Advertisement

ಎಲ್ಲಾ ಅನಧಿಕೃತ ಕಾಲೋನಿಗಳಿಗೆ ಎರಡು ವರ್ಷಗಳಲ್ಲಿ ಪೈಪ್ ನೀರು ಸರಬರಾಜು : ಸಿಸೋಡಿಯಾ

06:50 PM Mar 09, 2021 | Team Udayavani |

ನವ ದೆಹಲಿ : ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಅನಧಿಕೃತ ಕಾಲೋನಿಗಳಿಗೆ ಪೈಪ್ ನೀರು ಸರಬರಾಜು ಹಂತ ಹಂತವಾಗಿ ಪೂರೈಸಲಾಗುವುದು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

Advertisement

2021-22ರ ಆರ್ಥಿಕ ವರ್ಷಕ್ಕೆ ದೆಹಲಿ ಜಲ ಮಂಡಳಿಯ (ಡಿಜೆಬಿ) ಯೋಜನೆಗಳಿಗಾಗಿ ಸರ್ಕಾರ  3,274 ಕೋಟಿಗಳನ್ನು ಬಿಡುಗಡೆಗೊಳಿಸಿದೆ.

ಓದಿ : ರಾಜ್ಯದಲ್ಲಿ ಸೆಲ್ಫ್ ಡಿಫೆನ್ಸ್ ಆರ್ಮಿ ರಚನೆ : ಗೃಹ ಸಚಿವ ಬಸವರಾಜ ಬೊಮ್ಮಾಯಿ

ಇದರಲ್ಲಿ 20 ಕಿಲೋಲಿಟರ್ ಉಚಿತ ನೀರು ಸಬ್ಸಿಡಿ ಯೋಜನೆಗೆ 600 ಕೋಟಿ, ಈ ಯೋಜನೆಯ ಅಡಿಯಲ್ಲಿ  ಪ್ರತಿ ತಿಂಗಳು ಸುಮಾರು 6 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಸಿಸೋಡಿಯಾ ವಿವರಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟು 1,799 ಅನಧಿಕೃತ ಕಾಲೋನಿಗಳಿವೆ.

Advertisement

ಈ ಪೈಕಿ 1,622 ಈಗ ಡಿಜೆಬಿಯ ಕೊಳವೆ ನೀರು ಸರಬರಾಜು ಜಾಲದ ಅಡಿಯಲ್ಲಿ ಬರುತ್ತವೆ ಎಂದು ಶ್ರೀ ಸಿಸೋಡಿಯಾ ಹೇಳಿದ್ದಾರೆ.

ಬಜೆಟ್ ಮಂಡಿಸಿದ ಉಪ ಮುಖ್ಯಮಂತ್ರಿ, ರಾಷ್ಟ್ರ ರಾಜಧಾನಿಯಲ್ಲಿನ ಶೇಕಡಾ 93 ಕುಟುಂಬಗಳಿಗೆ ಈಗ ಕೊಳವೆ ನೀರು ಸರಬರಾಜು ಸೌಲಭ್ಯವಿದೆ. ಇಂಟರ್ಸೆಪ್ಟರ್ ಒಳಚರಂಡಿ ಯೋಜನೆ (ಐಎಸ್ಪಿ) ಸಹ ಶೇಕಡಾ 99 ರಷ್ಟು ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

ಓದಿ : ಗ್ರಾಹಕಸ್ನೇಹಿ ಸೇವೆಯಿಂದ ಸೊಸೈಟಿ ಅಭಿವೃದ್ಧಿಯತ್ತ: ರತ್ನಾಕರ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next