾಪ್ ಮಾಡಿ ಚಿತ್ರರಂಗಕ್ಕೆ ಶುಭ ಕೋರಿದರು. ಅರಸೀಕೆರೆಯ ಪುನೀತ್ ಈ ಚಿತ್ರದ ನಿರ್ದೇಶಕರು. ಅಂಜನರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೇಖಾಶ್ರೀ ಚಿತ್ರದ ನಾಯಕಿ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ಪೊಲೀಸ್ ಸ್ಟೇಷನ್ ಸುತ್ತಮುತ್ತ ನಡೆಯುವ ಘಟನೆಗಳು ಚಿತ್ರದ ಪ್ರಮುಖ ಆಂಶಗಳಾಗಿವೆ.
ನಾಯಕ ಗುರುರಾಜ್ ಮಾತನಾಡುತ್ತಾ, “ಪುನೀತ್ ಕಳೆದ 3 ವರ್ಷಗಳಿಂದ ಈ ಕಥೆ ರೆಡಿ ಮಾಡಿಕೊಂಡಿದ್ದಾರೆ. ಒಂದು ಇಂಟರೆಸ್ಟಿಂಗ್ ಕಥೆ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದಾರೆ. ಈ ಕಥೆ ಕೇಳಿದ ತಕ್ಷಣ ಮಾಡಬೇಕು ಎನಿಸಿತು’ ಎಂದು ಹೇಳಿದರು.
ಮೈಸೂರು, ಬೆಂಗಳೂರು, ಮೈಸೂರು, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆ ಚಿತ್ರ ತಂಡಕ್ಕಿದೆ. ನಟಿ ಸುಧಾರಾಣಿ, ತಾರಾ, ನೀನಾಸಂ ಅಶ್ವಥ್, ಸಾಧುಕೋಕಿಲ ಮುಂತಾದವರು ಈ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.