ಸುರತ್ಕಲ್ : ಇಲ್ಲಿ ಹೊಸ ಮಾರುಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ಹಳೆಯದನ್ನು ನೆಲಸಮಗೊಳಿಸಲಾಗುತ್ತಿದ್ದು, ಅಲ್ಲಿರುವ ವ್ಯಾಪಾರಿಗಳಿಗಾಗಿ ತಾತ್ಕಾಲಿಕ ಮಾರುಕಟ್ಟೆ ಪ್ರಾಂಗಣ ನಿರ್ಮಾ ಣಕ್ಕೆ ಶಾಸಕ ಬಾವಾ ಅವರು ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ತಾತ್ಕಾಲಿಕ ಮಾರುಕಟ್ಟೆಗಾಗಿ 1.80 ಕೋ.ರೂ. ಕಾದಿರಿಸಲಾಗಿದ್ದು, ತತ್‌ಕ್ಷಣದಿಂದ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ. ಸಾರ್ವಜನಿಕರು ಹೊಸ ಮಾರುಕಟ್ಟೆ ನಿರ್ಮಾಣವನ್ನು ಬೆಂಬಲಿಸಿದ್ದು, ಸುರತ್ಕಲ್ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ.
ಕೆಲವರು ಮಾತ್ರ ಸ್ವಾರ್ಥ ಉದ್ದೇಶದಿಂದ ಅಭಿವೃದ್ಧಿ ಪರ ಕಾಮಗಾರಿಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಹೊಸ ಯೋಜನೆಯನ್ನು ಈ ಭಾಗಕ್ಕೆ ತಂದು ಮಂಗಳೂರಿಗೆ ಪರ್ಯಾಯವಾಗಿ ಸುರತ್ಕಲ್ ನಗರವನ್ನು ಬೆಳೆಸಲಾಗುವುದು ಎಂದರು.
ಉತ್ತರ ವಲಯ ಕಾಂಗ್ರೆಸ್ ಉಸ್ತುವಾರಿ ಕಾರ್ಯಾಧ್ಯಕ್ಷ ಪುರುಷೋತ್ತಮ್ ಚಿತ್ರಾ ಪುರ, ಸ್ಥಳೀಯ ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಅಶೋಕ್ ಶೆಟ್ಟಿ ತಡಂಬೈಲ್, ಮಹಿಳಾ ಘಟಕದ ಶಕುಂತಳಾ ಕಾಮತ್, ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್, ಮುಡಾ ಸದಸ್ಯ ಕೇಶವ ಸನಿಲ್, ಮನಪಾ ಸದಸ್ಯ ಕುಮಾರ್ ಮೆಂಡನ್, ಮುಖಂಡರಾದ ಶರತ್ ಗುಡ್ಡಕೊಪ್ಲ , ಕರುಣಾಕರ್, ಗೋವರ್ಧನ್ ಶೆಟ್ಟಿಗಾರ್, ಭೋಜ ಶೆಟ್ಟಿ, ವೈ.ರಾಘವೇಂದ್ರ ರಾವ್, ಯುವ ಕಾಂಗ್ರೆಸ್ ಮುಖಂಡ ಗಿರೀಶ್ ಆಳ್ವ, ಶ್ರೀಧರ್ ಪಂಜ, ಗುಲ್ಜಾರ್ ಬಾನು, ಹಿಲ್ಡಾ ಆಳ್ವ, ಬಶೀರ್ ಬೈಕಂಪಾಡಿ, ಜಲೀಲ್ ಹುಸೈನ್ ಕಾಟಿಪಳ್ಳ , ಇಫ್ತಿಕಾರ್, ಮಹಿಳಾ ಕಾಂಗ್ರೆಸ್‌ನ ಆಶಾ ಶೆಟ್ಟಿ, ಸೇವಂತಿ, ಮಮತಾ ಶೆಟ್ಟಿ , ಜಯಂತಿ, ಲಕ್ಷ್ಮಿ, ಲೋಲಾಕ್ಷಿ, ಗುತ್ತಿಗೆದಾರ ಪುರುಷೋತ್ತಮ್ ಕುಲಾಲ್ ಕಲಾºವಿ, ಎಂಜಿನಿಯರ್ ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.