Advertisement
ಜಿಲ್ಲೆಯಲ್ಲಿ ಈ ಮೊದಲಿದ್ದ 128 ತಾಪಂ ಕ್ಷೇತ್ರಗಳನ್ನು 104ಕ್ಕೆ ಇಳಿಕೆ ಮಾಡಿ, ಕ್ಷೇತ್ರಗಳನ್ನು ವಿಗಂಡಿಸಿ ಆಯೋಗ ಅಧಿ ಸೂಚನೆ ಹೊರಡಿಸಿದೆ. ಚುನಾವಣಾ ಆಯೋಗದಿಂದ ಕ್ಷೇತ್ರ ವಿಂಗಡಣೆ ಅಂತಿಮ ಅ ಧಿಸೂಚನೆ ಹೊರಬೀಳುತ್ತಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾವೇರಿ ತಾಲೂಕು ಪಂಚಾಯಿತಿಗೆ 16 ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಯಾವ ಕ್ಷೇತ್ರಕ್ಕೆ ಯಾವ್ಯಾವ ಹಳ್ಳಿಗಳು ಬರುತ್ತಿವೆ ಎಂಬ ಮಾಹಿತಿ ಇಂತಿದೆ. ಸಂಗೂರು ತಾಪಂ ಕ್ಷೇತ್ರಕ್ಕೆ ಸಂಗೂರು, ದಿಡದೂರು, ಬಿದರಗಡ್ಡಿ, ವರದಾಹಳ್ಳಿ, ನಾಗನೂರು, ಬೆಂಚಿಹಳ್ಳಿ, ವೆಂಕಟಾಪುರ ಸೇರಲಿವೆ.
Related Articles
Advertisement
ಕಾಗಿನೆಲೆ ಕ್ಷೇತ್ರಕ್ಕೆ ಕಾಗಿನೆಲೆ, ಇಂಗಳಗೊಂದಿ, ನಾಗಲಾಪುರ, ಹೆಡಿಗ್ಗೊಂಡ, ತಿಮಕಾಪುರ, ಬನ್ನಿಹಳ್ಳಿ. ಚಿಕ್ಕಬಾಸೂರ ಕ್ಷೇತ್ರಕ್ಕೆ ಚಿಕ್ಕಬಾಸೂರು, ಸಿದ್ದಾಪುರ, ಚಿಕ್ಕಳ್ಳಿ, ಕುಮ್ಮೂರ, ನೆಲ್ಲಿಕೊಪ್ಪ, ದಾನನಕೊಪ್ಪ, ಕಾಸಂಬಿ, ಹಿರೇಹಳ್ಳಿ, ಬಡಮಲ್ಲಿ ಸೇರ್ಪಡೆಯಾಗಲಿವೆ. ಘಾಳಪೂಜಿ ಕ್ಷೇತ್ರಕ್ಕೆ ಸೂಡಂಬಿ, ಅತ್ತಿಕಟ್ಟಿ, ತಿಮ್ಮಾಪುರ, ಘಾಳಪೂಜಿ, ದುಮ್ಮಿಹಾಳ, ಗುಡ್ಡದಮಲಾಪುರ, ಹಿರೇಅಣಜಿ, ತುಮರಿಕೊಪ್ಪ, ಬೀರನಕೊಪ್ಪ, ಚಿಕ್ಕಣಜಿ. ಮಾಸಣಗಿ ಕ್ಷೇತ್ರಕ್ಕೆ ಕೆರವಡಿ, ಚಿನ್ನಿಕಟ್ಟಿ, ಕಳಗೊಂಡ, ತಿಪಲಾಪುರ, ಮಾಸಣಗಿ, ಅಂಗರಗಟ್ಟಿ, ಗುಮ್ಮನಹಳ್ಳಿ, ಮತ್ತೂರ, ಧೂಳಿಕೊಪ್ಪ ಸೇರ್ಪಡೆಯಾಗಲಿವೆ. ಶಿಡೇನೂರ ಕ್ಷೇತ್ರಕ್ಕೆ ತಡಸ, ಕಾಟೇನಹಳ್ಳಿ, ಶಿಡೇನೂರ, ಶಿವಾಜಿನಗರ, ಹಿರೇನಂದಿಹಳ್ಳಿ, ಬನ್ನಿಹಟ್ಟಿ, ಲಕಮಾಜಿಕಪ್ಪ, ರಾಮಗೊಂಡನಹಳ್ಳಿ, ಕೊಲ್ಲಾಪುರ.ಕದರಮಂಡಲಗಿ ಕ್ಷೇತ್ರಕ್ಕೆ ಬಿಸಲಹಳ್ಳಿ, ಬೆಳಕೇರಿ, ತಿಮ್ಮೇನಹಳ್ಳಿ, ಆಣೂರ, ಕದರಮಂಡಲಗಿ ಸೇರಲಿವೆ. ಕಲ್ಲೇದೇವರ ಕ್ಷೇತ್ರಕ್ಕೆ ಕಲ್ಲೇದೇವರ, ಸೇವಾನಗರ, ಕೆಂಗೊಂಡ, ಬುಡಪನಹಳ್ಳಿ, ಅಳಲಗೇರಿ, ಛತ್ರ. ಮೋಟೆಬೆನ್ನೂರ ಕ್ಷೇತ್ರಕ್ಕೆ ಮೋಟೆಬೆನ್ನೂರ. ಮಲ್ಲೂರ ಕ್ಷೇತ್ರಕ್ಕೆ ಮಲ್ಲೂರ, ಖುರ್ದಕೋಡಿಹಳ್ಳಿ, ಶಂಕರೀಪುರ, ತರೇದಹಳ್ಳಿ, ಖುರ್ದವೀರಾಪುರ, ಗುಂಡೇನಹಳ್ಳಿ, ಶಿವಪುರ, ಅರಬಗೊಂಡ, ಕದಮನಹಳ್ಳಿ ಸೇರ್ಪಡೆಯಾಗಲಿವೆ.