Advertisement

ಬಟಾಟೆ ಹರಟೆ

06:25 AM Nov 12, 2017 | Harsha Rao |

ಜರ್ಮನಿಯ ಡಾಮ್ಸಾrìಟ್‌ ಎಂಬ ಜಾಗಕ್ಕೆ ಹೋದಾಗ ನನ್ನ ಮಗನ ಜರ್ಮನ್‌ ಗೆಳೆಯನ ಮನೆಯಲ್ಲಿ ತಂಗಿ¨ªೆವು. ನಾವು ಸಸ್ಯಾಹಾರಿಗಳು ಎಂದು ಮೊದಲೇ ತಿಳಿಸಿ¨ªೆವು. ರಾತ್ರಿ ಊಟದ ಸಮಯ ಬಂದಾಗ “ನಾವು ಜರ್ಮನ್‌ ಸಸ್ಯಾಹಾರಿ ಭೋಜನವನ್ನು ಸಿದ್ಧಪಡಿಸಿದ್ದೇವೆ’ ಎಂದು ಮನೆಯೊಡತಿ ಹೇಳಿದರು. ಊಟಕ್ಕೆ ಕೂತಾಗ ಮೇಜಿನ ಮೇಲೆ ಇಡಿಯಾಗಿ ಸಿಪ್ಪೆಸಹಿತ ಬೇಯಿಸಿದ ಬಟಾಟೆಗಳು, ಗಟ್ಟಿಯಾದ ಮೊಸರಿಗೆ ಪರಿಮಳಯುಕ್ತ ಎಲೆಗಳನ್ನು ಹಾಕಿ ತಯಾರಿಸಿದ ಗೊಜ್ಜು ಮತ್ತು ಕತ್ತರಿಸಿದ ಹಣ್ಣುಗಳಿದ್ದವು. ಇದು ತಿಳಿದ ನಂತರ ಎಲ್ಲಿ ಹೋದರೂ ಹೊಟೇಲುಗಳಲ್ಲಿ ಬೇಯಿಸಿದ ಬಟಾಟೆ ಮತ್ತು ಬಿಳಿ ಬಣ್ಣದ ಹುಳಿ ಸಾಸ್‌ ನಮ್ಮ ಆಹಾರವಾಯಿತು.

Advertisement

ಭೂಗೋಳವಿಡೀ ಪ್ರಸಿದ್ಧವಾಗಿರುವ ಬಟಾಟೆ ಅಥವಾ ಆಲೂಗಡ್ಡೆಯನ್ನು ನೀಡುವ ಸಸ್ಯದ ವೈಜ್ಞಾನಿಕ ಹೆಸರು “ಸೊಲಾನಂ ಟ್ಯೂಬರೋಸಂ’. ಈ ಸಸ್ಯದ ಗಡ್ಡೆಗಳೇ ನಾವು ಸೇವಿಸುವ ಆಹಾರ. ಪ್ರಪಂಚದಲ್ಲಿ ವ್ಯಾಪಕವಾಗಿ ಬೆಳೆಯುವ ಆಹಾರ ಪದಾರ್ಥಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. (ಮೆಕ್ಕೆಜೋಳ, ಗೋಧಿ ಮತ್ತು ಅಕ್ಕಿ ಮೊದಲ ಮೂರು ಸ್ಥಾನಗಳಲ್ಲಿವೆ. ಮೊತ್ತಮೊದಲಿಗೆ ಮಾನವರು ಇದನ್ನು ಆಹಾರವಾಗಿ ಉಪಯೋಗಿಸತೊಡಗಿದ್ದು 7,000- 10,000 ವರ್ಷಗಳಷ್ಟು ಹಿಂದೆ, ಪೆರುದೇಶದಲ್ಲಿ. 16ನೇ ಶತಮಾನದ ಕೊನೆಯ ಭಾಗದಲ್ಲಿ ಇದು ಯುರೋಪ್‌ ಖಂಡದಲ್ಲಿ ಬೆಳೆಯುವ ಆಹಾರ ಪದಾರ್ಥವಾಯಿತು. ಕ್ರಿ.ಶ. 2014ರಲ್ಲಿ ಚೀನಾ ಮತ್ತು ಭಾರತ ದೇಶಗಳು ಪ್ರಪಂಚದ ಒಟ್ಟು ಉತ್ಪನ್ನದ 37 ಪ್ರತಿಶತ ಬೆಳೆದಿದ್ದವು.  ಆಂಗ್ಲ ಭಾಷೆಯಲ್ಲಿ “ಪೊಟ್ಯಾಟೊ’ ಎಂದು ಕರೆಯಲ್ಪಡುವ ಶಬ್ದ ಸ್ಪ್ಯಾನಿಶ್‌ ಭಾಷೆಯ “ಪಟಾಟ’ದಿಂದ ಬಂದ¨ªಾಗಿದೆ.

ಬಟಾಟೆ ಸಸ್ಯಗಳು ಸಾಧಾರಣವಾಗಿ ಎರಡು ಅಡಿಗಳಷ್ಟು ಎತ್ತರ ಬೆಳೆಯುತ್ತವೆ.  ಇವುಗಳು ಪ್ರಭೇದಕ್ಕೆ ಅನುಗುಣವಾಗಿ ಬಿಳಿ, ಗುಲಾಬಿ, ನೀಲಿ ಮತ್ತು ನೇರಳೆ ಬಣ್ಣದ ಹೂವುಗಳನ್ನು ಬಿಡುತ್ತವೆ. ಪರಾಗಸ್ಪರ್ಶ ತನ್ನಿಂದ ತಾನೇ ಅಥವಾ ದುಂಬಿಗಳ ಮುಖಾಂತರ ನಡೆಯುತ್ತದೆ. ಹೂಗಳರಳಿದ ನಂತರ ಗಿಡಗಳಲ್ಲಿ ಚಿಕ್ಕ ಹಸಿರು ಬಣ್ಣದ ಕಾಯಿಗಳು ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಕಾಯಿಯಲ್ಲಿಯೂ ಸಾಧಾರಣ 300ಕ್ಕೂ ಹೆಚ್ಚು ಬೀಜಗಳು ಇರುತ್ತವೆ. ಈ ಬೀಜಗಳಿಂದ ಹೊಸ ಪ್ರಭೇದದ ಸಸ್ಯಗಳನ್ನು ಬೆಳೆಯಲಾಗುತ್ತದೆ. ಭೂಗತ ಕಾಂಡಗಳ (ಸ್ಟೋಲ®Õ…) ತುದಿಗಳು ಕ್ಲಿಷ್ಟ ಎಲೆಗಳಿಂದ ತಯಾರಿಸಲ್ಪಟ್ಟ ಆಹಾರದಿಂದ ತುಂಬಿ ಮಣ್ಣಿನ ಮೇಲ್ಮೆ„ಗೆ ಸಮೀಪದಲ್ಲಿ ಗೆಡ್ಡೆಗಳಾಗುತ್ತವೆ. ಗೆಡ್ಡೆಗಳ ತುಣುಕುಗಳಿಂದಲೂ ಹೊಸ ಗಿಡಗಳನ್ನು ಉತ್ಪಾದಿಸಬಹುದು. ಜಾಗತಿಕ ಮಟ್ಟದಲ್ಲಿ ಸುಮಾರು 5000 ಪ್ರಭೇದಗಳು ಬೆಳೆಯುತ್ತವೆ. ಮಣ್ಣಿನ ಉಷ್ಣಾಂಶ ಮತ್ತು ತೇವಾಂಶ ಸರಿಯಾದ ಮಟ್ಟದಲ್ಲಿ ಇದ್ದರೆ ಇಳುವರಿ ಚೆನ್ನಾಗಿರುತ್ತದೆ. 

ಜಾಗತಿಕ ಉತ್ಪನ್ನದ ಮೂರನೇ ಎರಡರಷ್ಟು ಮನುಷ್ಯನ ಆಹಾರವಾಗಿ ಬಳಕೆಯಾಗುತ್ತದೆ. ಮೂರನೇ ಒಂದರಷ್ಟು ಇತರ ಕ್ಷೇತ್ರಗಳಲ್ಲಿ  ಉಪಯೋಗವಾಗುತ್ತದೆ.  ಶರ್ಕರಪಿಷ್ಟ, ಸಸಾರಜನಕ ಮತ್ತು “ಸಿ’ ಜೀವಸತ್ವಗಳಿಂದ ಸಮೃದ್ಧವಾಗಿರುವ ಈ ಗೆಡ್ಡೆಯು ತುಂಬಾ ರುಚಿಕರವಾದ ಖಾದ್ಯಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.  ಚಿ±Õ…, ಫ್ರೆಂಚ್‌ ಫ್ರೈ, ಮಸಾಲೆ ದೋಸೆ, ಸಮೋಸ, ಆಲೂ ಟಿಕ್ಕಿ, ಆಲೂ ಬೋಂಡಾ, ವಡಾ ಪಾವ್‌, ಆಲೂ ಸಾಂಬಾರುಗಳ ರುಚಿಗೆ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಮರುಳಾಗುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ಅವರವರದೇ ವಿಧಾನದಲ್ಲಿ ಇದನ್ನು ಬಳಸಿ ಖಾದ್ಯಗಳು ತಯಾರಾಗುತ್ತವೆ. ಸಾಕುಪ್ರಾಣಿಗಳ ಆಹಾರವಾಗಿಯೂ ಇದು ಉಪಯುಕ್ತ. ಕೆಲವು ಮದ್ಯಗಳ ತಯಾರಿಯಲ್ಲಿ ಬಳಸಲ್ಪಡುತ್ತದೆ. ಬಟಾಟೆಯ ಶರ್ಕರಪಿಷ್ಟವನ್ನು ಆಹಾರ ಸಂಸ್ಕರಣಾ ಘಟಕಗಳಲ್ಲಿ, ಬಟ್ಟೆಯ ಕಾರ್ಖಾನೆಗಳಲ್ಲಿ, ಪೇಪರ್‌ ಮತ್ತು ಬೋರ್ಡ್‌ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಕೊಳೆತ ಬಟಾಟೆಗಳಿಂದ ಪ್ಲಾಸ್ಟಿಕ್‌ ಮತ್ತು ಪ್ಯಾಕಿಂಗ್‌ ವಸ್ತುಗಳನ್ನು ತಯಾರಿಸಬಹುದೋ ಎನ್ನುವ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆ. ಇದರ ಸಿಪ್ಪೆಯನ್ನು ಜೇನುತುಪ್ಪದ ಜೊತೆಗೆ ಸುಟ್ಟ ಗಾಯಗಳ ಶಮನಕ್ಕಾಗಿ ಉಪಯೋಗಿಸುತ್ತಾರೆ.

ಬಟಾಟೆ ಗಿಡದಲ್ಲಿ ವಿಷಕಾರಕ ಪದಾರ್ಥಗಳು ಇವೆ- ಸೊಲನಿನ್‌ ಮತ್ತು ಚಾಕೊನಿನ್‌.  ಈ ಗ್ಲೆ çಕೋ ಆಲ್ಕಲಾಯಿಡ್‌ಗಳು ಎಲೆ, ಕಾಂಡ, ಹಣ್ಣುಗಳು, ಗಡ್ಡೆಯಲ್ಲಿ ಉತ್ಪನ್ನವಾಗುವ ಮೊಳಕೆಯಲ್ಲಿ ಹೇರಳವಾಗಿವೆ. ಆದರೆ ಬೇರು ಮತ್ತು ಗಡ್ಡೆಗಳಲ್ಲಿ ಇವು ಇರುವುದಿಲ್ಲ. ಸ್ವಲ್ಪ ಶೇಖರಿಸಿಟ್ಟ ಗಡ್ಡೆಗಳು ಹಸುರು ಬಣ್ಣಕ್ಕೆ ತಿರುಗಿದಾಗ ಈ ರಾಸಾಯನಿಕಗಳು ಉತ್ಪನ್ನವಾಗಿವೆ ಎಂದು ಅರ್ಥ. ಬೆಳಕಿಗೆ ಒಡ್ಡಿದಾಗ, ಗೆಡ್ಡೆಗೆ ಗಾಯವಾದಾಗ, ವಿಷಕಾರಕಗಳು ಉತ್ಪತ್ತಿಯಾಗುತ್ತವೆ. ಅತಿ ಹೆಚ್ಚು ತಾಪಮಾನದಲ್ಲಿ ಬೇಯಿಸಿದಾಗ ಇವುಗಳು ನಾಶವಾಗುತ್ತವೆ. ಈ ವಿಷಕಾರಕಗಳಿಂದ ತಲೆನೋವು, ಭೇದಿ, ಹೊಟ್ಟೆ ಸಂಕಟ ಉಂಟಾಗಬಹುದು. ತೀವ್ರವಾದಾಗ ಪ್ರಜ್ಞೆ ತಪ್ಪುವಿಕೆ ಮತ್ತು ಸಾವು ಸಂಭವಿಸಬಹುದು.

Advertisement

ಕೆಲವು ಕುತೂಹಲಕಾರಿ ವಿಷಯಗಳು
ಕ್ರಿ. ಶ. 1840ರ ಆಸುಪಾಸಿನಲ್ಲಿ ಇಡೀ ಯೂರೋಪ್‌ನಲ್ಲಿ ಇದರ ಬೆಳೆಗೆ ಒಂದು ಶಿಲೀಂಧ್ರ ರೋಗ ಹರಡಿ ವ್ಯಾಪಕವಾಗಿ ಬೆಳೆ ನಷ್ಟ ಉಂಟಾಯಿತು.  ಐರ್ಲೆಂಡ್‌ನ‌ ಜನರು ಆಹಾರಕ್ಕಾಗಿ ಇದರ ಮೇಲೆ ಅವಲಂಬಿತರಾಗಿದ್ದರಿಂದ ಒಂದು ಮಿಲಿಯದಷ್ಟು ಜನ ಜೀವ ಕಳೆದುಕೊಂಡರು, ಮತ್ತೂಂದು ಮಿಲಿಯ ಜನ ವಲಸೆ ಹೋದರು.

ಕ್ರಿ. ಶ. 1897-98ರಲ್ಲಿ ಅಲಾಸ್ಕಾದಲ್ಲಿ ಬಟಾಟೆಗಳು ತಮ್ಮ ತೂಕದ ಚಿನ್ನದಷ್ಟೇ ಬೆಲೆಬಾಳುತ್ತಿದ್ದವು. ಆ ಕಾಲದಲ್ಲಿ ಚಿನ್ನವು ಪೌಷ್ಟಿಕ ಆಹಾರಕ್ಕಿಂತ ಸುಲಭವಾಗಿ ಲಭ್ಯವಾಗುತ್ತಿತ್ತು.

ಅಕ್ಟೋಬರ್‌ 1995ರಲ್ಲಿ ಬಟಾಟೆಯನ್ನು ಮೊದಲ ಬಾರಿಗೆ ಆಗಸದಲ್ಲಿ ಬೆಳೆಯಲಾಯಿತು. ಗಗನಯಾತ್ರಿಗಳಿಗೆ ಆಹಾರ ಒದಗಿಸುವ ಉದ್ದೇಶದಿಂದ ಈ ಪ್ರಯೋಗವನ್ನು ಕೈಗೆತ್ತಿಕೊಳ್ಳಲಾಗಿತ್ತು.

– ಡಾ. ಉಮಾಮಹೇಶ್ವರಿ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next