Advertisement

ಎಲ್ಲೆಲ್ಲೂ ಒಂದೇ ಪ್ರಶ್ನೆ; ಗೆಲ್ಲೋರ್ಯಾರು?

11:54 AM May 14, 2018 | |

ಬೆಂಗಳೂರು: ಈ ಸಾರಿ ಯಾವ್‌ ಪಕ್ಷಾನೂ ಬಹುಮತ ಪಡಿಯಲ್ಲ ಅನಿಸ್ತಿದೆ.. ಹೌದು ಮಗ ಬಹುಶಃ ಜೆಡಿಎಸ್‌ನವರೇ ಕಿಂಗ್‌ ಮೇಕರ್‌ ಆಗ್ತಾರಾ ಅಂತ… ಚೆನ್ನಾಗಿದಿರಾ ಸರ್‌, ನಿಮ್‌ ಕಡೆಗೆ ಹೇಗಿದೆ ಎಲೆಕ್ಷನ್‌ ಟ್ರೆಂಡ್‌.. ಯಾರ್‌ ಗೆಲ್ತಾರೆ, ಯಾರು ಸೋಲ್ತಾರೆ?.. ಮಂಗಳವಾರ ಬೇಗ ಬಂದಿದ್ರೆ ಚೆನ್ನಾಗಿರೋದು, ಈ ಟೆನÒನ್‌ ತಡಿಯೋಕೆ ಆಗ್ತಿಲ್ಲ…

Advertisement

ನಗರದ ಹೋಟೆಲ್‌ಗ‌ಳು, ಕಾಂಡಿಮೆಂಟ್ಸ್‌, ಮದುವೆ ಸಮಾರಂಭ, ಮಾರುಕಟ್ಟೆಗಳು, ಬಸ್‌ನಿಲ್ದಾಣ, ಬಸ್‌ಗಳಲ್ಲಿ ಹೀಗೆ ಎಲ್ಲ ಕಡೆಗಳಲ್ಲಿ ಈಗ ಹೆಚ್ಚಾಗಿ ಕೇಳಿಬರುತ್ತಿರುವುದು ಇಂತಹದ್ದೇ ಚರ್ಚೆ. ರಾಜ್ಯ ವಿಧಾನಸಭಾ ಚುನಾವಣೆಯ 222 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದ್ದು, ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸುಳಿವು ನೀಡಿವೆ. ಹೀಗಾಗಿ ರಾಜಕೀಯದ ಬಗ್ಗೆ ಮಾತನಾಡುವವರು ತಮ್ಮದೇ ಆದ ದೃಷ್ಠಿಕೋನದಲ್ಲಿ ಚುನಾವಣಾ ಫ‌ಲಿತಾಂಶವನ್ನು ವಿಶ್ಲೇಷಿಸುತ್ತಿದ್ದಾರೆ.

ಮದುವೆ ಛತ್ರಗಳಲ್ಲಂತೂ ಒಂದೆಡೆ ಮದುವೆ ನಡೆಯುತ್ತಿದ್ದರೆ, ಮಧು-ವರ ಮತ್ತು ಅವರ ಕುಟುಂಬದವರನ್ನು ಹೊರತುಪಡಿಸಿ ಮದುವೆಗೆ ಬಂದವರಿಗೆ ರಾಜಕೀಯದ್ದೇ ಚಿಂತೆ. ಗುಂಪು ಗುಂಪಾಗಿ ಸೇರಿಕೊಂಡು ಫ‌ಲಿತಾಂಶದ ಬಗ್ಗೆ ಚರ್ಚಿಸುತ್ತಿದ್ದರು. ಮಂಗಳವಾರ ಯಾವ ಫ‌ಲಿತಾಂಶ ಬರಬಹುದು? ಮುಂದೇನು ಆಗಬಹುದು ಎಂಬುದನ್ನು ತಮ್ಮ ತಲೆಗೆ ಹೊಳೆದಂತೆ ಹೇಳಿಕೊಳ್ಳುತ್ತಿದ್ದರು.

“ಈ ಬಾರಿ ಬಿಜೆಪಿಗೆ ಜಾಸ್ತಿ ಸೀಟು ಬರುತ್ತೇ ನೋಡ್ತಿರು, ನನೆY ಯಾಕೋ ಡೌಟು. ಯಾರಿಗೂ ಬಹುಮತ ಬರಲ್ಲ, ಅತಂತ್ರ ಆಗುತ್ತೆ. ನನಗೆ ಅನ್ಸೋ ಪ್ರಕಾರ ಯಾವುದಾದರೂ ಒಂದು ಪಕ್ಷಕ್ಕೆ 100 ಸೀಟು ಬರುತ್ತೆ. ಅವ್ರು ಜೆಡಿಎಸ್‌ ಜತೆ ಮೈತ್ರಿ ಮಾಡ್ಕೊಂಡು ಸರ್ಕಾರ ಮಾಡ್ತಾರೆ ಅನ್ಸುತ್ತೆ. ಅದು ನೋಡೋಣ, ಮಂಗಳವಾರ ಗೊತ್ತಾಗುತ್ತೆ ಅಲ್ವಾ’ ಎಂದು ಒಂದು ಗುಂಪು ಚರ್ಚೆ ಮಾಡುತ್ತಿತ್ತು.

“ಪ್ರಧಾನಿ ಎಲ್ಲಿ ಹೋಗ್ತಾರೆ ಅಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ರಾಹುಲ್‌ ಎಲ್ಲಿ ಹೋಗ್ತಾರೋ ಅಲ್ಲಿ ಸೋಲು ಕಂಡಿತ. ಹೀಗಾಗಿ ಕರ್ನಾಟಕದಲ್ಲಿಯೂ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ. ಅದೇ ನಾನು ಅನ್ಕೊಳ್ತಿದ್ದೆ. ಆದರೂ, ಸಿದ್ದರಾಮಯ್ಯ ಬಿಜೆಪಿಯವರಿಗೆ ಟಫ್ ಫೈಟ್‌ ಕೊಟ್ರಾ… ನೀನು ಏನೇ ಹೇಳು ಈ ಬಾರಿಯ ಚುನಾವಣೆ ಮಜಾ ಕೊಡು¤ ಎಂಬ ಚರ್ಚೆ ಚಹಾ ಅಂಗಡಿಯೊಂದರ ಬಳಿ ನಡೆಯುತ್ತಿತ್ತು. 

Advertisement

“ನೋಡು ಗುರು, ಯಾರು ಎಷ್ಟೇ ಬಡ್ಕೊಂಡ್ರೂ ಸರ್ಕಾರ ಮಾಡೋಕೆ ನಮ್‌ ಕುಮಾರಣ್ಣನ ಸಹಾಯ ಬೇಕೇ ಬೇಕು. ಹೀಗಾಗಿ ನಮ್‌ ಕುಮಾರಣ್ಣ ಸಿಎಂ ಆಗೋದ್ರರಲ್ಲಿ ಡೌಟೇ ಇಲ್ಲ. ಹೀಗಾಗಿ ಯಾರು ಎಷ್ಟೇ ಸೀಟು ತಕೋಂಡ್ರು ಅವರ ಮನೆ ಬಾಗಿಲಿಗೆ ಬರೆಲà ಬೇಕು ಎಂಬುದು ಕಾಂಡಿಮೆಂಟ್ಸ್‌ ಒಂದರ ಮುಂದೆ ಯುವಕರ ಗುಂಪಿನ ಮಾತು.

“ನೀವು ಏನು ಬೇಕಾದ್ರೂ ಹೇಳಿ ಸರ್‌, ಸಿದ್ರಾಮಯ್ಯಗೆ ಸಿದ್ರಾಮಯ್ಯನೇ ಸಾಟಿ. ಏನ್‌ ಸರ್‌ ಇಡೀ ದೇಶನ ಗೆದ್ದ ಮೋದಿ ಮತ್ತೆ, ಅಮಿಷ್‌ ಶಾಗೆ ನೀರು ಕುಡಿಸಿದ್ರು. ನಿಜವಾಗಿಯೂ ಚಾಣಕ್ಯ ಅಂದ್ರೆ ಸಿದ್ರಾಮಯ್ಯ. ನೋಡ್ತಿರಿ ಈ ಬಾರಿ ಕಾಂಗ್ರೆಸ್‌ಗೆ ಜನರು ಸ್ಪಷ್ಟ ಬಹುಮತ ಕೊಡ್ತಾರೆ’ ಎಂಬುದು ಕೆಲವರ ಹೇಳಿಕೆ.

“ಚುನಾವಣೆ ಸೋಲ್ತಿàವಿ ಅಂತ ಕಾಂಗ್ರೆಸ್‌ ಅವರಿಗೆ ಗೊತ್ತಾಗಿದೆ. ಅದಕ್ಕೆ ಈಗ ದಲಿತರನ್ನ ಸಿಎಂ ಮಾಡ್ತೀನಿ ಅಂತಾವೆ. ಯಾಕೇಳು, ಸಿದ್ರಾಮಯ್ಯನ ಸಿಎಂ ಮಾಡ್ತೀವಿ ಅಂದ್ರೆ ದೇವೇಗೌಡ್ರು ಬಿಜೆಪಿ ಜತೆ ಮೈತ್ರಿ ಮಾಡ್ಕೊಳ್ತಾರೆ. ಅದ್ಕೆ ದಲಿತರನ್ನ ಮಾಡ್ತಿವಿ ಅಂದ್ರೆ ಗೌಡ್ರು ಸಹಕಾರ ಕೊಡ್ತಾರೆ ಅಂತ ಡ್ರಾಮಾ ಶುರು ಮಾಡಿದ್ದಾರೆ ನೋಡು’ ಎಂಬ ಮಾತುಗಳು ಸಂಜೆಯ ವೇಳೆ ಜೋರಾಗಿತ್ತು.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಜನತೆ ಮತ್ತೆ ಅದೇ ಪಕ್ಷಕ್ಕೆ ಮತ ಹಾಕುವ ತಪ್ಪು ಮಾಡಿರುವುದಿಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬಹುದು ಅನಿಸುತ್ತದೆ.
-ಸಂತೋಷ್‌

ನಗರದ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಜತೆಗೆ ಇಡೀ ರಾಜ್ಯದಲ್ಲಿ ಈ ಬಾರಿ ಬಿಜೆಪಿಗೆ ಬಹುಮತ ಲಭಿಸುವ ಲಕ್ಷಣಗಳಿವೆ. ಈಗಾಗಲೇ ಚುನಾವಣಾ ನಂತರದ ಬಹುತೇಕ ಸಮೀಕ್ಷೆಗಳು ಬಿಜೆಪಿಗೇ ಬಹುಮತ ಬರುತ್ತದೆ ಎಂದು ಹೇಳಿರುವುದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು.
-ಜೋಸೆಫ್

ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಬಾರಿ ವಾಚ್‌ ಉಡುಗೊರೆಯಾಗಿ ಪಡೆದ ಪ್ರಕರಣ, ಸಚಿವರ ಮೇಲೆ ಐಟಿ ದಾಳಿ ಪ್ರಕರಣಗಳನ್ನು ರಾಜ್ಯದ ಜನತೆ ಮರೆತಿಲ್ಲ. ಬಿಜೆಪಿಯಲ್ಲೂ ಭ್ರಷ್ಟರಿದ್ದಾರೆ. ಆದರೂ ಈ ಬಾರಿ ಬಿಜೆಪಿಗೆ ಬಹುಮತ ಬರುವ ನಿರೀಕ್ಷೆಯಿದೆ.
-ಶಿವ

Advertisement

Udayavani is now on Telegram. Click here to join our channel and stay updated with the latest news.

Next