Advertisement
ತಾಲೂಕಿನ ಮಧುರೆ, ದೊಡ್ಡಬೆಳವಂಗಲ,ಸಾಸಲು,ಕೊನಘಟ್ಟ,ಬಾಶೆಟ್ಟಹಳ್ಳಿ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
Related Articles
Advertisement
ತನ್ನ ಸ್ವ ಕ್ಷೇತ್ರದಲ್ಲಿ ವಿರೋಧವಿದ್ದರೂ ಇಲ್ಲಿನ ಜನತೆಯ ನೀರಿನ ಬವಣೆ ನೀಗಿಸಲು ಭಗೀರಥ ಪ್ರಯತ್ನ ನಡೆಸುತ್ತಿರುವ ವೀರಪ್ಪ ಮೊಯ್ಲಿ ಕಾರ್ಯ ಪ್ರಶಂಸನೀಯವಾಗಿದೆ. ತುಮಕೂರಿನಲ್ಲಿ ದೇವೇಗೌಡ ಹಾಗೂ ಚಿಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಗೆದ್ದಾಗ ಮಾತ್ರ ಈ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯವೆಂದರು.
ನೀರಿನ ಬವಣೆ ನೀಗಿಸಲು ಪಣ: ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಬಯಲು ಸೀಮೆಗೆ ನೀರು ಹಸಿರುವುದನ್ನು ತಡೆಯಲು ಬಿಜೆಪಿ ಅನೇಕ ಪ್ರಯತ್ನ ನಡೆಸುತ್ತಿದೆ. ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟಕ್ಕೆ ಬೆಂಬಲ, ಕೆ.ಸಿ.ವ್ಯಾಲಿ ಮುಂತಾದ ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ.
ಆದರೆ, ಯಾವುದೇ ಅಡ್ಡಿ ಎದುರಾದರೂ ಎರಡು ವರ್ಷದಲ್ಲಿ ಕ್ಷೇತ್ರಕ್ಕೆ ಎತ್ತಿನಹೊಳೆ ನೀರನ್ನು ಹರಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ. ನನಗೆ ಅಧಿಕಾರದ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಿ, ಸಂಸದನಾಗಿ ಹೀಗೆ ಅನೇಕ ಹುದ್ದೆಯನ್ನು ಅನುಭವಿಸಿದ್ದೇನೆ. ಆದರೆ, ನನ್ನ ಕ್ಷೇತ್ರದ ಜನತೆಯ ನೀರಿನ ಬವಣೆ ತೀರಿಸಬೇಕೆನ್ನುವುದೇ ನನ್ನ ಗುರಿಯಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಜಯಮ್ಮಲಕ್ಷಿನಾರಾಯಣ್, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಲಕ್ಷಿಪತಯ್ಯ, ಸ್ಥಾಯಿ ಸಮಿತಿ ಸದಸ್ಯ ಚುಂಚೇಗೌಡ, ತಾಪಂ ಸದಸ್ಯರಾದ ಶಂಕರಪ್ಪ, ಚನ್ನಮ್ಮ ಮಾಜಿ ಸದಸ್ಯ ದಯಾನಂದಸ್ವಾಮಿ,
ಸಾಮಾಜಿಕ ಜಾಲತಾಣ ಸಂಚಾಲಕ ಕಿರಣ್ ವಿ.ಗೌಡ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲೋಹಳ್ಳಿ ಪುನಿತ್, ಮುಖಂಡರಾದ ಪುಷ್ಪಾ, ರೇವತಿ, ರಾಜಗೋಪಾಲ್, ರಾಮಣ್ಣ, ಮುನಿಶ್ಯಾಮಣ್ಣ, ಬೈರೇಗೌಡ, ದೇವರಾಜಮ್ಮ, ಕೃಷ್ಣಮೂರ್ತಿ, ಲಕ್ಷಿನಾರಾಯಣ, ವಿಶ್ವನಾಥರೆಡ್ಡಿ ಮತ್ತಿತರರು ಭಾಗವಹಿಸಿದ್ದರು.