Advertisement

ಕೊಳಚೆಯ ಗೂಡಾದ ಆಲೂರು ಕಸಾಪ ಭವನ

06:00 PM Nov 03, 2021 | Team Udayavani |

ಆಲೂರು: ಕನ್ನಡ ಭಾಷೆಯನ್ನು ಉಳಿಸುವ ಬಗ್ಗೆ ವೇದಿಕೆಗಳಲ್ಲಿ ಉದ್ದುದ್ದ ಭಾಷಣ ಮಾಡುವ ಗಣ್ಯರೇ, ಭಾಷಾ ಬೆಳವಣಿಗೆಗೆ ಶ್ರಮಿಸುತ್ತೇವೆಂದು ಆಶ್ವಾಸನೆ ನೀಡುವ ಜನಪ್ರತಿನಿಧಿಗಳೇ, ಭಾಷೆ ಹೆಸರಲ್ಲಿ ಕೀರ್ತಿ ಸಂಪಾದಿಸಿದ ಕನ್ನಡಾಭಿಮಾನಿಗಳೇ, ಆಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಭವನದ ಸ್ಥಿತಿಯನ್ನು ಒಮ್ಮೆ ನೋಡಿ.

Advertisement

ಕಸ ಸಂಗ್ರಹ ಮಾಡುವ ಸ್ಥಿತಿಯಲ್ಲಿರುವ ಕಟ್ಟಡ, ಒಡೆದು ಹೋಗಿರುವ ಕಿಟಕಿ ಬಾಗಿಲುಗಳು, ವರ್ಷಗಳಿಂದಲೂ ಬೆಳೆಯುತ್ತಿರುವ, ಕಿಟಕಿ-ಬಾಗಿಲಿನ ಮೂಲಕ ಇಣುಕಿ ನೋಡುತ್ತಿರುವ ಹಸಿರು ಬಳ್ಳಿಗಳು, ಮಳೆಗೆ ಪಾಚಿ ಕಟ್ಟಿಕೊಂಡಿರುವ ಗೋಡೆಗಳು ಕಣ್ಣಿಗೆ ಕಾಣಿಸದೇ ಇರದು!.

ಉಳಿಸಿಕೊಳ್ಳಿ: ಇಡೀ ಜಿಲ್ಲೆಯಲ್ಲೇ ಆಲೂರು ತಾಲೂಕಿನಲ್ಲಿ ಮಾತ್ರವಿರುವ ಕಸಾಪ ಭವನದ ಈ ಸ್ಥಿತಿ ಕಂಡು ಎಂತಹವರಾದರೂ ಮರುಕಪಟ್ಟುಕೊಳ್ಳದೇ ಇರಲಾರರು. ಸಾಹಿತ್ಯ ಪರಿಷತ್‌ ಭವನದ ಹೊರ ಒಳ ಆವರಣ ಕೊಳಚೆ ಗೂಡಾಗಿ ಪರಿಣಮಿಸಿದೆ. ಕಸಾಪ ಕಟ್ಟಡ ಇಷ್ಟು ದುಸ್ಥಿತಿಗೆ ತಲುಪಿ ದ್ದರೂ ತಾಲೂಕು ಘಟಕದ ಅಧ್ಯಕ್ಷ, ಪದಾಧಿಕಾರಿಗಳು ಎಲ್ಲಿ ಹೋಗಿದ್ದಾರೆಂದು ಕನ್ನಡಾಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ದಾನಿಗಳಾದ ಸರ್ವಮಂಗಳ ರಾಜಶೇಖರ್‌ ಅವರು ಕಸಾಪ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ನಿವೇಶನ ದಾನ ಮಾಡಿ ದ್ದರು. ಅಂದಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ಜಿ.ಆರ್‌.ಪುಟ್ಟೇಗೌಡರ ನೇತೃತ್ವದಲ್ಲಿ ಹಲವಾರು ದಾನಿಗಳ ಸಹಕಾರದಿಂದ ಪರಿಷತ್‌ಗೆ ಕಟ್ಟಡ ವನ್ನು ನಿರ್ಮಾಣ ಮಾಡಲಾಗಿತ್ತು.

ಇದನ್ನೂ ಓದಿ:- ಕೋಟತಟ್ಟು: ಕಾಂಕ್ರೀಟ್ ಚಪ್ಪಡಿ ಕುಸಿದು ಓರ್ವ ಸಾವು, ಓರ್ವನಿಗೆ ಗಾಯ

ಆದರೆ, ಇಂದಿನ ಪದಾಧಿಕಾರಿಗಳಿಗೆ ಕಟ್ಟಡವನ್ನು ಉಳಿಸಿ ಕೊಳ್ಳಬೇಕೆನ್ನುವ ವ್ಯವಧಾನವೂ ಇದ್ದಂ ತಿಲ್ಲ. ವರ್ಷ ಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಕಸಾಪ ವತಿಯಿಂದ ಒಂದು ಲಕ್ಷ ರೂ. ಸಹಾಯಧನ ಕೊಡುತ್ತಾರೆ. ಅದು ಸಾಲದೆಂಬಂತೆ ಹಲವು ದಾನಿಗಳು, ಸಂಘ ಸಂಸ್ಥೆಗಳು, ಸರ್ಕಾರಿ, ಖಾಸಗಿ ನೌಕರರಿಂದ, ಕಚೇರಿಗಳಿಂದ ಸಹಾಯ ಧನ ಪಡೆದು ಸಮ್ಮೇಳನ ನಡೆಸುತ್ತಾರೆಂದು ಕನ್ನಡಾಭಿಮಾನಿಗಳು ಆರೋಪಿಸಿದ್ದಾರೆ.

Advertisement

ಈವರೆಗೂ ಸಾರ್ವಜನಿಕವಾಗಿ ಲೆಕ್ಕ ಮಂಡಿಸಿಲ್ಲ: ಈವರೆಗೂ ಯಾವ ಅಧ್ಯಕ್ಷರೂ ಸಾಹಿತ್ಯ ಸಮ್ಮೇಳನಕ್ಕೆ ಖರ್ಚಾಗಿರುವುದನ್ನು ಸಾರ್ವ ಜನಿಕ ವಾಗಿ ಲೆಕ್ಕ ಮಂಡಿಸಿಲ್ಲ.ಪದಾಧಿಕಾರಿಗಳಿಗೆ ಕಟ್ಟಡ ವನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವ ಇಚ್ಚೆಯೂ ಇಲ್ಲವಾಗಿದೆ. ವಿಶೇಷವೆಂದರೆ ತಾಲೂಕಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕಸಾಪ ಸದಸ್ಯರಿ¨ªಾರೆ. ಒಮ್ಮೆ ಯಾದರೂ ಕನಿಷ್ಠ 50 ಸದಸ್ಯರು ಸಾಹಿತ್ಯ ಪರಿಷತ್‌ ಚಟುವಟಿಕೆ, ವಾರ್ಷಿಕ ಸಭೆಯಲ್ಲಿ ಪಾಲ್ಗೊಂ ಡಿಲ್ಲ. ಮತದಾರರ ಪಟ್ಟಿ ಸಾಹಿತ್ಯ ಮರೆತು ಸಾರ್ವ ಜನಿಕ ಮತ ಪಟ್ಟಿಗೆ ಹೋಲುವಂತಿದೆ. ಕನ್ನಡ ಸಾಹಿತ್ಯ ಪರಿಷತ್‌ ಭವನದ ಪರಿಸ್ಥಿತಿ ಹೀಗಿರಬೇಕಾದರೆ, ಸಾಹಿತ್ಯ ಚಟುವಟಿಕೆ ಎಷ್ಟರ ಮಟ್ಟಿಗೆ ನಡೆಯುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಯಾಗಿ ಮೂಡಿದೆ.

 ಈಗಿನವರಿಗೆ ಸುಣ್ಣ-ಬಣ್ಣ ಬಳಿಯಲೂ ಸಾಧ್ಯವಿಲ್ಲವೇ?

ನಾನು ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಭವನದ ಸುತ್ತಮುತ್ತ ಸ್ವತ್ಛತೆ ಮಾಡುವುದರ ಜತೆಗೆ ವಿದ್ಯುತ್‌ ದೀಪ ಅಳವಡಿಸಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡುತ್ತಿದ್ದೆವು. ಆದರೆ, ಇತ್ತೀಚಿಗೆ ಸಾಹಿತ್ಯ ಭವನ ಶಿಥಿಲಾವಸ್ಥೆ ತಲುಪಿದೆ. ಶ್ರೀಕಾಂತ್‌ ಅಧ್ಯಕ್ಷರಾಗುವ ವೇಳೆ ತನ್ನನ್ನು ಅಧ್ಯಕ್ಷರಾಗಿ ಮಾಡಿ ಒಂದು ಲಕ್ಷ ಕೊಡುತ್ತೇನೆ ಎಂದಿದ್ದರೂ ಈಗ ಅವರೇ ಅಧ್ಯಕ್ಷರಾಗಿದ್ದಾರೆ. ಆ ಒಂದು ಲಕ್ಷ ಎಲ್ಲಿ ಹೋಯ್ತು?.

ಈ ಹಿಂದಿನವರು ಕಟ್ಟಡ ಕಟ್ಟಿದ್ದರೂ ಈಗಿನವರಿಗೆ ಸುಣ್ಣ ಬಣ್ಣ ಬಳಿಸಲೂ ಸಾಧ್ಯವಾಗಿಲ್ಲ. ಕಟ್ಟಡದ ರಕ್ಷಣೆ ಮುಖ್ಯವಾಗಿದ್ದು ಮೇಲಾºಗದಲ್ಲಿ ಸೀಟ್‌ ಹಾಕುವುದರ ಬಗ್ಗೆ ಸದಸ್ಯರ ಜತೆ ಚರ್ಚಿಸಲಾಗುವುದು ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಎಸ್‌.ಎಸ್‌.ಶಿವಮೂರ್ತಿ ತಿಳಿಸಿದರು.

”ಕಸಾಪದ ಯಾವುದೇ ಚಟುವಟಿಕೆಗಳಿಗೆ ಸಂಘದಲ್ಲಿ ಒಂದು ರೂ. ಹಣವಿಲ್ಲ. ಭವನದ ಸುತ್ತ ಮುತ್ತ ಸ್ವತ್ಛತೆ ಮಾಡಿಸುವುದಕ್ಕೆ ಯಾರಾದರೂ ದಾನಿಗಳು ಹಣ ನೀಡಿದರೆ ಸ್ವತ್ಛತೆ ಮಾಡಲಾಗುವುದು.”- ಶ್ರೀಕಾಂತ್‌, ಆಲೂರು ತಾಲೂಕು ಕಸಾಪ ಅಧ್ಯಕ್ಷರು

●ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next