Advertisement
ಶಿಕ್ಷಣಕಾಶಿ ಮೂಡುಬಿದಿರೆಯ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಗುರುವಾರ ಸಂಜೆ 6 ಗಂಟೆಗೆ ಗುಜರಾತ್‌ನ ಒಸ್ಮಾನ್ ಮೀರ್ ಮತ್ತು ಬಳಗದಿಂದ ನಡೆದ “ಸಂಗೀತ ಲಹರಿ’ ಕಾರ್ಯಕ್ರಮ ಎರಡು ತಾಸು ಕಾಲ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಗಝಲ್, ಹಿಂದಿ, ಗುಜರಾತಿ ಹಾಡುಗಳ ಮೂಲಕ ಮೋಡಿ ಮಾಡುವ ಒಸ್ಮಾನ್ ಮೀರ್ ಮತ್ತು ಅವರ ತಂಡ ವೇದಿಕೆ ಹಂಚಿಕೊಳ್ಳುತಿದ್ದಂತೆಯೇ ಚಪ್ಪಾಳೆ ಮೂಲಕ ಸಂಗೀತಾಸಕ್ತರು ಸ್ವಾಗತಿಸಿದರು.
“ಮನ್ ಮೋರ್ ಬನಿ ತಾಂಗಟ್‌ಕರೇ, ಮನ್ ಮೋರ್ ಬನಿ ತಾಂಗಟ್‌ಕರೇ. ಡೋಲ್ ಬಾಜೆ…’ ಸಡಗರ. “ಬಂ ಬಂ ಬಂ, ಓ ತೂ ಮಾನೆ ಯ ಮಾನೆ ದಿಲ್ ದಾರಾ…ಆಸಾನ್ ತೇನು ರಬ್ ಮಾನಿಯಾ. ಖಾಲಿ ಖಾಲಿ ಜುಲೊಧೀಂಕಿ ಫಂದೇ ನಾ ಡಾಲೋ….ತುಮಾರಿ ಜವಾನಿ ತುಮ್ ಕೋ ಮುಬಾರಕ್, ಮಸ್ತ್ ಖಲಂದರ್… ಲಾಲ್ ಖಲಂದರ್..’ ಗಾಯನ ರಸದೌತಣ ನೀಡಿತು. ಕೊನೆಯಲ್ಲಿ ಹಾಡಿದ ಮಾ ತುಜೇ ಸಲಾಂ, ವಂದೇ ಮಾತರಂ ಹಾಡಿದಾಗ ಪ್ರೇಕ್ಷಕರೆಲ್ಲ ಮೊಬೈ ಲ್‌ನಲ್ಲಿ ಟಾರ್ಚ್ ಬೆಳಗಿದರು.
Related Articles
ಕಲಾವಿದರನ್ನು ಡಾ| ಎಂ.ಮೋಹನ್ ಆಳ್ವ, ಮುಸ್ತಫಾ, ಪಾರ್ಥಿವ್ ವಾಸ್, ಶ್ರೀಪತಿ ಭಟ್, ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಡಾ| ಮೋಹನ್ ಆಳ್ವ ರು ಗೌರವಿಸಿದರು.
Advertisement
ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳುಮೂಡುಬಿದಿರೆ: ಆಳ್ವಾಸ್ ವಿರಾಸತ್‌ನಲ್ಲಿ ಡಿ.13ರಂದು ಸಂಜೆ 5.45ಕ್ಕೆ ದೀಪ ಪ್ರಜ್ವಲನ ನಡೆದು, 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ. ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ “ಸೌಂಡ್ ಆಫ್ ಇಂಡಿಯ’, ರಾತ್ರಿ 8.15ರಿಂದ 9 ಗಂಟೆಯ ವರೆಗೆ ಅಶೀಮ್ ಬಂಧು ಭಟ್ಟಾಚಾರ್ಜಿ ಕೋಲ್ಕತಾ ಸಂಯೋಜನೆಯಲ್ಲಿ ತ್ರಿಪರ್ಣ – ಭರತನಾಟ್ಯ, ಒಡಿಸ್ಸಿ, ಕಥಕ್ ನೃತ್ಯ ಸಂಗಮ, 9 ಗಂಟೆಯಿಂದ ಕಾರ್ತಿಕ್ ಪರ್‌ಫಾರ್ಮಿಂಗ್ ಆರ್ಟ್ಸ್ ಬೆಂಗಳೂರಿನಿಂದ ನೃತ್ಯೋಲ್ಲಾಸ, ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ, 9.25ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.