Advertisement
ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ನಟ ಅಲ್ಲು ಅರ್ಜುನ್ ನನ್ನು ಹೈದರಾಬಾದ್ ನಿವಾಸದಿಂದ ಶುಕ್ರವಾರ(ಡಿ.13) ಬಂಧಿಸಲಾಗಿತ್ತು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಚಿಕ್ಕಡಪಲ್ಲಿ ಪೊಲೀಸರು ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ಈ ವೇಳೆ ಕೋರ್ಟ್ ನಟನಿಗೆ ಡಿ. 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು ಆ ಬಳಿಕ ನಟನನ್ನು ಚಂಚಲಗುಡ ಜೈಲಿಗೆ ಕರೆತರಲಾಯಿತು.
Related Articles
Advertisement
ಏನಿದು ಪ್ರಕರಣ:
ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ನಡೆಸಲು ನಿರ್ಧರಿಸಲಾಗಿತ್ತು ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳ ದಂಡೇ ಚಿತ್ರ ಮಂದಿರದ ಬಳಿ ನೆರೆದಿತ್ತು ಅದರಂತೆ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದರು ಬುಧವಾರ ರಾತ್ರಿ ಸುಮಾರು 10;30 ಸುಮಾರಿಗೆ ಚಿತ್ರದ ಪ್ರೀಮಿಯರ್ ಶೋ ನಡೆಯುತಿದ್ದ ವೇಳೆ ನಟ ಅಲ್ಲು ಅರ್ಜುನ್ ಚಿತ್ರ ಮಂದಿರಕ್ಕೆ ಭೇಟಿ ನೀಡುತ್ತಾರೆ ಇದರಿಂದ ಅಲ್ಲಿದ್ದ ಅಭಿಮಾನಿಗಳು ತನ್ನ ನೆಚ್ಚಿನ ನಟನ ಜೊತೆ ಫೋಟೋ ತೆಗಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ ಈ ವೇಳೆ ಅಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಹಿನ್ನೆಲೆಯಲ್ಲಿ ಜನ ಓಡುವ ವೇಳೆ ಕಾಲ್ತುಳಿತ ಸಂಭವಿಸಿದೆ ಈ ವೇಳೆ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಮಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನು ಅಲ್ಲು ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡದೇ ಚಿತ್ರ ಮಂದಿರಕ್ಕೆ ಪ್ರವೇಶ ಮಾಡಿದ್ದು ಇದರಿಂದ ಭದ್ರತಾ ವ್ಯವಸ್ಥೆಗೆ ಬೇಕಾದಷ್ಟು ಮಂದಿ ಪೊಲೀಸ್ ಸಿಬಂದಿಗಳು ಇರದೇ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಅಲ್ಲು ಅರ್ಜುನ್ ಸೇರಿ, ಚಿತ್ರತಂಡ ಹಾಗೂ ಥಿಯೇಟರ್ ಮಾಲೀಕ, ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇತ್ತೀಚೆಗೆ ಸಂಧ್ಯಾ ಥಿಯೇಟರ್ ಮಾಲೀಕ ಎಂ.ಸಂದೀಪ್, ವ್ಯವಸ್ಥಾಪಕ ಎಂ. ನಾಗರಾಜು ಹಾಗೂ ಭದ್ರತಾ ಮುಖ್ಯಸ್ಥ ಗಂಧಕಂ ವಿಜಯ್ ಚಂದರ್ ಅವರನ್ನು ಬಂಧಿಸಲಾಗಿತ್ತು.