Advertisement
ಕೈ ಚೀಲ, ಪ್ಲೇಟ್, ಕಪ್, ಹೀಗೆ ಒಂದಲ್ಲ ಒಂದು ರೀತಿಯ ರೂಪ ತಾಳುವ ಪ್ಲಾಸ್ಟಿಕ್ ನಮ್ಮ ದಿನಬಳಕೆಯ ಅಗತ್ಯತೆಯಲ್ಲಿ ಸೇರಿಕೊಂಡಿದೆ. ಹೀಗಾಗಿ ಇದರ ನಿರ್ಮೂಲನೆಯೇ ಅಸಾಧ್ಯವೇನೋ ಎನ್ನುವ ಯೋಚನೆಯಲ್ಲಿರುವಾಗಲೇ ಭಾರತದ ಪಂಜಾಬ್ ಮೂಲದ ಸಿಡ್ನಿಯ ವಿದ್ಯಾರ್ಥಿನಿಯೊಬ್ಬಳು ನಡೆಸಿದ ಸಂಶೋಧನೆ ಜಗತ್ತಿನ ಗಮನ ಸೆಳೆದಿದೆ.
ಸೂಪರ್ ಮಾರ್ಕೆಟ್‌ಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಜನರು ಖರೀದಿ ಮಾಡುತ್ತಿರುವುದನ್ನು ನೋಡಿ ಈ ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಯೋಪ್ಲಾಸ್ಟಿಕ್ ಯಾಕೆ ತಯಾರಿ ಮಾಡಬಾರದು ಎನ್ನುವ ಯೋಚನೆ ಆಂಜ ಲೀ ನ ಳಿಗೆ ಹೊಳೆದಿತ್ತು. ಈ ನಿಟ್ಟಿನಲ್ಲಿ ಅವಿರತವಾಗಿ ಸಂಶೋಧನೆ ನಡೆಸಿ ಬಯೋಪ್ಲಾಸ್ಟಿಕ್ ತಯಾರಿ ಮಾಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
Related Articles
Advertisement
ಜನರಿಗೆ ಪ್ರಯೋಜನ ಕಾರಿಯಾ ಗುವುದು ಮಾತ್ರವಲ್ಲದೆ ಪರಿಸರಕ್ಕೆ ಹಾನಿ ಯನ್ನುಂಟು ಮಾಡದ ಯಾವುದಾದರೂ ವಸ್ತು ಇರಲೇಬೇಕೆಂದು ಆಲೋಚನೆ ಮಾಡಿದಾಗಲೇ ಹೊಳೆದದ್ದು ಬಯೋಡೀ ಗ್ರೇಡಬಲ್ ಪ್ಲಾಸ್ಟಿಕ್ ವಿಚಾರ ಎನ್ನುತ್ತಾಳೆ ಆಂಜಲೀನ. ಪ್ರಶಸ್ತಿಗಳು ಆಂಜಲೀನಳ ಈ ಅನ್ವೇಷಣೆಗೆ 2018ರಲ್ಲಿ ಇನೋವೇಟರ್ ಟು ಮಾರ್ಕೆಟ್ ಪ್ರಶಸ್ತಿ, ಬಿಲಿಟನ್ ಫೌಂಡೇಶನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಪ್ರಶಸ್ತಿಗಳು ದೊರತಿರುವುದಲ್ಲದೆ ಇಂಟೆಲ್ ಇಂಟರ್‌ನ್ಯಾಷನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್‌ನಲ್ಲಿ 81 ದೇಶಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ 4ನೇ ಸ್ಥಾನ ಪಡೆದಿದ್ದಾಳೆ. ಅಮೆರಿಕದ ಅರಿಜೋನ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನವನ್ನೂ ಗಳಿಸಿದ್ದಾಳೆ. ಟೆಡ್ ಟಾಕ್‌ನಲ್ಲಿ ತನ್ನ ಸಾಧನೆಯ ಪಯಣವನ್ನು ಎಲ್ಲರೊಂದಿಗೂ ಹಂಚಿಕೊಂಡಿರುವ ಆಂಜಲೀನಳ ಈ ಸಾಧನೆ ಇಂದಿನ ಯುವತಿಯರಿಗೆ ಬಹು ದೊಡ್ಡ ಸ್ಫೂರ್ತಿಯಾಗಿದೆ.
ತ್ರಿಷಾ ಶಂಕರ್, ಸಿಡ್ನಿ, ಆಸ್ಟ್ರೇಲಿಯ