Advertisement
ಹದಿನಾಲ್ಕು ತಿಂಗಳು ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿ ಕಾಂಗ್ರೆಸ್ ನಾಯಕರ ಒಳ ಹಾಗೂ ಹೊರ “ಆಟ’ದ ಅನುಭವದ ಆಧಾರದ ಮೇಲೆ ಕುಮಾರಸ್ವಾಮಿ ಮೈತ್ರಿ ಸಹವಾಸ ಸಾಕು ಎಂಬ ತೀರ್ಮಾನಕ್ಕೆ ಬಂದು ಸ್ವಂತ ಶಕ್ತಿಯ ಮೇಲೆಯೇ ಉಪ ಚುನಾವಣೆ ಎದುರಿಸುವ ತೀರ್ಮಾನಕ್ಕೆ ಬಂದಿದ್ದಾರೆ.
Related Articles
ಸಮ್ಮಿಶ್ರ ಸರಕಾರ ಪತನಕ್ಕೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತುಮಕೂರು, ಮಂಡ್ಯ ಕ್ಷೇತ್ರ ದಲ್ಲಿ ಜೆಡಿಎಸ್ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂಬುದು ಗೊತ್ತಿದ್ದರೂ ಮತ್ತೆ ಕಾಂಗ್ರೆಸ್ ಜತೆಯೇ ಕೈಜೋಡಿಸಿಕೊಂಡು ಹೋಗುವುದು ಸೂಕ್ತವಲ್ಲ. ಏನಾದರೂ ಆಗಲಿ, ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ನಮ್ಮ ಶಕ್ತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಕಟ್ಟುವುದೇ ಸೂಕ್ತ ಎಂಬ ವಾದ ಮುಂದಿಟ್ಟಿರುವ ಕುಮಾರಸ್ವಾಮಿಯವರು ಮೈತ್ರಿ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.
Advertisement
ಜೆಡಿಎಸ್‌ನ ಬಹುತೇಕ ಶಾಸಕರಿಗೂ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸುವುದು ಇಷ್ಟವಿಲ್ಲ. ಬದಲಿಗೆ ಸ್ವಲ್ಪ ದಿನ ಕಾದು ನೋಡಿ ಉಪ ಚುನಾವಣೆ ಅನಂತರ ಬಿಜೆಪಿ ಜತೆ ಮರು ಮೈತ್ರಿ ಅಥವಾ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಬಹುದೆಂಬ ಅಭಿಪ್ರಾಯವಿದೆ.
ಆರು ಕಡೆ ಓಕೆಮೇಲ್ನೋಟಕ್ಕೆ ಯಶವಂತಪುರ, ಹುಣ ಸೂರು, ಮಹಾಲಕ್ಷ್ಮೀ ಲೇಔಟ್, ರಾಜರಾಜೇಶ್ವರಿನಗರ, ಕೆ.ಆರ್. ಪೇಟೆ, ಚಿಕ್ಕಬಳ್ಳಾ ಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಸಂಘ ಟನೆ ಹಾಗೂ ಸಮುದಾಯದ ವಿಚಾರ ದಲ್ಲಿ ಬಲವಾಗಿದೆ. ಇತರೆಡೆ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ. ಹೀಗಾಗಿ ಜೆಡಿಎಸ್ ಸ್ವತಂತ್ರ ಸ್ಪರ್ಧೆಗೆ ಇಳಿ ದರೆ ಹನ್ನೊಂದು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿ ಗಳಿಗಾಗಿ ಹುಡುಕಾಟ ನಡೆಸಬೇಕಾಗಿದೆ. -ಎಸ್. ಲಕ್ಷ್ಮೀನಾರಾಯಣ