Advertisement

ಆಲೂರು ಮೀನು ಮಾರುಕಟ್ಟೆ ನವೀಕರಣಕ್ಕೆ ಬೇಡಿಕೆ

02:31 PM Aug 09, 2022 | Team Udayavani |

ಆಲೂರು: ಇಲ್ಲಿರುವ ಮಹಿಳಾ ಮೀನು ಮಾರಾಟ ಮಾರುಕಟ್ಟೆಯ ಕಟ್ಟಡ ಶಿಥಿಲಗೊಂಡಿದ್ದು, ಮಾಡು ಸೋರುತ್ತಿದೆ. ಮಳೆ ನೀರು ಒಳಗೆ ಬೀಳುತ್ತಿದ್ದು, ವ್ಯಾಪಾರಸ್ಥ ಮಹಿಳೆಯರು, ಗ್ರಾಹಕರಿಗೆ ನಿತ್ಯವೂ ಕಿರಿಕಿರಿ ಉಂಟು ಮಾಡಿದೆ. ಆಲೂರಿನ ಈ ಮೀನು ಮಾರುಕಟ್ಟೆಯನ್ನು ನವೀಕರಣಗೊಳಿಸಬೇಕೆನ್ನುವ ಬೇಡಿಕೆ ವ್ಯಕ್ತವಾಗಿದೆ.

Advertisement

ಆಲೂರು ಗ್ರಾ.ಪಂ. ಮೀನು ಮಾರಾಟಕ್ಕಾಗಿ ಪೇಟೆ ಹೃದಯ ಭಾಗದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಿಸಿದ್ದು, ನಾಲ್ಕಾರು ದಶಕದಿಂದ ಮೀನು ಮಾರಾಟ ಮಾಡಿ ಮಹಿಳೆಯರು ಕುಟುಂಬ ನಿರ್ವಹಣೆ ಮಾಡಿಕೊಂಡಿದ್ದಾರೆ. ಆಲೂರು ಗ್ರಾ.ಪಂ. ಮೀನು ಮಾರುಕಟ್ಟೆ ತೆರಿಗೆ ಸಂಗ್ರಹಿಸುತ್ತಿದ್ದು, ಅದೇ ರೀತಿ ಇದರ ಅಭಿವೃದ್ಧಿಗೂ ಮುಂದಾಗಲಿ ಎನ್ನುವುದಾಗಿ ಮಹಿಳಾ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ಸರಕಾರ ಮೀನು ಮಾರಾಟ ಮಹಿಳೆಯರಿಗೆ ಕೋಲ್ಡ್‌ ಬಾಕ್ಸ್‌, ಆರ್ಥಿಕ ಸಹಕಾರ, ವಾಹನ ಮುಂತಾದ ವ್ಯವಸ್ಥೆ ಮೂಲಕ ಮಾರಾಟಕ್ಕೆ ಉತ್ತೇಜನ ನೀಡಿದರೆ, ಆಲೂರು ಗ್ರಾ.ಪಂ.ನಿಂದ ಮಾತ್ರ ನಮಗೆ ಅನ್ಯಾಯವಾಗಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.

ವ್ಯವಸ್ಥೆ ಸರಿಪಡಿಸಿ

ಇಲ್ಲಿನ ಮೀನು ಮಾರುಕಟ್ಟೆ ಕಟ್ಟಡವು ಶಿಥಿಲ ಗೊಂಡಿದ್ದು, ಮಳೆ ಬಂದರೆ ನೀರು ಒಳಗೆ ಬೀಳುತ್ತಿದೆ. ಮಹಿಳಾ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಶೌಚಾ ಲಯದ ವ್ಯವಸ್ಥೆಯೂ ಇಲ್ಲಿಲ್ಲ. ಆದಷ್ಟು ಬೇಗ ಈ ವ್ಯವಸ್ಥೆ ಸರಿಪಡಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ದುರಸ್ತಿಗೆ ಪ್ರಸ್ತಾವನೆ: ಮಾರುಕಟ್ಟೆಯ ಅಭಿವೃದ್ಧಿಗೆ ಈಗಾಗಲೇ ತಾಲೂಕು ಪಂಚಾಯತ್‌ ಸಹಿತ ಸಂಬಂಧ ಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಈಗ ಬೇಡಿಕೆಯಿರುವ ಶೌಚಾಲಯ ಪಂಚಾಯತ್‌ ನಿಂದ ನಿರ್ಮಿಸಿಕೊಡಲಾಗುವುದು. ಆಲೂರು ಪಂಚಾಯತ್‌ ಮೀನು ಮಾರುಕಟ್ಟೆಯಲ್ಲದೆ ಬೇರೆ ಕಡೆ ಮೀನು ಮಾರಾಟಕ್ಕೆ ಅವಕಾಶ ಕೊಟ್ಟಿರುವುದು ಹಿಂದಿನ ಆಡಳಿತ ವ್ಯವಸ್ಥೆಯಲ್ಲಿ. ಬೇರೆ ಯಾರೂ ಮೀನು ಮಾರಾಟ ಮಾಡಬಾರದು ಎಂದು ಹೇಳಲಿಕ್ಕೆ ಬರೋದಿಲ್ಲ. ಈ ಸಮಸ್ಯೆ ಸೌಹಾರ್ದವಾಗಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು. – ರವಿ ಶೆಟ್ಟಿ, ಉಪಾಧ್ಯಕ್ಷರು, ಆಲೂರು ಗ್ರಾ.ಪಂ

Advertisement

Udayavani is now on Telegram. Click here to join our channel and stay updated with the latest news.

Next