Advertisement

ಲಸಿಕೆ ಅಂತರ ತಗ್ಗಿಸಿ: ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್‌ ಸಲಹೆ

11:18 PM Sep 06, 2021 | Team Udayavani |

ಕೊಚ್ಚಿ/ಹೊಸದಿಲ್ಲಿ: ಹಣ ಪಾವತಿಸಿ ಲಸಿಕೆ ಪಡೆಯುವವರಿಗೆ ಕೊವಿಶೀಲ್ಡ್‌ನ ಮೊದಲ ಡೋಸ್‌ ಪಡೆದ ನಾಲ್ಕೇ ವಾರಗಳಲ್ಲಿ 2ನೇ ಡೋಸ್‌ ಪಡೆಯಲು ಅವಕಾಶ ನೀಡಿ ಎಂದು ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್‌ ಹೇಳಿದೆ.

Advertisement

ವಿದೇಶಕ್ಕೆ ತೆರಳುವವರಿಗೆ ಎರಡು ಡೋಸ್‌ಗಳ ನಡುವಿನ ಅಂತರ ತಗ್ಗಿಸಬಹುದು ಎಂದಾದರೆ ಅಗತ್ಯವಿರುವ ಇತರರಿಗೂ ಅದನ್ನು ಅನ್ವಯಿಸಬಹುದಲ್ಲವೇ ಎಂದು ಪ್ರಶ್ನಿಸಿರುವ ನ್ಯಾಯಪೀಠ, 2ನೇ ಡೋಸ್‌ ಬೇಗನೆ ಬೇಕು ಎಂದು ಬರುವವರಿಗೆ ಪ್ರಸ್ತುತ ಇರುವ 84 ದಿನಗಳ ಬದಲಿಗೆ ನಾಲ್ಕೇ ವಾರಗಳಲ್ಲಿ ಲಸಿಕೆ ನೀಡುವಂತೆ ಕೋವಿನ್‌ ಪೋರ್ಟಲ್‌ನಲ್ಲಿ ವ್ಯವಸ್ಥೆ ಮಾಡಿಸಿ ಎಂದು ಸೂಚಿಸಿದೆ.

ಕನಿಷ್ಠ ಸಾವು: ದೇಶಾದ್ಯಂತ ರವಿವಾರದಿಂದ ಸೋಮವಾರಕ್ಕೆ 24 ಗಂಟೆಗಳಲ್ಲಿ 38,948 ಮಂದಿಗೆ ಸೋಂಕು ದೃಢಪಟ್ಟು, 219 ಮಂದಿ ಮೃತಪಟ್ಟಿದ್ದಾರೆ. ದಿನವಹಿ ಮೃತರ ಸಂಖ್ಯೆ ಕನಿಷ್ಠ ಮಟ್ಟಕ್ಕಿಳಿದಿರುವುದು 167 ದಿನಗಳಲ್ಲಿ ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದೇ ವೇಳೆ, ಭಾರತದ ಔಷಧ ಕಂಪೆನಿ ಹೆಟೆರೋ ಅಭಿವೃದ್ಧಿಪಡಿಸಿರುವ ಕೋವಿಡ್‌ ಔಷಧ ಟೋಸಿಲಿಝುಮಾಬ್‌ನ ಜೆನೆರಿಕ್‌ ಆವೃತ್ತಿಯ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿರ್ದೇಶನಾಲಯ ಅನುಮತಿ ನೀಡಿದೆ.

2 ಡೋಸ್‌ ಪಡೆದರೆ  ಆರ್‌ಟಿ-ಪಿಸಿಆರ್‌ ಪರೀಕ್ಷೆ ಬೇಡ :

ಕೊರೊನಾ ಲಸಿಕೆಯ 2 ಡೋಸ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಂಡವರು ಕೇರಳ ಪ್ರವೇಶಿಸುವ ವೇಳೆ ಆರ್‌ಟಿ-ಪಿಸಿಆರ್‌  ಪರೀಕ್ಷೆಯ ನೆಗೆಟಿವ್‌ ವರದಿ ಅಗತ್ಯವಿಲ್ಲ ಎಂದು ಏರ್‌ ಇಂಡಿಯಾ ಹೇಳಿದೆ. ಈ ಬಗ್ಗೆ ಟ್ವೀಟ್‌ ಮಾಡಿದ ಸರ್ಕಾರಿ ವಿಮಾನಯಾನ ಸಂಸ್ಥೆ “ಏರ್‌ ಇಂಡಿಯಾ ಮೂಲಕ ಕೇರಳಕ್ಕೆ ಪ್ರಯಾಣ ಮಾಡುವವರು 2 ಡೋಸ್‌ ಪೂರ್ಣ ಪ್ರಮಾಣದ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರಗಳನ್ನು ಹೊಂದಿರಬೇರು. ಅವರು ಪ್ರತ್ಯೇಕವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸುವ ಅಗತ್ಯವಿಲ್ಲ’ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next