Advertisement

ವಿಶೇಷಚೇತನರು-ವಯೋದ್ಧರಿಗೆ ಅಂಚೆ ಮತದಾನಕ್ಕೆ ಅವಕಾಶ

07:16 PM Oct 18, 2021 | Team Udayavani |

ಹಾವೇರಿ: ಹಾನಗಲ್ಲ ವಿಧಾನಸಭಾ ಉಪಚುನಾವಣೆ ನಿಮಿತ್ತ ಅ.18 ರಂದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ವಿಶೇಷಚೇತನರಿಗೆ ಹಾಗೂ ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರಿಗೆ ಅಂಚೆ ಮತಪತ್ರದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅಥವಾ ಅ.30 ರಂದು ನಡೆಯವ ಮತದಾನದ ದಿನ ನೇರವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಆಯ್ಕೆ ನೀಡಲಾಗಿತ್ತು. ಹಾನಗಲ್ಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ 6905 ಮತದಾರರು ಹಾಗೂ 3778 ವಿಕಲಚೇತನ ಮತದಾರರಿದ್ದಾರೆ.

ಈ ಪೈಕಿ ಕ್ಷೇತ್ರದ 450 ಹಿರಿಯ ನಾಗರಿಕರು ಮತ್ತು 28 ಜನ ವಿಕಲಚೇತನರು ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಅಂಚೆ ಮತಪತ್ರ ಮೂಲಕ ಮತದಾನ ಮಾಡುವ ಪ್ರಕ್ರಿಯೆಗಾಗಿ ನೇಮಕ ಮಾಡಲಾದ ಮತಗಟ್ಟೆ ಅಧಿ ಕಾರಿಗಳು ಹಾಗೂ ಸೂಕ್ಷ್ಮ ವೀಕ್ಷಕರ ತಂಡ ಹಿರಿಯ ಹಾಗೂ ವಿಕಲ ಚೇತನರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ. ಅಂಚೆ ಮತಪತ್ರ ಮೂಲಕ ಮತದಾನ ಮಾಡಲು ಒಪ್ಪಿಗೆ ನೀಡಿರುವವರಿಗೆ ಈಗಾಗಲೇ ವೇಳಾ ಪಟ್ಟಿ ಕುರಿತು ಮಾಹಿತಿ ನೀಡಲಾಗಿದೆ.

ಅನಿವಾರ್ಯ ಕಾರಣಗಳಿಂದಾಗಿ ಅ.18ರಂದು ಮತದಾನ ಮಾಡಲು ಸಾಧ್ಯವಾಗದಿದ್ದರೆ ಅ.19 ರಂದು ಸಹ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಗಾಗಿ ತಾಲೂಕಿನಾದ್ಯಂತ 7 ತಂಡ ರಚಿಸಲಾಗಿದೆ ಎಂದು ಹಾನಗಲ್ಲ ಚುನಾವಣಾ ಅ ಧಿಕಾರಿ ಅಶೋಕ ತೇಲಿ ಹಾಗೂ ಸಹಾಯಕ ಚುನಾವಣಾ ಧಿಕಾರಿ ತಹಶೀಲ್ದಾರ್‌ ಎರಿಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next