Advertisement

ಬದಲಿ ಇಂಧನ ಬಳಕೆ ಮಾಡಿದರೆ ದೇಶ ಐದು ವರ್ಷಗಳಲ್ಲಿ ನಂ1

06:13 PM Oct 08, 2021 | Team Udayavani |

ನವದೆಹಲಿ: ಬದಲಿ ಇಂಧನ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಅಳವಡಿಸಿಕೊಂಡರೆ ಮುಂದಿನ ಐದು ವರ್ಷಗಳಲ್ಲಿ ವಾಹನೋದ್ಯಮ ಕ್ಷೇತ್ರದಲ್ಲಿ ದೇಶ ನಂಬರ್‌-1 ಆಗಲಿದೆ. ಈ ನಿಟ್ಟಿನಲ್ಲಿ ಭಾರತದ ವಾಹನೋದ್ಯಮ ಮುಂಚೂಣಿಯಲ್ಲಿ ಇರಬೇಕು ಎನ್ನುವುದು ಕನಸು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿಕೊಂಡಿದ್ದಾರೆ.

Advertisement

ನವದೆಹಲಿಯಲ್ಲಿ “ಇಂಡಿಯಾ ಟುಡೇ ಕಾಂಕ್ಲೇವ್‌’ನಲ್ಲಿ ಶುಕ್ರವಾರ ಮಾತನಾಡಿದ ಅವರು, ಜಗತ್ತಿನ ವಾಹನೋದ್ಯಮಗಳ ಪ್ರಮುಖ ಕಂಪನಿಗಳು ದೇಶದಲ್ಲಿವೆ. ಅವುಗಳು ಬದಲಿ ಇಂಧನ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ಜಗತ್ತಿನಾದ್ಯಂತ ಹಲವು ದೇಶಗಳು ವಿದ್ಯುತ್‌ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಜಗತ್ತಿನ ವಿವಿಧ ದೇಶಗಳಲ್ಲಿ ವಿದ್ಯುತ್‌ ಕಾರುಗಳ ಮಾರಾಟ ಶೇ.140ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.

140ಕ್ಕೆ ಹೆಚ್ಚಿಸಬೇಕು:
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮತ್ತು ಎಕ್ಸ್‌ಪ್ರೆಸ್‌ ವೇಗಳಲ್ಲಿ ವಾಹನಗಳು ಚಲಿಸುವ ವೇಗವನ್ನು ಪ್ರತಿ ಗಂಟೆಗೆ 140 ಕಿಮೀಗೆ ಹೆಚ್ಚಿಸಬೇಕು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌, ಹೈಕೋರ್ಟ್‌ಗಳಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದಿದ್ದಾರೆ ಗಡ್ಕರಿ.

ಇದನ್ನೂ ಓದಿ:ಒತ್ತಡಗಳಿಗೆ ಮಣಿಯದೆ ಕ್ರಮ ಕೈಗೊಳ್ಳಲಾಗುವುದು : ಸಿಎಂ ಯೋಗಿ ಆದಿತ್ಯನಾಥ್

ಶ್ವಾನವೂ ಬರದು:
ಎಕ್ಸ್‌ಪ್ರೆಸ್‌ವೇ ಮತ್ತು ಹೆದ್ದಾರಿಗಳಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಅತ್ಯುತ್ತಮ ರೀತಿಯಲ್ಲಿ ತಡೆಗಳನ್ನು ನಿರ್ಮಿಸಲಾಗಿದೆ. ಹೀಗಾಗಿ, ಒಂದು ಶ್ವಾನ ಕೂಡ ಹೆದ್ದಾರಿಗೆ ಪ್ರವೇಶಿಸಿ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಮಾಡಲಾಗಿದೆ ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next