Advertisement

ಅಲರ್ಜಿಕ್‌ ರಿನಿಟಿಸ್‌: ಒಂದು ತೀವ್ರ ಮತ್ತು ದೀರ್ಘ‌ಕಾಲದ ರೋಗ

12:30 AM Feb 13, 2019 | |

ಈ ಸಮಸ್ಯೆ ಬಹಳ ಸಾಮಾನ್ಯವಾಗಿ ಕಾಣಬಹುದು, ಆದರೆ ಇದರ ಲಕ್ಷಣಗಳಿಂದ ಶರೀರದ ಮೇಲೆ ಬಹಳವಾದ ಪ್ರಭಾವ ತೋರಿಸುತ್ತದೆ. ಇದು ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳಲ್ಲಿ ಕಾಡುತ್ತದೆ. ಮಕ್ಕಳು ಶಾಲೆಗೆ ಹೋಗದೆ ಇರುವಾಗ ತಮ್ಮ ಅಭ್ಯಾಸದಲ್ಲಿ ಹಿಂದುಳಿಯುತ್ತಾರೆ. ಮತ್ತೆ ದೊಡ್ಡವರಲ್ಲಿ ಅವರ ಕೆಲಸದ ಮೇಲೆ ಪ್ರಭಾವ ತೋರಿಸುತ್ತದೆ. ಇದು ಅವರ ಶರೀರ ಮತ್ತು ಮಾನಸಿಕ ಅಲ್ಲದೆ ಸಾಮಾಜಿಕ ಪರವಾಗಿ ಕೂಡ ಪ್ರಭಾವ ತೋರಿಸುತ್ತದೆ. ಕೆಲವರಿಗೆ ಈ ಸಮಸ್ಯೆಯು ವಾತಾವರಣ ಬದಲಾದಾಗ ಕಾಣಿಸಿಕೊಳ್ಳುತ್ತದೆ, ಮತ್ತೆ ಕೆಲವರು ವರ್ಷಪೂರ್ತಿ ಈ ಸಮಸ್ಯೆಯಿಂದ ನರಳುತ್ತಾರೆ. 

Advertisement

ಸಾಮಾನ್ಯವಾಗಿ ಮನುಷ್ಯನ ರೋಗನಿರೋಧಕ ಶಕ್ತಿಯ ವ್ಯವಸ್ಥೆಯು ಕಡಿಮೆಯಾಗಿ ಹೊರಗಿನ ಅಂಶಗಳೊಂದಿಗೆ ಹೋರಾಡಲು ಅಶಕ್ತವಾದಾಗ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ರೋಗನಿರೋಧಕ ಶಕ್ತಿಯು ಹೋರಾಡುವಾಗ ಹಿಸ್ಟಮಿನ್ನಂತಹ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಯಾವುದೇ ವಸ್ತುವಿಗೆ ಶರೀರವು ಹೆಚ್ಚಾಗಿ ಪ್ರತಿಕ್ರಿಯೆ ತೋರಿಸುವುದನ್ನು ಅಲರ್ಜಿ ಎನ್ನುತ್ತಾರೆ. ಮತ್ತೆ ಆ ಪ್ರತಿಕ್ರಿಯೆಯನ್ನು ಅಲರ್ಜಿಕ್‌ ರಿಯಾಕ್ಷನ್‌ ಎನ್ನುತ್ತಾರೆ.

ಅಲರ್ಜಿಕ್‌ ರಿನಿಟಿಸ್‌: ಅಲರ್ಜಿಯು ಶ್ವಾಸನಾಳಗಳಿಂದ ಶರೀರವನ್ನು ಪ್ರವೇಶ ಮಾಡಿದಾಗ ರೋಗನಿರೋಧಕ ಶಕ್ತಿಯು ಹೋರಾಡುವಾಗ ಕೆಲವು ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳೆಂದರೆ ಮೂಗು ಸೋರುವುದು, ಮೂಗಿನಿಂದ ಉಸಿರಾಡಲು ಕಷ್ಟವಾಗುವುದು. ಇವುಗಳನ್ನು ಅಲರ್ಜಿಕ್‌ ರಿನಿಟಿಸ್‌ ಎನ್ನುತ್ತಾರೆ.

ಅಲರ್ಜಿಕ್‌ ರಿನಿಟಿಸ್‌ನಲ್ಲಿ ಎರಡು ತರಹ
1) ಸೀಸನಲ್‌ ಅಲರ್ಜಿಕ್‌ ರಿನಿಟಿಸ್‌: ಕೆಲವು ಹವಾಮಾನದಲ್ಲಿ ಮಾತ್ರ ಕಾಣಿಸುತ್ತದೆ. ಕೆಲವು ರೀತಿಯ ಗಿಡಗಳು ಹಾಗೂ ಹೂವಿನ ಕುಸುಮದಿಂದಲೂ ಅಲರ್ಜಿ ಉಂಟಾಗುತ್ತದೆ.
2) ಪೆರಿನಿಯಲ್‌ ಅಲರ್ಜಿಕ್‌ ರಿನಿಟಿಸ್‌: ವರ್ಷಪೂರ್ತಿ ಕಾಣಿಸುತ್ತದೆ. ಹೀಗೆ ಅಲರ್ಜಿಯಲ್ಲಿ ವಿಧಗಳಿರುತ್ತವೆ. ಧೂಳು, ಪ್ರಾಣಿಗಳ ಕೂದಲು, ಜಿರಳೆಯಂತಹ ಅಲರ್ಜಿಗಳಿಂದ ಸೋಂಕು ಉಂಟಾಗಿ ಅಲರ್ಜಿ ಉಂಟಾಗುತ್ತದೆ.
ಕಾರಣಗಳು: ಸಾಮಾನ್ಯವಾಗಿ ಅಲರ್ಜಿಗಳು ಶರೀರವನ್ನು ಪ್ರವೇಶಿಸಿದಾಗ ಅವುಗಳಿಂದ ರಕ್ಷಿಸಲು ಕೆಲವೊಮ್ಮೆ ರೋಗನಿರೋಧಕ ಶಕ್ತಿಯು ಹೋರಾಡುವಾಗ ಹಿಸ್ಟಮಿನ್ನಂತಹ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವುಗಳಿಂದ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಲಕ್ಷಣಗಳು ಈ ತರಹವಾಗಿ ಇರುತ್ತವೆ
ಹೆಚ್ಚಾಗಿ ಸೀನು ಬರುವುದು, ಮೂಗು ಸೋರುವುದು, ಮೂಗು ಮತ್ತು ಕಣ್ಣುಗಳ ತುರಿಸುವಿಕೆ, ಕಣ್ಣುಗಳಿಂದ ನೀರು ಬರುವುದು, ಕಣ್ಣಿನ ಒಳಚರ್ಮದ ಊತ ಕಂಡುಬರುವುದು, ಗಂಟಲಿನಲ್ಲಿ ತುರಿಕೆ, ತಲೆನೋವು, ಮುಖದ ಊತ ಕಂಡುಬರುವುದು, ಮೈಕೈ ನೋವು ಮತ್ತು ಸುಸ್ತು ಆಗುವುದು.
ಹೆಚ್ಚಾಗಿ ಚರ್ಮದ ತುರಿಕೆ ಹಾಗೂ ಚರ್ಮದ ಅಲರ್ಜಿ ಮೊದಲಾದ ಲಕ್ಷಣಗಳನ್ನು ಕಾಣಬಹುದು.
ತೊಡಕುಗಳು: ಅಲರ್ಜಿಕ್‌ ರಿನಿಟಿಸ್‌ ಸಮಸ್ಯೆಯನ್ನು ನಿರ್ಲಕ್ಷ ಮಾಡಿ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೆ ಹಾಗೇ ಇದ್ದರೆ ಇದು ದೀರ್ಘ‌ಕಾಲದಿಂದ ಉಂಟಾಗುವ ಅಸ್ತಮಾ ಸಮಸ್ಯೆ, ಕಿವಿ ಇನೆ#ಕ್ಷನ್‌ಗಳಿಗೆ ದಾರಿ ಮಾಡಿಕೊಡುತ್ತದೆ. ನಿದ್ರೆ ಬರದಂತಹ ಸಮಸ್ಯೆಗಳು ಬರಬಹುದು.
ರೋಗದ ದೃಢೀಕರಣ ಪರೀಕ್ಷೆಗಳು: ಹೆಚ್ಚಾಗಿ ರೋಗಿ¬ಗಳ ಲಕ್ಷಣಗಳಿಗೆ ಅನುಸಾರವಾಗಿ ರೋಗವನ್ನು ನಿರ್ಧಾರ ಮಾಡಬಹುದು. ಸಿಬಿಪಿ, ಇಎಸ್‌ಆರ್‌, ನಮ್ಮ ಶರೀರದಲ್ಲಿ ಒಂದು ಅಲರ್ಜಿಯು ಎಷ್ಟರ ಮಟ್ಟಿಗೆ ಇದೆಯೆಂದು ತಿಳಿದುಕೊಳ್ಳುವುದಕ್ಕೆ ಇದು ಪರೀಕ್ಷೆ ಮಾಡಿಸಿಕೊಳ್ಳಬಹುದು. 

Advertisement

ರೋಗಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು:
 - ಮುಂಜಾನೆಯಲ್ಲಿ ಹೊರಗಡೆ ವ್ಯಾಯಾಮ ಮಾಡಬಾರದು.
– ಹೊರಗಡೆಯಿಂದ ಬಂದ ಮೇಲೆ ಸ್ನಾನ ಮಾಡಬೇಕು.
– ಮೂಗು ಮತ್ತು ಬಾಯಿಗೆ ಮಾಸ್ಕ್ ಧರಿಸಬೇಕು.
– ತಂಪಾದ ನೀರನ್ನು, ಐಸ್ಕ್ರೀಮಳನ್ನು ತಗೆದುಕೊಳ್ಳಬಾರದು.
– ಧೂಳಿನಿಂದ ದೂರ ಇರಬೇಕು.
– ಸಾಕು ಪ್ರಾಣಿಗಳು ಮತ್ತು ಜಿರಳೆಯಿಂದ ದೂರವಿರಬೇಕು. 
– ಈ ಮುಂಜಾಗ್ರತೆಗಳನ್ನು ಪಾಲಿಸಿದರೆ ರೋಗವನ್ನು ನಿಯಂತ್ರಣದಲ್ಲಿಡಬಹುದು.

ಹೋಮಿಯೊಕೇರ್‌ ಚಿಕಿತ್ಸೆ: ಸಾಮಾನ್ಯವಾಗಿ ಅಲರ್ಜಿಗಳು ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾದಾಗ ಕಾಣಿಸಿಕೊಳ್ಳುತ್ತವೆ. ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಸರಿಯಾಗಿ ಮಾಡಿಕೊಳ್ಳುವುದಾದರೆ, ಈ ರೋಗವನ್ನು ಕಾನ್ಸಿಟಿಟ್ಯೂಷನಲ್‌ ಹೋಮಿಯೊ ಚಿಕಿತ್ಸೆಯಿಂದ ಸಾಧ್ಯವಾಗುತ್ತದೆ. ಇವುಗಳು ಕಾನ್ಸಿಟಿಟ್ಯೂಷನಲ್‌ ಹೋಮಿಯೊ ಚಿಕಿತ್ಸೆಯ ಹೋಮಿಯೊರ್ಕೇ ಇಂಟನ್ಯಾìಷನಲ್ನಲ್ಲಿ ಸಾಧ್ಯವಾಗುತ್ತದೆ. ಇದರಿಂದ ರೋಗದಿಂದ ಹೊರಬರುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲವಾಗಿ ಮತ್ತು ರೋಗವನ್ನು ತಿರುಗಿ ಬರದ ಹಾಗೆ ನಿಯಂತ್ರಣದಲ್ಲಿ ಇಡಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 
ಹೋಮಿಯೋ ಕೇರ್‌ ಇಂಟರ್‌ನ್ಯಾಷನಲ್‌
9550001133, 
ಉಚಿತ ಕರೆ: 18001081212

ಶಾಖೆಗಳು: 
ಬೆಂಗಳೂರು(ಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಎಚ್‌.ಎಸ್‌.ಆರ್‌ ಲೇಔಟ್‌), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್‌, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ

Advertisement

Udayavani is now on Telegram. Click here to join our channel and stay updated with the latest news.

Next