Advertisement

Alnavar: ದೇವಿ ಆರಾಧನೆಯಿಂದ ಸುಖ-ಶಾಂತಿ

05:25 PM Oct 19, 2023 | Team Udayavani |

ಅಳ್ನಾವರ: ನವರಾತ್ರಿಯಲ್ಲಿ ನಡೆಯುವ ಶಕ್ತಿ ದೇವಿ ದುರ್ಗಾ ಮಾತಾ ಆರಾಧನೆಯಿಂದ ಸಮಾಜದಲ್ಲಿ ಸುಖ- ಶಾಂತಿ ಮೂಡಲು
ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

Advertisement

ಪಟೇಲ ಸಮಾಜದವರು ಇಲ್ಲಿನ ಉಮಾ ಭವನದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ದುರ್ಗಾಮಾತಾಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಮಾಜದ ಅಭ್ಯುದಯದಲ್ಲಿ ಪಟೇಲ ಸಮಾಜದ ಕೊಡುಗೆ ವಿಶಿಷ್ಟ ಎಂದರು.

ಗುಜರಾಥ ಮೂಲದ ಪಟೇಲ ಸಮಾಜದವರು ದೇಶದುದ್ದಗಲಕ್ಕೂ ವಿವಿದ ವ್ಯವಹಾರದಲ್ಲಿ ತೊಡಗಿದ್ದಾರೆ. ಈ ಸಮಾಜದವರು ಕಷ್ಟ ಜೀವಿಗಳು. ಆರ್ಥಿಕವಾಗಿ ಸದೃಢತೆ ಹೊಂದುವ ಮೂಲಕ ಸಮಾಜದ ಎಲ್ಲ ವರ್ಗದ ಜನರ ಜತೆ ಭಾವೈಕ್ಯತೆಯಿಂದ ಬೆರೆತು ಏಕತೆ ಬಿಂಬಿಸುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ ಎಂದರು.

ದೇವಿಯ ಆರಾಧನೆಯಿಂದ ಸಮಾಜದಲ್ಲಿ ಏಕತೆ ಮೂಡಲಿ, ಬಡತನ ಬೇರು ಸಮೇತ ಕಿತ್ತು ಹೋಗಲಿ. ಎಲ್ಲರಲ್ಲಿ ಸಂತಸ ಮನೆ ಮಾಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸುವೆ ಎಂದರು.

ಲಾಡ್‌ ಅವರಿಗೆ ಶಾಲು, ಮೈಸೂರು ಪೇಟಾ, ಹೂ ಹಣ್ಣು ನೀಡಿ ಸತ್ಕರಿಸಲಾಯಿತು. ಸಾಗುವಾನಿ ಕಟ್ಟಿಗೆಯಲ್ಲಿ ಕೆತ್ತಿದ ಪಟೇಲ ಸಮಾಜದ ಕುಲದೇವತೆ ಉಮಿಯಾ ಮಾತಾಜಿ ಅವರ ಸುಂದರ ಮೂರ್ತಿಯನ್ನು ಸಮಾಜದ ವತಿಯಿಂದ ಸಚಿವ್‌ ಲಾಡ್‌ ಅವರಿಗೆ
ಕಾಣಿಕೆ ನೀಡಲಾಯಿತು.

Advertisement

ತುಸು ಹೊತ್ತು ದಾಂಡಿಯಾ ಆಟ ಆಡಿ ಖುಷಿ ಪಟ್ಟ ಸಚಿವ ಲಾಡ್‌ ನಂತರ ಸಮಾಜದ ಯುವಕರ ಜತೆ ಸಂವಾದ ನಡೆಸಿದರು.
ವೇಗವಾಗಿ ಬೆಳೆಯುತ್ತಿರುವ ಪ್ರಪಂಚದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಭವಿಷ್ಯ ಕಟ್ಟಿಕೊಳ್ಳಿ ಎಂದರು.ಎಲ್ಲರ ಜತೆ ಗ್ರೂಪ್‌
ಫೋಟೋ ತೆಗೆದುಕೊಂಡರು.

ಸಮಾಜದ ಅಧ್ಯಕ್ಷ ಸೋಮಜಿ ಲಾಲಜಿ ಪಟೇಲ, ಛಗನಲಾಲ ಪೋಕಾರ, ಅಮೃತ ಪಟೇಲ, ತೇಜುಲಾಲ ಪಟೇಲ, ದೇವಜಿ ಪಟೇಲ, ಲದ್ದಾರಾಮ ಪಟೇಲ, ನಾಮಜಿಬಾಯಿ ಪಟೇಲ, ಕೇಶವ ಪಟೇಲ, ರಮಿಲಾಬೈನ್‌ ಪಟೇಲ, ಹನ್ಸಾಬೈನ್‌ ಪಟೇಲ, ಶಾಂತು ಪಟೇಲ, ನಾರಾಯಣ ಪಟೇಲ, ಚಂದುಲಾಲ ಪಟೇಲ, ಗೌತಮ ಪಟೇಲ, ಕೇತನ ಪಟೇಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next