Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…
Team Udayavani, Dec 14, 2024, 8:45 AM IST
ಹೈದರಾಬಾದ್: ಶುಕ್ರವಾರ ಜೈಲು ಸೇರಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಶನಿವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ನಟ ಅಲ್ಲು ಅರ್ಜುನ್ ನನ್ನು ಹೈದರಾಬಾದ್ ನಿವಾಸದಿಂದ ಶುಕ್ರವಾರ(ಡಿ.13) ಬಂಧಿಸಲಾಗಿತ್ತು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಚಿಕ್ಕಡಪಲ್ಲಿ ಪೊಲೀಸರು ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ಈ ವೇಳೆ ಕೋರ್ಟ್ ನಟನಿಗೆ ಡಿ. 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು ಆ ಬಳಿಕ ನಟನನ್ನು ಚಂಚಲಗುಡ ಜೈಲಿಗೆ ಕರೆತರಲಾಯಿತು.
ಇದಾದ ಬಳಿಕ ನಟ ಅಲ್ಲು ಅರ್ಜುನ್ ಹೈಕೋರ್ಟ್ ನಿಂದ ಜಾಮೀನು ಪಡೆದು ಹೊರಬರುವ ಪ್ರಯತ್ನ ನಡೆಸಿದ್ದು ಅದರಂತೆ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಆಧಾರದಲ್ಲಿ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನಿಂದ ಜಾಮೀನು ಸಿಕ್ಕರೂ ಜೈಲು ಅಧಿಕಾರಿಗಳಿಗೆ ಜಾಮೀನು ಪ್ರತಿ ತಲುಪದ ಕಾರಣ ಒಂದು ರಾತ್ರಿ ಜೈಲಿನಲ್ಲಿ ಉಳಿಯುವಂತಾಯಿತು ಅದರಂತೆ ಶನಿವಾರ ಬೆಳಿಗ್ಗೆ ಸುಮಾರು 6;30 ರ ವೇಳೆಗೆ ಚಂಚಲಗುಡ ಜೈಲಿನ ಹಿಂಬದಿ ಗೇಟಿನಿಂದ ಪೊಲೀಸ್ ಭದ್ರತೆಯೊಂದಿಗೆ ಬಿಡುಗಡೆಗೊಂಡು ಹೊರಬಂದಿದ್ದಾರೆ.
Actor #AlluArjun released from jail early morning pic.twitter.com/bSKNx0AgHY
— Aneri Shah Yakkati (@tweet_aneri) December 14, 2024
ಇತ್ತ ನಟ ಜೈಲಿನಿಂದ ಹೊರ ಬರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ಏನಿದು ಪ್ರಕರಣ:
ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ನಲ್ಲಿ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ನಡೆಸಲು ನಿರ್ಧರಿಸಲಾಗಿತ್ತು ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳ ದಂಡೇ ಚಿತ್ರ ಮಂದಿರದ ಬಳಿ ನೆರೆದಿತ್ತು ಅದರಂತೆ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದರು ಬುಧವಾರ ರಾತ್ರಿ ಸುಮಾರು 10;30 ಸುಮಾರಿಗೆ ಚಿತ್ರದ ಪ್ರೀಮಿಯರ್ ಶೋ ನಡೆಯುತಿದ್ದ ವೇಳೆ ನಟ ಅಲ್ಲು ಅರ್ಜುನ್ ಚಿತ್ರ ಮಂದಿರಕ್ಕೆ ಭೇಟಿ ನೀಡುತ್ತಾರೆ ಇದರಿಂದ ಅಲ್ಲಿದ್ದ ಅಭಿಮಾನಿಗಳು ತನ್ನ ನೆಚ್ಚಿನ ನಟನ ಜೊತೆ ಫೋಟೋ ತೆಗಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ ಈ ವೇಳೆ ಅಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಹಿನ್ನೆಲೆಯಲ್ಲಿ ಜನ ಓಡುವ ವೇಳೆ ಕಾಲ್ತುಳಿತ ಸಂಭವಿಸಿದೆ ಈ ವೇಳೆ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಮಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನು ಅಲ್ಲು ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡದೇ ಚಿತ್ರ ಮಂದಿರಕ್ಕೆ ಪ್ರವೇಶ ಮಾಡಿದ್ದು ಇದರಿಂದ ಭದ್ರತಾ ವ್ಯವಸ್ಥೆಗೆ ಬೇಕಾದಷ್ಟು ಮಂದಿ ಪೊಲೀಸ್ ಸಿಬಂದಿಗಳು ಇರದೇ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಅಲ್ಲು ಅರ್ಜುನ್ ಸೇರಿ, ಚಿತ್ರತಂಡ ಹಾಗೂ ಥಿಯೇಟರ್ ಮಾಲೀಕ, ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇತ್ತೀಚೆಗೆ ಸಂಧ್ಯಾ ಥಿಯೇಟರ್ ಮಾಲೀಕ ಎಂ.ಸಂದೀಪ್, ವ್ಯವಸ್ಥಾಪಕ ಎಂ. ನಾಗರಾಜು ಹಾಗೂ ಭದ್ರತಾ ಮುಖ್ಯಸ್ಥ ಗಂಧಕಂ ವಿಜಯ್ ಚಂದರ್ ಅವರನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧನುಷ್ – ನಯನತಾರಾ ಕಾಪಿ ರೈಟ್ಸ್ ವಿವಾದ: ನೆಟ್‌ಫ್ಲಿಕ್ಸ್ ಸಲ್ಲಿಸಿದ್ದ ಅರ್ಜಿ ವಜಾ
Pushpa 2: ಓಟಿಟಿಯಲ್ಲಿ ಹೊಸ ದಾಖಲೆ ಬರೆಯಲಿದೆ ʼಪುಷ್ಪ-2ʼ: ಏನದು?
Filmmaker Shafi: ಮಾಲಿವುಡ್‌ನ ಖ್ಯಾತ ನಿರ್ದೇಶಕ ಶಾಫಿ ನಿಧನ
Thalapathy Vijay: ಕೊನೆ ಸಿನಿಮಾಕ್ಕೆ ʼಜನ ನಾಯಕʼನಾದ ವಿಜಯ್; ಫಸ್ಟ್ ಲುಕ್ ವೈರಲ್
Kollywood: ಸಿನಿಮಾರಂಗ ಬಿಟ್ಟು ದಳಪತಿ ವಿಜಯ್ ಪಕ್ಷಕ್ಕೆ ನಟಿ ತ್ರಿಶಾ ಎಂಟ್ರಿ?
MUST WATCH
ಹೊಸ ಸೇರ್ಪಡೆ
Karnataka: 8 ಜಲ ಯೋಜನೆಗೆ ಕೇಂದ್ರದಿಂದ 99 ಕೋಟಿ ರೂ. ಮಂಜೂರು
CM Siddaramaiah: ಮುಡಾ ಕೇಸ್, ಇ.ಡಿ. ನೋಟಿಸ್ ಎರಡೂ ರಾಜಕೀಯ ಪ್ರೇರಿತ
Madikeri ಹೊರ ವಲಯದಲ್ಲಿ ನಡೆದ ಕೊಲೆ, ಕಳವು ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
Kulgeri Cross: ವಿದ್ಯುತ್ ಶಾರ್ಟ್ ಸರ್ಕ್ಯೂಟ್; 8 ಮೇವಿನ ಬಣವಿ ಭಸ್ಮ
Dharawad: ಡಾ.ಚಂದ್ರಶೇಖರ ಕಂಬಾರ ಸೇರಿ ಮೂವರಿಗೆ ಕವಿವಿ ‘ಅರಿವೇ ಗುರು ಪ್ರಶಸ್ತಿ’