Advertisement

ಶಾರುಖ್‌ ಖಾನ್‌ ʼಜವಾನ್‌ʼ ಆಫರ್‌ ಗೆ ʼನೋʼ ಎಂದ ಅಲ್ಲು ಅರ್ಜುನ್

04:07 PM Mar 02, 2023 | Team Udayavani |

ಮುಂಬಯಿ:  ಕಿಂಗ್‌ ಖಾನ್‌ ಶಾರುಖ್‌ ʼಪಠಾಣ್‌ʼ ಚಿತ್ರ  1000 ಕೋಟಿ ಗಳಿಸಿ ಬಾಕ್ಸ್‌ ಆಫೀಸ್‌ ನಲ್ಲಿ ಧೂಳ್‌ ಎಬ್ಬಿಸಿದೆ. ಇತ್ತ ಸಿನಿಮಾ ಸೂಪರ್‌ ಹಿಟ್‌ ಆಗುತ್ತಿದ್ದಂತೆ ಶಾರುಖ್‌ ಖಾನ್‌ ಅವರ ಮುಂದಿನ ಸಿನಿಮಾ ಅಟ್ಲೀ ನಿರ್ದೇಶನದ ʼಜವಾನ್‌ʼ ಬಗ್ಗೆ ಹೈಪ್‌ ಏಳಲು ಶುರುವಾಗಿದೆ.

Advertisement

ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಜವಾನ್‌ʼ ಮಾಸ್‌ ಪೋಸ್ಟರ್‌ ನಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಸಿನಿಮಾದಲ್ಲಿ ಲೇಡಿ ಸೂಪರ್‌ ಸ್ಟಾರ್‌ ನಯನತಾರ, ವಿಜಯ್‌ ಸೇತುಪತಿ ನಟಿಸಲಿದ್ದು, ಇದರೊಂದಿಗೆ ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ ಮುಖ್ಯ ಪಾತ್ರದಲ್ಲಿ ಸಣ್ಣ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿತ್ತು.

ಇದನ್ನೂ ಓದಿ: ಕಿಚ್ಚ ಸುದೀಪ್‌, ಉಪೇಂದ್ರ ಬಳಿ ಕ್ಷಮೆ ಕೇಳಿದ ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌

ಆದರೆ ಇದೀಗ ಈ ಸುದ್ದಿಗೆ ಟ್ವಿಸ್ಟ್‌ ಸಿಕ್ಕಿದ್ದು, ಅಲ್ಲು ಅರ್ಜುನ್‌ ʼಜವಾನ್ʼ ನಲ್ಲಿ ನಟಿಸುತ್ತಿಲ್ಲ. ಅವರು ʼಪುಷ್ಪ-2ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿಯೇ ಸಂಪೂರ್ಣ ಫೋಕಸ್‌ ಆಗಿದ್ದಾರೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಇತ್ತೀಚೆಗಷ್ಟೇ ವೈಜಾಗ್‌, ಹೈದರಾಬಾದ್ ನಲ್ಲಿ ಶೆಡ್ಯೂಲ್‌ ಶೂಟ್‌ ಮುಗಿಸಿದೆ. ಅಲ್ಲು ಅರ್ಜುನ್‌ ಹುಟ್ಟು ಹಬ್ಬಕ್ಕೆ ಅಂದರೆ ಏ. 8ಕ್ಕೆ ʼಪುಷ್ಪ-2ʼ ಸಿನಿಮಾದ ಟೀಸರ್‌ ರಿಲೀಸ್‌ ಆಗಲಿದೆ ಎನ್ನಲಾಗಿದೆ.

Advertisement

ʼಜವಾನ್‌ʼ ಇದೇ ವರ್ಷದ ಜೂನ್‌ 3 ರಂದು ರಿಲೀಸ್‌ ಆಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next