Advertisement

ಮೈತ್ರಿ ಸರ್ಕಾರದೊಳಗಿನ ಕಲಹ ದಸರಾ ಉದ್ಘಾಟನೆ ವೇಳೆ ಬಹಿರಂಗ 

12:09 PM Oct 10, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ದಸರಾಗೆ ಬುಧವಾರ ಬೆಳಗ್ಗೆ  ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಚಾಲನೆ ನೀಡಿದರು,ಈ ವೇಳೆ ಉಪಸ್ಥಿತರಿರಬೇಕಾಗಿದ್ದ  ಜನಪ್ರತಿನಿಧಿಗಳ ಗೈರು ಎದ್ದು ಕಂಡಿದೆ. ಇದರಿಂದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಡುವೆ ಇರುವ ಅಸಮಾಧಾನ ಮತ್ತೆ ಬಹಿರಂಗಗೊಂಡಿದೆ.

Advertisement

ಸಂಪ್ರದಾಯದಂತೆ ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಪುಟ್ಟರಂಗ ಶೆಟ್ಟಿ ಅವರು ಉಪಸ್ಥಿತರಿರಬೇಕಾಗಿತ್ತು. ಆದರೆ ಅವರು ಉದ್ದೇಶಪೂರ್ವಕವಾಗಿ ಗೈರಾಗುವ ಮೂಲಕ ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ. 

ಅವರಿಗೆ ಇಷ್ಟ ಬಂದ ಹಾಗೆ ದಸರಾ ಸಮಿತಿಗಳನ್ನು ರಚಿಸಿದ್ದಾರೆ. ಅವರ ದರ್ಬಾರ್‌ನ ನಾನು ದಸರಾಗೆ ಬರುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. 

ಇನ್ನೂ ಕೆಲ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next