Advertisement
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ನಡೆದ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಆತ್ಮವಾಲೋಕನ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡ ವಿರುದ್ಧ ಮಾತನಾಡುವ ಕೆ.ಎನ್.ರಾಜಣ್ಣ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು, ದುರಂಹಕಾರದಿಂದ ಮಾತನಾಡಿದವರನ್ನು ಜನರು ಮನೆಗೆ ಕಳುಹಿಸಿದ್ದಾರೆ. ನಮಗೂ ಮಾತನಾಡಲು ಬರುತ್ತದೆ, ನಾವೇನು ಷಂಡರಲ್ಲ, ನಮಗೂ ಗಂಡಸ್ತನ ಇದೆ. ತಾಕತ್ ಇದ್ದರೆ ನೇರವಾಗಿ ಯುದ್ಧ ಮಾಡುವಂತೆ ಸವಾಲು ಹಾಕಿದರು.
Related Articles
Advertisement
ಹಿಂಜರಿಯುವುದು ಬೇಡ: ಗೌರಿಶಂಕರ್ ತುಮಕೂರು ಗ್ರಾಮಾಂತರ ಬಿಟ್ಟು ಹೋಗುತ್ತಾನೆ ಎಂದು ಅಪಪ್ರಚಾರ ಮಾಡ ಲಾಗುತ್ತಿದೆ. ಬಳ್ಳಗೆರೆಯಲ್ಲಿ ಮನೆಕಟ್ಟಿಕೊಂಡು ಶಾಶ್ವತವಾಗಿ ಇಲ್ಲೇ ನೆಲೆಸುತ್ತೇನೆ, ಏನೇ ಆದರೂ ಎದುರಿಸೋಣ, ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟನೆ ಮಾಡೋಣ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಹಿಂಜರಿಯುವುದು ಬೇಡ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಸಂಯಮ ಕಾಪಾಡಿಕೊಳ್ಳಿ: ಜೆಡಿಎಸ್ ಸಾಮಾಜಿಕ ಜಾಲತಾಣದ ಹುಡುಗರು ಸಂಯಮ ಕಾಪಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಿ, ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ನೀಡಬೇಡಿ, ಇದರಿಂದ ಪಕ್ಷಕ್ಕೆ ಮುಜುಗರವಾಗಲಿದೆ ಎನ್ನುವುದು ಅರಿತುಕೊಳ್ಳಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲ ಘಟಕಗಳನ್ನು ವಿಸರ್ಜಸಿದ್ದು, ಹೊಸ ತಂಡವನ್ನು ಕಟ್ಟಿ ಪಕ್ಷವನ್ನು ಇನ್ನಷ್ಟು ಸಂಘಟಿತವಾಗಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಸಲಹೆ ನೀಡಿದರು.
ಕಳೆದ ಚುನಾವಣೆಯಲ್ಲಿ ನಾನು ಗೆದ್ದಾಗ ಅಡ್ಜೆಸ್ಟ್‌ಮೆಂಟ್ನಿಂದ ಗೆದ್ದ ಎಂದು ಆರೋಪಿಸಿದರು, ಈಗ ಅವರು ಮಾಡಿದ್ದ ಏನು? ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು ಜೆಡಿಎಸ್‌ಗೆ ಹಿನ್ನಡೆ ಮಾಡಲಿಲ್ಲವೇ, ನೀತಿಗೆಟ್ಟ ಹೊಂದಾಣಿಕೆ ಮೂಲಕ, ನನ್ನನ್ನು ತುಳಿಯಲು ಯತ್ನಿಸಿದವರು ಧೈರ್ಯವಿದ್ದರೆ ನೇರವಾಗಿ ಯುದ್ಧಕ್ಕೆ ಬರಲಿ ಎಂದು ಸವಾಲು ಹಾಕಿದರು.
ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಘಟಕಗಳ ಮುಖಂಡರು, ಗ್ರಾಪಂ ಸದಸ್ಯರು, ಕಾರ್ಯಕರ್ತರು ಹಿನ್ನಡೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಬೆಳಗುಂಬ ವೆಂಕಟೇಶ್, ಉಮೇಶ್, ಹಾಲನೂರು ಅನಂತ್, ಕೆಂಪರಾಜಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.