Advertisement
ಮುಂಜಾಗ್ರತಾ ಕ್ರಮವಾಗಿ ಜಲಾಶಯದ 12 ಗೇಟುಗಳಿಂದ ಹಾಗೂ ವಿದ್ಯುದ್ದಾಗಾರಗಳಿಂದ ಬಸವಸಾಗರ ಜಲಾಶಯಕ್ಕೆ ನದಿ ಮೂಲಕ ನೀರು ಬಿಡಲಾಗುತ್ತಿದೆ.
Related Articles
Advertisement
ಈಗ ಅ.ಸಂಖ್ಯೆ-1ರಿಂದ 6ವರೆಗಿನ ಗೇಟುಗಳನ್ನು ಬಂದ್ ಮಾಡಿ 7ರಿಂದ 18 ಗೇಟ್‌ಗಳನ್ನು ಒಂದು ಮೀಟರ್‌ವರೆಗೆ ಎತ್ತರಿಸಿ ನೀರು ಹರಿಸುತ್ತಿದ್ದು ಇನ್ನುಳಿದ 8 ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 42,000 ಕ್ಯೂಸೆಕ್ ನೀರನ್ನು ಬಿಡುತ್ತಿರುವುದರಿಂದ ಅಲ್ಲಿನ ಎಲ್ಲ ಆರು ಘಟಕಗಳಿಂದ 270 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ನಾಳೆ ಒಳಗೆ ಒಳಹರಿವು ಇನ್ನಷ್ಟು ಹೆಚ್ಚಿದರೆ ಜಲಾಶಯದ ಗೇಟ್‌ಗಳ ಎತ್ತರ ಇನ್ನಷ್ಟು ಹೆಚ್ಚಿಸಿ ಹೊರಹರಿವು ಹೆಚ್ಚಿಸಲಾಗುವುದು ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳು ತಿಳಿಸಿವೆ.
ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಿಂದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ನೀರು ಹರಿಬಿಡುತ್ತಿರುವುದರಿಂದ ನಾರಾಯಣಪುರ ಬಸವಸಾಗರ ಹಿನ್ನೀರಿನಿಂದ ಬಾಧಿತಗೊಳ್ಳುತ್ತಿದ್ದ ಗ್ರಾಮಗಳ ಜಮೀನುಗಳ ರೈತರ ಜಮೀನುಗಳಲ್ಲಿ ನೀರು ನುಗ್ಗುವ ಆತಂಕ ಮೂಡುವಂತಾಗಿದೆ.
ಕಳೆದ ಬಾರಿ ಇದೇ ದಿನ ಜಲಾಶಯದಲ್ಲಿ 519.03 ಮೀ. ಎತ್ತರದಲ್ಲಿ 95.812 ಟಿಎಂಸಿ ಅಡಿ ಸಂಗ್ರಹವಾಗಿ ಒಳ ಹರಿವು 92,657 ಕ್ಯೂಸೆಕ್ ಜಲಾಶಯದಿಂದ 53,708 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು. ಆತಂಕದಲ್ಲಿ ರೈತರು: ಆಲಮಟ್ಟಿ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡುತ್ತಿರುವುದರಿಂದ ನದಿ ಪಾತ್ರದ ಜಿಲ್ಲೆಯ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಬಳಬಟ್ಟಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಮನಹಳ್ಳಿ, ನಾಗಸಂಪಗಿ, ನಾಯನೇಗಲಿ, ಸುತಗುಂಡಾರ ಸೇರಿ ಸುಮಾರು 20 ಗ್ರಾಮಗಳ ರೈತರ ಬೆಳೆ ಪ್ರತಿ ವರ್ಷವೂ ನೆರೆ ಹಾವಳಿಯಿಂದ ಹಾನಿಗೊಳಗಾಗುತ್ತಿದೆ.
• 12 ಗೇಟ್‌ಗಳಿಂದ ಹೊರಕ್ಕೆ ನೀರು
ರವಿವಾರ ಸಂಗ್ರಹಗೊಂಡಿದೆ 118.727 ಟಿಎಂಸಿ ಅಡಿ ನೀರು
• ಜಲಾಶಯದಿಂದ ಬಿಡಲಾಗುತ್ತಿದೆ 1,01,078 ಕ್ಯೂಸೆಕ್ ನೀರು
• ಹಿನ್ನೀರಿನಿಂದ ಬಾಧಿತ ಜಮೀನುಗಳಿಗೆ ನೀರು ನುಗ್ಗುವ ಆತಂಕ
• ಒಳಹರಿವು ಇನ್ನಷ್ಟು ಹೆಚ್ಚಿದರೆ ಹೊರಹರಿವು ಹೆಚ್ಚಳ ಸಾಧ್ಯತೆ
•ಶಂಕರ ಜಲ್ಲಿ