Advertisement

Sullia-Aranthodu; ಮಳೆ ಇಲ್ಲದಿದ್ದರೂ ಅರಣ್ಯದಿಂದ ಬರುತ್ತಿದೆ ಕೆಸರು ಮಿಶ್ರಿತ ನೀರು!

01:17 AM Aug 10, 2024 | Team Udayavani |

ಸುಳ್ಯ/ಅರಂತೋಡು: ಮಳೆ ಇಲ್ಲದಿದ್ದರೂ 3-4 ದಿನಗಳಿಂದ ಅರಣ್ಯ ಭಾಗದಿಂದ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದ್ದು, ಸುಳ್ಯ ಭಾಗದ ಜನರಲ್ಲಿ ಭೀತಿ ಉಂಟು ಮಾಡಿದೆ.

Advertisement

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರಿನ ಸುಳ್ಯ-ಬಂದಡ್ಕ ರಸ್ತೆಯ ಕನಕ್ಕೂರಿನಲ್ಲಿ ಮುಖ್ಯ ರಸ್ತೆಗೆ ಅರಣ್ಯ ಭಾಗದಿಂದ ನೀರು ಹರಿದುಬರುತ್ತಿದೆ. ಸಾಮಾನ್ಯ ದಿನಗಳಲ್ಲಿ ಈ ನೀರು ಸ್ವತ್ಛವಾಗಿರುತ್ತಿದ್ದು, 3-4 ದಿನಗಳಿಂದ ಕೆಸರು ಮಿಶ್ರಿತ ನೀರು ಬರುತ್ತಿದೆ.

ಮುಖ್ಯ ರಸ್ತೆಯಿಂದ ಸುಮಾರು 150-200 ಮೀ. ದೂರದ ಅರಣ್ಯ ಭಾಗದಲ್ಲಿ ಮಣ್ಣಿನಾಳದಿಂದ ಒರತೆಯಂತೆ ಬರುತ್ತಿದೆ. ಇದೇ ಪರಿಸರದ ಬೇರೆ ಕಡೆಗಳಲ್ಲಿ ಸ್ವತ್ಛ ನೀರು ಹರಿಯುತ್ತಿದೆ. ಮಳೆಗಾಲದಲ್ಲಿ ಮಾತ್ರವೇ ಇಲ್ಲಿ ಒರತೆ ನೀರು ಅರಣ್ಯ ಭಾಗದಿಂದ ಹರಿಯುತ್ತಿದ್ದು, ಮುಂದಕ್ಕೆ ಅದು ಪಯಸ್ವಿನಿಗೆ ಸೇರುತ್ತಿದೆ. ಆದರೆ ಈಗ ಮಳೆ ಕಡಿಮೆಯಾಗಿದ್ದರೂ ಕೆಸರು ಮಿಶ್ರಿತ ನೀರು ಹರಿದು ಬರುತ್ತಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ.

ಸ್ಥಳೀಯ ನಿವಾಸಿ ಶೀಲಾವತಿ ಅವರು ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿ, 2-3 ವರ್ಷಗಳ ಹಿಂದೆ ಇದೇ ರೀತಿ ಕೆಸರು ಮಿಶ್ರಿತ ನೀರು ಹರಿದು ಬರುತ್ತಿತ್ತು. ಆದರೆ ಈ ಬಾರಿ ಹೆಚ್ಚು ನೀರು ಬರುತ್ತಿದ್ದು, ಈ ಬಗ್ಗೆ ಗ್ರಾ.ಪಂ.ಗೆ ತಿಳಿಸಿದ್ದೇವೆ. ಗ್ರಾಮ ಆಡಳಿತಾಧಿಕಾರಿ ಮತ್ತಿತರರು ಬಂದು ಪರಿಶೀಲಿಸಿದ್ದಾರೆ ಎಂದಿದ್ದಾರೆ. ಕೆಸರು ಮಿಶ್ರಿತ ನೀರಿನ ಮೂಲದ ಬಗ್ಗೆ ತಜ್ಞರಿಂದ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಆಲೆಟ್ಟಿ ಗ್ರಾ.ಪಂ. ಸದಸ್ಯ ದಿನೇಶ್‌ ಕನಕ್ಕೂರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next