Advertisement

Shimoga; ಈಗಾಗಲೇ ವಿಳಂಬವಾಗಿದೆ, ಆದಷ್ಟು ಬೇಗ ವಿಪಕ್ಷ ನಾಯಕ ಆಯ್ಕೆಯಾಗುತ್ತದೆ: ಬಿಎಸ್ ವೈ

03:59 PM Nov 03, 2023 | keerthan |

ಶಿವಮೊಗ್ಗ: ಆದಷ್ಟು ಬೇಗ ವಿಪಕ್ಷ ನಾಯಕ ಆಯ್ಕೆಯಾಗುತ್ತದೆ. ಎಲ್ಲರೂ ಅದೇ ಪ್ರಶ್ನೆ ಕೇಳುತ್ತಿದ್ದಾರೆ. ಈಗಾಗಲೇ ವಿಳಂಬವಾಗಿದೆ. ಆದಷ್ಟು ಬೇಗ ನೇಮಕವಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಭದ್ರಾವತಿ ವಿಐಎಸ್ ಎಲ್ ಶತಮಾನೋತ್ಸವ ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು, ಮೈಸೂರು ಮಹಾರಾಜರು ಆಗಮಿಸುತ್ತಾರೆ.  ನಮ್ಮ ಮನೆಗೆ ಮಹಾರಾಜರು ಊಟಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದರು.

ಬಿಜೆಪಿ ಬರ ಅಧ್ಯಯನ ಪ್ರವಾಸ ಆರಂಭ ವಿಚಾರಕ್ಕೆ ಮಾತನಾಡಿದ ಅವರು, ಇಂದಿನಿಂದ ಬರ ಅಧ್ಯಯನ ‌ಪ್ರವಾಸ ಆರಂಭವಾಗಿದೆ. ನಾನು ವಿಐಎಸ್ ಎಲ್ ಕಾರ್ಯಕ್ರಮವಿದ್ದ ಕಾರಣ ಹೋಗಿಲ್ಲ. ಎರಡು ದಿನದ ನಂತರ ಪ್ರವಾಸ ತಂಡ ಸೇರಿಕೊಳ್ಳುತ್ತೇನೆ ಎಂದರು.

ಈಶ್ವರಪ್ಪ ದೆಹಲಿ ಭೇಟಿ‌ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ದೆಹಲಿ ಭೇಟಿಯಲ್ಲಿ ಅಂತಹ ವಿಶೇಷ ಏನಿಲ್ಲ. ಅವರು ಸಭೆಗೆ ಕರೆದಿದ್ದರು ಹೋಗಿದ್ದಾರೆ ಅಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next