ಕನಕಪುರ: ಮುಂಬರುವ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ನನ್ನ ನಾಯಕತ್ವದ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ನೀವೆಲ್ಲರೂ ನಿಮ್ಮ ಶಕ್ತಿಯನ್ನುಧಾರೆ ಎರೆಯಬೇಕು.
ತಾಲೂಕಿನ ನಿಮ್ಮ ಪ್ರತಿನಿಧಿ ನಾನು ಸಹ ರಾಜ್ಯದ ಜನರ ಸೇವೆ ಮಾಡುವಂತಹ ಒಂದು ಅವಕಾಶ ಕೊಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪರೋಕ್ಷ ವಾಗಿ ತಾನು ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು ಎಂದು ಹೇಳಿದರು.
ನಗರದಲ್ಲಿ ಡಿಕೆಎಸ್ ಚಾರಿಟಬಲ್ ಇನ್‌ಸ್ಟಿಟ್ಯೂಟ್ ಟ್ರಸ್ಟ್ ವತಿಯಿಂದ ನಡೆಯು ತ್ತಿರುವ ಕನಕೋತ್ಸವದ ನಾಲ್ಕನೇ ದಿನದ ನೌಕರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಜನ ಸೇವೆ ಮಾಡುವ ಅವಕಾಶ ಕೊಟ್ಟಿರುವ ರಾಮನಗರ ಜಿಲ್ಲೆ ನನಗೂ ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು.