Advertisement

ವೀರ ಯೋಧರನ್ನು ನಿತ್ಯವೂ ಸ್ಮರಿಸಿ: ಮೇಟಿ

06:19 PM Jul 27, 2022 | Team Udayavani |

ಬಾಗಲಕೋಟೆ: ದೇಶ ರಕ್ಷಣೆಗಾಗಿ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರಯೋಧರ ಬಲಿದಾನ ಮತ್ತು ಅವರ ಕುಟುಂಬದ ತ್ಯಾಗಕ್ಕೆ ಭಾರತೀಯರೆಲ್ಲರೂ ಸದಾ ಋಣಿಗಳು ಎಂದು ಮಾಜಿ ಸಚಿವ ಎಚ್‌.ವೈ. ಮೇಟಿ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಗಿಲ್‌ ವಿಜಯ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಗಡಿಯಲ್ಲಿ ಸೈನಿಕರು ತಮ್ಮ ಜೀವದ ಹಂಗು ತೊರೆದು, ನಮ್ಮೆಲ್ಲರ ರಕ್ಷಣೆ ಮಾಡುತ್ತಾರೆ. ನಾವೆಲ್ಲ ಅವರನ್ನು ನಿತ್ಯವೂ ಸ್ಮರಿಸಬೇಕು. ಅವರ ಸೇವೆ ಮರೆಯಲಾಗದು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್‌ ಹದ್ಲಿ ಮಾತನಾಡಿ, ಪಾಕಿಸ್ತಾನವನ್ನು ಸದೆಬಡಿದು ಕಾರ್ಗಿಲ್‌ನಲ್ಲಿ ಸಂಭ್ರಮದ ವಿಜಯಪತಾಕೆ ಹಾರಿಸಿದ ಸ್ಮರಣೀಯ ದಿನ. ನಮ್ಮ ದೇಶದ ಸೈನಿಕರು ತಮ್ಮ ಶೌರ್ಯ, ಸಾಹಸವನ್ನು ಮೆರೆದ ದಿನ. ಈ ಹೋರಾಟದಲ್ಲಿ ಮಡಿದು ಹುತಾತ್ಮರಾದ ನಮ್ಮ ಜಿಲ್ಲೆಯ ಯೋಧ ಶಿವಬಸಯ್ಯ ಕುಲಕರ್ಣಿ ಅವರು ನಮ್ಮ ಹೆಮ್ಮೆ. ಕಾರ್ಗಿಲ್‌ ಯುದ್ಧದಲ್ಲಿ ತನ್ನೆರಡು ಕೈಕಾಲು ಕಳೆದುಕೊಂಡ ವೀರ ಯೋಧ ರಂಗಪ್ಪ ಆಲೂರ ನಮ್ಮ ಮಧ್ಯೆಯೇ ಇರುವುದು ಮರೆಯಲಾಗದ ಅನುಭವ ಎಂದರು.

ಜಿಲ್ಲಾ ಮಾಧ್ಯಮ ವಕ್ತಾರ ಸಿಕಂದರ ಅಥಣಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಬ್ಲಾಕ್‌ ಅಧ್ಯಕ್ಷ ರಜಾಕ ಬೆಣೂರ, ಹಾಜಿಸಾಬ ದಂಡಿನ, ಚೆನ್ನವೀರ ಅಂಗಡಿ, ಬಾಬು ಇಟಗಿ, ಪ್ರೇಮನಾಥ ಗರಸಂಗಿ, ಮಲ್ಲು ಲಮಾಣಿ, ರೇಣುಕಾ ನ್ಯಾಮಗೌಡ, ಶೈಲಾ ಪಾಟೀಲ, ರೇಣುಕಾ ನಾರಾಯಣಕರ, ಜಮೇಲಾ ಮನಿಯಾರ, ಜೈಬುನಿ ಇಲಕಲ್ಲ, ಶಮಶಾದ ಗೋಡೆಸವಾರ, ಇಬ್ರಾಹಿಂ ಕಲಾದಗಿ, ಶಫೀಕ ದೊಡಕಟ್ಟಿ, ರಮೇಶ ಕೋಳಾರ, ಶಬ್ಬೀರ ನದಾಪ, ಅಮೀನಸಾಬ ರಕ್ಕಸಗಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next