Advertisement

ಬುಕಿ ಸಂಜೀವ್‌ ಚಾವ್ಲಾ ಗಡೀಪಾರು?

09:48 AM Jan 17, 2020 | Team Udayavani |

ಲಂಡನ್‌: ಕ್ರಿಕೆಟ್‌ ಪಂದ್ಯಗಳ ಫಿಕ್ಸಿಂಗ್‌ ಪ್ರಕರಣದಲ್ಲಿ ಆರೋಪಿಯಾಗಿ, ತಲೆಮರೆಸಿಕೊಂಡು ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಬುಕಿ ಸಂಜೀವ್‌ ಚಾವ್ಲಾ, ಭಾರತಕ್ಕೆ ಹಸ್ತಾಂತರಗೊಳ್ಳುವ ಘಳಿಗೆ ಸಮೀಪಿಸಿದೆ.

Advertisement

ತಮ್ಮ ಹಸ್ತಾಂತರಕ್ಕೆ ಕಳೆದ ವರ್ಷ ಯು.ಕೆ. ಸರಕಾರ ನೀಡಿದ್ದ ಆದೇಶ ರದ್ದುಗೊಳಿಸುವಂತೆ ಚಾವ್ಲಾ ಸಲ್ಲಿಸಿದ್ದ ಮನವಿಯನ್ನು ಯು.ಕೆ. ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಭಾರತ-ಯು.ಕೆ. ನಡುವಿನ ಆರೋಪಿಗಳ ಹಸ್ತಾಂತರ ಒಪ್ಪಂದದ ಪ್ರಕಾರ, ನ್ಯಾಯಾಲಯದ ಆದೇಶ ಹೊರಬಿದ್ದ ದಿನದಿಂದ 28 ದಿನಗಳ ಒಳಗಾಗಿ ಚಾವ್ಲಾರನ್ನು ಹಸ್ತಾಂತರಗೊಳಿಸುವ ಪ್ರಕ್ರಿಯೆಯನ್ನು ಯು.ಕೆ. ಗೃಹ ಸಚಿವಾಲಯ ಪೂರ್ತಿಗೊಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next