Advertisement
ವಿರಾಸತ್ ಎಂದರೆ ವಿಶಾಲ ದೃಷ್ಟಿಕೋನ: ಡಾ| ಹೆಗ್ಗಡೆವಿರಾಸತ್ಗೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ವಿರಾಸತ್ ಎಂದರೆ ವಿಶಾಲ ದೃಷ್ಟಿಕೋನ, ಇಲ್ಲಿ ವಿಶ್ವವನ್ನೇ ಹೃದಯದಲ್ಲಿ ತುಂಬುವ ಹಬ್ಬವಾಗಿ ವಿರಾಸತ್ ಮೂಡಿಬಂದಿದೆ ಎಂದರು.
Related Articles
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ.ಜಿ.ಆರ್.ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ 30 ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 3 ಸಾವಿರದಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಒದಗಿಸಲಾಗುತ್ತಿದೆ. ಇಷ್ಟು ದೊಡ್ಡ ವಿದ್ಯಾ ಸಾಮ್ರಾಜ್ಯ ಕಟ್ಟಿರುವುದು ಡಾ| ಮೋಹನ್ ಆಳ್ವರ ಸಾಧನೆ. ಆಳ್ವಾಸ್ ವಿದ್ಯಾಸಂಸ್ಥೆ ಕರಾವಳಿಗೆ ವಜ್ರ ಕಿರೀಟ ಎಂದು ಶ್ಲಾಘಿಸಿದರು.
Advertisement
ಆಳ್ವರಿಂದಾಗಿ ಜೈನ ಕಾಶಿ ಎನಿಸಿದ್ದ ಮೂಡುಬಿದಿರೆ ಇಂದು ವಿದ್ಯಾಕಾಶಿ ಯಾಗಿ, ದೇಶದ ಸಾಂಸ್ಕೃತಿಕತೆಯನ್ನು ಬಿಂಬಿಸುವ ಕ್ಷೇತ್ರವಾಗಿ ಬೆಳೆದಿದೆ. ಮೇಲಾಗಿ 30 ವರ್ಷಗಳಿಂದ ವಿರಾಸತ್ ಕಾರ್ಯಕ್ರಮ ನಡೆಸುತ್ತಿರುವುದು ಮತ್ತೂಂದು ಹಿರಿಮೆ. ಈ ನೆಲದಲ್ಲಿ ವಿರಾಸತ್ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಬಣ್ಣಿಸಿದರು.
ಊರಿನ ಕಾರ್ಯಕ್ರಮ ಈಗ ರಾಷ್ಟ್ರೀಯ ಹಬ್ಬ: ಆಳ್ವಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅವರು ಪ್ರಸ್ತಾವಿಸಿ, ಎರಡು ದಶಕಗಳ ಹಿಂದೆ ಮೂಡುಬಿದಿರೆ ಊರಿಗಷ್ಟೇ ಸೀಮಿತ ವಾಗಿದ್ದ ವಿರಾಸತ್ ಇಂದು ರಾಷ್ಟ್ರೀಯ ಹಬ್ಬವಾಗಿದೆ. 500 ವಿದ್ಯಾರ್ಥಿಗಳು ವೀಕ್ಷಿಸುತ್ತಿದ್ದ ಹಬ್ಬಕ್ಕೆ ಈಗ 50 ಸಾವಿರ ಜನ ಬರುತ್ತಿದ್ದಾರೆ ಎಂದರು.
ಆಳ್ವಾಸ್ ವಿರಾಸತ್ 30ನೇ ವರ್ಷದ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ಹೊರತಂದಿರುವ “ಆಳ್ವಾಸ್ ಸಾಂಸ್ಕೃತಿಕ ವೈಭವ’ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದಂಪತಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ಆಳ್ವ, ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಆನುವಂಶಿಕ ಮೊಕ್ತೇಸರ ಲಕ್ಷ್ಮಿ ನಾರಾಯಣ ಆಸ್ರಣ್ಣ, ಶಾರದಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್ ಪಿಯು ಕಾಲೇಜಿನ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಆಳ್ವಾಸ್ ವಿರಾಸತ್ 2024ರ ಎರಡನೇ ದಿನವಾದ ಡಿ.11ರಂದು ಸಂಜೆ 5.45ರಿಂದ 6.30ರ ವರೆಗೆ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಜೆ 6.30ರಿಂದ 7.30ರ ವರೆಗೆ ಪಂ| ವೆಂಕಟೇಶ್ ಕುಮಾರ್ ಮತ್ತು ಬಳಗದಿಂದ ಹಿಂದೂಸ್ಥಾನಿ ಗಾಯನ. ರಾತ್ರಿ 7.45ರಿಂದ 9ರ ವರೆಗೆ ರಂಗ್‌ಮಲ್ಹರ್ ದಿ ಫೋಕ್ ಆರ್ಟ್ ಅವರಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ. ರಾತ್ರಿ 9ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಕಣ್ಮನ ಸೆಳೆದ ಸಾಂಸ್ಕೃತಿಕ ವೈಭವದ ಮೆರವಣಿಗೆ
ಮೂಡುಬಿದಿರೆ: ವಿರಾಸತ್‌ಗೆ ನಾಂದಿಯಾಗಿ 150ರಷ್ಟು ಸಾಂಸ್ಕೃತಿಕ ತಂಡಗಳಿಂದ ನಡೆದ ಭವ್ಯ ಸಾಂಸ್ಕೃತಿಕ ಮೆರವಣಿಗೆ ಮತ್ತು ಸಾಂಸ್ಕೃತಿಕ ರಥ ಹಾಗೂ ಅದಕ್ಕೆ ಆರತಿಯ ಗೌರವವು ಬೆರಗು, ಭಕ್ತಿಯ ಸಮ್ಮಿಳಿತ ಭಾವನೆ ಮೂಡಿಸಿತು. ದೇಶದ ಸಾಂಪ್ರದಾಯಿಕ, ಆಧುನಿಕ ಶೈಲಿ ಎರಡನ್ನೂ ಮೇಳೈಸಿ ಕೊಂಡು ಸೃಜನಶೀಲತೆಗೆ ಸಾಕ್ಷಿಯಾಗಿ ದೇಶದ ಉದ್ದಗಲದಿಂದ ಆಗಮಿ ಸಿದ ಕಲಾವಿದರ ಪ್ರದರ್ಶನ ನೆರೆದವ ರನ್ನು ನಿಬ್ಬೆರಗಾಗಿಸಿತು. ದೇಶದ ಸಮೃದ್ಧ ಸಾಂಸ್ಕೃತಿಕ ವೈವಿಧ್ಯಕ್ಕೆ ನಿದರ್ಶನವಾಗಿದ್ದ ಸುದೀರ್ಘ ಮೆರವಣಿಗೆಯನ್ನು ವನಜಾಕ್ಷಿ ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ಸೇರಿದ್ದ ಮಂದಿ ಕಣ್ತುಂಬಿಕೊಅಡರು. ಶೋಭಾಯಾತ್ರೆಯ ಕೊನೆಯಲ್ಲಿ ನಡೆದದ್ದು ಸಾಂಸ್ಕೃತಿಕ ರಥದ ಸಂಚಲನೆ. ಶಂಖ, ಕೊಂಬು, ಕಹಳೆಯ ತಂಡಗಳು ಮುನ್ನಡೆಯುತ್ತಾ ಬಂದರೆ ಕಲಶ ಹೊತ್ತ ಮಹಿಳೆಯರು, ವಿಪ್ರರ ವೇದಘೋಷ, ಪಂಢರಾಪುರದ ಭಜನ ತಂಡ, ಹರೇರಾಮ ಹರೇಕೃಷ್ಣ ಭಜನ ತಂಡ ಸಾಗಿ ಬಂತು. ವೇದಿಕೆಯ ಬಲಭಾಗದಿಂದ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ದ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು. ರಥದಲ್ಲಿ ಪೀಠಸ್ಥರಾದ ಶ್ರೀರಾಮ ಹಾಗೂ ಶ್ರೀ ಕೃಷ್ಣ ದೇವರ ಮೆರವಣಿಗೆಯೊಂದಿಗೆ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಶ್ರದ್ಧೆ ಭಕ್ತಿಯಿಂದ ನಡೆಯಿತು. ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರ ಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು. ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಧೂಪಾರತಿ, ಹಾಗೂ ಮುಖ್ಯ ಆರತಿ ಬೆಳಗುವ ಮೂಲಕ ಸೇರಿದವರಲ್ಲಿ ಭಕ್ತಿಗೌರವದ ಪುಳಕ ಮೂಡಿಸಿದರು. ಪಾರಂಪರಿಕ ಸೊಗಡು, ಸೃಜನಶೀಲತೆ, ವರ್ಣರಂಜಿತ ನಡೆ… ಈ ಮೂಲಕ ಸೇರಿದ್ದ 148 ತಂಡಗಳು ವೇದಿಕೆಯ ಮುಂದೆ ತಮ್ಮ ವಿಷಯ ವೈವಿಧ್ಯಗಳನ್ನು ಪ್ರದರ್ಶಿಸಿದವು. ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ, ಗುರುಪುರ ವಜ್ರದೇಹಿ ಮಠದ ರಾಜಶೇಖರಾ ನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ, ಕೊಂಡೆವೂರು, ಮಾಣಿಲ ಮೋಹನ ದಾಸ ಸ್ವಾಮೀಜಿ ಹಾಗೂ ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಲಕ್ಷಿ$¾à ನಾರಾಯಣ ಅಸ್ರಣ್ಣ ಅವರು ವೇದಿಕೆಯ ಬಲಭಾಗದಲ್ಲಿದ್ದ ರಥದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಚೆಂಡೆ, ಜಗ್ಗಲಿಗೆ, ಡೊಳ್ಳು, ನಾಸಿಕ್ ಬ್ಯಾಂಡ್ ಮತ್ತಿತರ ವಾದ್ಯಗಳ ಮೇಳಕ್ಕೆ ಸೇರಿದ್ದ ಜನ ಹರ್ಷೋದ್ಗಾರ ವ್ಯಕ್ತಪಡಿಸಿದರು. ಹುಲಿ ಕುಣಿತಕ್ಕಂತೂ ಆಸಕ್ತರು ಕುಳಿತಲ್ಲೇ ನಲಿದರು. ಜಾನಪದ, ಸಂಪ್ರದಾಯ, ಪುರಾಣ ಹಿನ್ನೆಲೆಯ ಯಕ್ಷಗಾನ, ಕಹಳೆ, ಕೊಡೆಗಳು, ಪೂರ್ಣಕುಂಭ, ನಾಗಸ್ವರ, ನಂದಿಧ್ವಜ, ಪೂಜಾಕುಣಿತ, ಆಂಜನೇಯ ವಾನರಸೇನೆ, ತಟ್ಟಿ ರಾಯ, ಮರಗಾಲು, ಕೇರಳದ ತೆಯ್ಯಂ, ಆಧುನಿಕತೆಯ ಮೂಸೆಯಲ್ಲ ರಳಿದ ಘಟೋತ್ಕಜ, ಕಿಂಗ್ ಕಾಂಗ್, ಮೀನು, ವಿಚಿತ್ರ ಮಾನವ, ಜೋಡಿ ಜಿಂಕೆ, ಶಿವ-ಆಘೋರಿಗಳು, ಅರ್ಧ ನಾರೀಶ್ವರ, ವಾರ್‌ಕ್ರಾಫ್ಟ್ , ಆಳ್ವಾಸ್ ವಿದ್ಯಾರ್ಥಿಗಳ ಶ್ರೀಲಂಕಾ ಜಾನಪದ ವೇಷ, ಏಂಜೆಲ್ಸ್, ಸಾಂತಾಕ್ಲಾಸ್, ಕಾರ್ಟೂನ್ ಗಳು ಇತ್ಯಾದಿ ಮನರಂಜಿಸಿದವು. ಚಿತ್ರ: ಸತೀಶ್ ಇರಾ