Advertisement

ಕೋಮುವಾದಿ ಅಜೆಂಡಾ ಸೋಲಿಸಿ: ಖಾದರ್‌

10:38 PM Apr 08, 2019 | mahesh |

ಸುಳ್ಯ: ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ರವಿವಾರ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್‌ ರೈ ಅವರ ಪರ ಪ್ರಚಾರ ಸಮಾವೇಶ ನಡೆಯಿತು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿದರು. ಮುಖ್ಯ ಭಾಷಣಗೈದ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷ ಪ್ರೊ| ಕೆ.ಇ. ರಾಧಾಕೃಷ್ಣ ಅವರು ಮಾತನಾಡಿ, ಮಿಥುನ್‌ ರೈ ಅವರನ್ನು ಗೆಲ್ಲಿಸಿದರೆ ನರೇಂದ್ರ ಮೋದಿ ಠೇವಣಿ ಕಳೆದುಕೊಂಡಂತೆ. ಅವರ ಕೋಮುವಾದದ ಅಜೆಂಡಾ ಕಳೆದುಕೊಂಡಂತೆ ಎಂದು ಹೇಳಿದರು.

Advertisement

ಶಾಂತಿ ಕದಡುವ ನಳಿನ್‌ ಕುಮಾರ್‌ ಕಟೀಲು ಅವರನ್ನು ಸೋಲಿಸುವ ಮೂಲಕ ಈ ಕ್ಷೇತ್ರದ ಮತದಾರರು ಭಾರತೀಯ ಪರಂಪರೆಯನ್ನು ಮತ್ತು ಇಲ್ಲಿನ ಸೌಹಾರ್ದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಭರತ್‌ ಮುಂಡೋಡಿ ಮಾತನಾಡಿ, ಇಲ್ಲಿನ ಜನ ನಳಿನ್‌ ಕುಮಾರ್‌ ಕಟೀಲು ಅವರನ್ನು ನೋಡುವುದು ಚುನಾವಣಾ ಸಂದರ್ಭ ಮಾತ್ರ. ಇತರ ಸಂದರ್ಭದಲ್ಲಿ ಅವರು ಬಂದರೂ ಸಂಘ ಪರಿವಾರದೊಂದಿಗೆ ಒಳಾಂಗಣದಲ್ಲಿ ಮಾತ್ರ ಎಂದು ಹೇಳಿದರು.

ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ ಮಾತನಾಡಿ, ಅಡ್ಡ ಮತದಾನ ಮಾಡಿದ್ದ ಬಿಜೆಪಿಯ ಕಳ್ಳರನ್ನೇ ಹಿಡಿಯಲು ಅವರಿಗೆ ಸಾಧ್ಯವಾಗಿಲ್ಲ. ಮತ್ತೆ ಅವರು ದೇಶದ ಚೌಕಿದಾರ್‌ ಆಗುವುದು ಹೇಗೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ಅಮರನಾಥ ಶೆಟ್ಟಿ, ಉದ್ಯಮಿ ವಿಜಯ ವಿಠಲನಾಥ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಜಿಲ್ಲಾ ಅಲ್ಪಸಂಖ್ಯಾಕ ಕಾಂಗ್ರೆಸ್‌ ಅಧ್ಯಕ್ಷ ಯು.ಕೆ. ಮೋನು, ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ³ಂಗಾಯ, ಕಾಂಗ್ರೆಸ್‌ ಮುಖಂಡರಾದ ಡಾ| ರಘು, ಎಸ್‌. ಸಂಶುದ್ದೀನ್‌, ಪಿ.ಸಿ. ಜಯರಾಮ, ದಿವ್ಯಪ್ರಭಾ ಚಿಲ್ತಡ್ಕ, ಕೆ.ಕೆ. ಹರಿಪ್ರಸಾದ್‌, ಸಿದ್ದೀಕ್‌ ಕೊಕ್ಕೋ, ಗೀತಾ ಕೋಲ್ಚಾರ್‌, ಪಿ.ಪಿ. ವರ್ಗಿàಸ್‌, ಸರ್ವೋತ್ತಮ ಗೌಡ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣ, ಜೆಡಿಎಸ್‌ ಮುಖಂಡರಾದ ಜಾಕೆ ಮಾಧವ ಗೌಡ, ಸೈಯದ್‌ ಮೀರಾ ಸಾಹೇಬ್‌, ಹೈದರ್‌ ಪರ್ತಿಪ್ಪಾಡಿ, ಮಹಮ್ಮದ್‌ ಇಕ್ಬಾಲ್‌ ಎಲಿಮಲೆ, ಜ್ಯೋತಿ ಪ್ರೇಮಾನಂದ, ರಾಕೇಶ್‌ ಕುಂಟಿಕಾನ, ದಯಾಕರ ಆಳ್ವ, ಸುಮತಿ ಹೆಗ್ಡೆ ಉಪಸ್ಥಿತರಿದ್ದರು.

ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮತ್ತು ಕಾಂಗ್ರೆಸ್‌ ಮುಖಂಡ ಗೋಕುಲ್‌ದಾಸ್‌ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next