Advertisement

Bribe: ಲಂಚ ಸ್ವೀಕಾರ ಆರೋಪ: ಕೇಂದ್ರೀಯ ವಿ.ವಿ. ಪ್ರೊಫೆಸರ್‌ ಬಂಧನ

12:45 AM Jan 12, 2024 | Team Udayavani |

ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತೆರವಿರುವ ತಾತ್ಕಾಲಿಕ ಪ್ರಾಧ್ಯಾಪಕರ ಒಪ್ಪಂದದ ನವೀಕರಣೆ ಮತ್ತು ಪಿಎಚ್‌ಡಿಗೆ ಪ್ರವೇಶ ಕೊಡಿಸುವ ಹೆಸರಿನಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಪ್ರಸ್ತುತ ವಿ.ವಿ.ಯ ಸೋಶ್ಯಲ್‌ ವರ್ಕ್‌ ವಿಭಾಗದ ಪ್ರೊಫೆಸರ್‌ ಎ.ಕೆ.ಮೋಹನನ್‌ ವಿಜಿಲೆನ್ಸ್‌ ಬಂಧಿಸಿದೆ.

Advertisement

ಪ್ರಸ್ತುತ ವಿ.ವಿ.ಯ ಸೋಶ್ಯಲ್‌ ವರ್ಕ್‌ ವಿಭಾಗದಲ್ಲಿ ಒಪ್ಪಂದದ ಆಧಾರದಲ್ಲಿ ನಡೆಸಲಾದ ಅಧ್ಯಾಪಕ ನೇಮಕಾತಿಯ ಅವಧಿ ಡಿಸೆಂಬರ್‌ನಲ್ಲಿ ಕೊನೆಗೊಂಡಿತ್ತು. ಅದನ್ನು ನವೀಕರಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಅದರಲ್ಲಿ ಮತ್ತೆ ನೇಮಕಾತಿ ಲಭಿಸಲು ಹಾಗು ಮುಂದೆ ಪಿಎಚ್‌ಡಿ ಪ್ರವೇಶಕ್ಕಾಗಿರುವ ಅರ್ಜಿ ಸಲ್ಲಿಸಲು ಹಾಗು ಹೀಗೆ ಸಲ್ಲಿಸಲಾಗುವ ಅರ್ಜಿಗಳನ್ನು ಡಿಪಾರ್ಟ್‌ಮೆಂಟ್‌ ರಿಸರ್ಚ್‌ ಸಮಿತಿ ಅಂಗೀಕರಿಸಬೇಕಾಗಿದ್ದಲ್ಲಿ ಎರಡು ಲಕ್ಷ ರೂ. ಲಂಚ ಕೇಳಲಾಗಿದೆ ಎಂದೂ ಅದರ ಮೊದಲ ಕಂತನ್ನು ಜ.12 ರೊಳಗೆ ನೀಡಬೇಕೆಂದು ಮೋಹನನ್‌ ಆಗ್ರಹಿಸಿದ್ದರೆಂದು ರಾಜ್ಯ ವಿಜಿಲೆನ್ಸ್‌ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next