Advertisement
ಆದರೇ, ಆಲೂಗೆಡ್ಡೆ ಸಿಪ್ಪೆಯನ್ನು ಡಸ್ಟ್ ಬಿನ್ ಗೆ ಎಸೆಯುವ ಮೊದಲು ಒಮ್ಮೆ ಯೋಚಿಸಿ. ಆಲೂಗೆಡ್ಡೆ ಸಿಪ್ಪೆ ಅಪ್ರಯೋಜಕ ಎಂದು ನಿಮಗೆ ಅನ್ನಿಸಿದರೆ ಅದು ಅಪ್ಪಟ ಸುಳ್ಳು. ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೌಷ್ಟಿಕ ಅಂಶಗಳಿವೆ.
Related Articles
Advertisement
ನೀವು ಆಲೂಗೆಡ್ಡೆ ಸಿಪ್ಪೆಯನ್ನು ತೆಗೆದು ಆಲೂಗಡ್ಡೆಯನ್ನು ಸೇವಿಸುವಾಗ, ಆಲೂಗಡ್ಡೆ ಸರಳ ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿತವಾಗುತ್ತದೆ. ತಿಂದ ನಂತರ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಳ ಮಾಡುತ್ತದೆ. ಆದರೆ ಸಿಪ್ಪೆ ಸಮೇತ ಆಲೂಗಡ್ಡೆ ತಿನ್ನುವಾಗ, ದೇಹವು ಹೆಚ್ಚುವರಿ ಫೈಬರ್ ಅನ್ನು ಪಡೆಯುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ರಕ್ತದೊತ್ತಡ ನಿಯಂತ್ರಣಕ್ಕೆ ದಿ ಬೆಸ್ಟ್ ಆಲುಗಡ್ಡೆ ಸಿಪ್ಪೆ :
ಆಲೂಗಡ್ಡೆ ಸಿಪ್ಪೆ ಪೊಟ್ಯಾಸಿಯಮ್ ಯುಕ್ತವಾಗಿದೆ. ಪೊಟ್ಯಾಸಿಯಮ್ ಸೇವನೆಯಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಚರ್ಮ ಮತ್ತು ಕೂದಲಿಗೆ ಅಗ್ಗದ ಔಷಧಿ :
ಆಲೂಗಡ್ಡೆ ಸಿಪ್ಪೆಯಿಂದ, ನೀವು ಕಣ್ಣುಗಳ ಕೆಳಗೆ ಮೂಡುವ ಡಾರ್ಕ್ ಸರ್ಕಲ್ ನಿವಾರಿಸಬಹುದಾಗಿದೆ. ಇದಲ್ಲದೆ ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ಮೊಡವೆ ಮತ್ತು ಬ್ಲ್ಯಾಕ್ ಹೆಡ್ ಗಳಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಆಲೂಗೆಡ್ಡೆ ಸಿಪ್ಪೆ ಸಹ ನಿಮಗೆ ಸಹಕಾರಿಯಾಗಿದೆ. ಆಲೂಗೆಡ್ಡೆ ಸಿಪ್ಪೆಯನ್ನು ಪುಡಿಮಾಡಿ ಅದರ ಜ್ಯೂಸ್ ಅನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
ಆಲೂಗಡ್ಡೆ ಸಿಪ್ಪೆ ರಕ್ತಹೀನತೆಯಿಂದ ರಕ್ಷಣೆ ಮಾಡುತ್ತದೆ :
ರಕ್ತಹೀನತೆಯಿಂದ ಬಳಲುತ್ತಿರುವವರು ಆಲೂಗೆಡ್ಡೆ ಸಿಪ್ಪೆಯನ್ನು ಇತರ ಹಸಿರು ತರಕಾರಿಗಳೊಂದಿಗೆ ಸೇವಿಸುವುದು ಉತ್ತಮ. ಆಲೂಗಡ್ಡೆ ಸಿಪ್ಪೆಯಲ್ಲಿ ಕಬ್ಬಿಣದ ಅಂಶವಿದೆ, ಇದು ಕೆಂಪು ರಕ್ತ ಕಣಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಲಬದ್ದತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಆಲೂಗಡ್ಡೆ ಸಿಪ್ಪೆ :
ಮಲಬದ್ಧತೆಯ ಸಮಸ್ಯೆ ನಿವಾರಣೆ ಆಲೂಗೆಡ್ಡೆ ಸಿಪ್ಪೆಯಲ್ಲಿ ಫೈಬರ್ ಕೂಡ ಇದೆ, ಇದು ಚಯಾಪಚಯವನ್ನು ಸರಾಗೊಳಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಯವುದಕ್ಕೆ ಸಹಕಾರಿಯಾಗಿದೆ.
ಓದಿ : ಟ್ರಕ್ ಚಲಾಯಿಸುವಾಗ ಹೆಲ್ ಮೆಟ್ ಧರಿಸದ ಕಾರಣ 1000 ರೂ. ದಂಡ ವಿಧಿಸಿದ RTO