Advertisement
ಎಲ್ಲ ಕಾಲವೂ ವಸಂತವಲ್ಲ ಎನ್ನುವುದನ್ನು ವಸಂತ ಮಾಸದಲ್ಲಿಯೇ ಮತ್ತೆ ಮತ್ತೆ ಹೇಳಿಕೊಳ್ಳಬೇಕು. ಅಂದರೆ ಜೀವನ ಒಂದೇ ರೀತಿಯಲ್ಲಿ ಇರುವುದಿಲ್ಲ ಎನ್ನುವುದನ್ನು ನಾವು ಎಲ್ಲ ರೀತಿಯಿಂದಲೂ ಚೆನ್ನಾಗಿರುವಾಗಲೇ ಹೇಳಿಕೊಳ್ಳಬೇಕು.
ಜೀವನ ಚಕ್ರದ ಅಗತ್ಯಗಳು. ಬಡವನಿರಲಿ ಶ್ರೀಮಂತನಿರಲಿ, ಜೀವನದಲ್ಲಿ ಕೆಲವು ಸಂದರ್ಭಗಳು ಬಂದೇ ಬರುತ್ತವೆ. ಒಬ್ಬ ವ್ಯಕ್ತಿಯ 30 ನೇ ವರ್ಷದಿಂದ ಸುಮಾರು 60 ನೇ ವರ್ಷದ ಅವಧಿಯ ವರೆಗೆ ಅಂದರೆ 30 ವರ್ಷಗಳ ಜೀವಿತಾವಧಿಯಲ್ಲಿ ವ್ಯಕ್ತಿ ಆರ್ಥಿಕವಾಗಿ ದುಡಿಯುವ ಶಕ್ತಿಯನ್ನು ಪಡೆದುಕೊಂಡಿರುವ ಕಾಲ. ತನ್ನ ಕನಸುಗಳನ್ನು ಸಾಕಾರ ಮಾಡಿಕೊಳ್ಳುವ ಕಾಲವೂ ಇದಾಗಿರುತ್ತದೆ. ಈ ವಯಸ್ಸಿನಲ್ಲಿ ಎದುರಾಗಬಹುದಾದ ಸಂದರ್ಭಗಳೆಂದರೆ ಮದುವೆ, ಮಕ್ಕಳು, ಮಕ್ಕಳ ಶಿಕ್ಷಣ, ಮಕ್ಕಳ ಜವಾಬಾœರಿ, ಅವರಿಗೆ ಉತ್ತಮ ಬದುಕು ರೂಪಿಸಿಕೊಡುವುದು, ಸ್ವಂತ ಮನೆ ಹೊಂದಬೇಕೆಂಬ ಕನಸು, ಮನೆ ಇದ್ದರೆ ಅದನ್ನು ರಿಪೇರಿ ಮಾಡಿಸುವ ಅಥವಾ ಹೊಸ ಮನೆ ಕಟ್ಟುವ ಗುರಿ, ಇಳಿ ವಯಸ್ಸಿನ ತಂದೆ ತಾಯಿಯರಿಗೆ ಅನಾರೋಗ್ಯದ ಸಮಸ್ಯೆ ಎದುರಾದರೆ ವ್ಯದ್ಯಕೀಯ ವೆಚ್ಚ ಇವೆಲ್ಲವೂ ನಿರೀಕ್ಷಿತ ಖರ್ಚುಗಳಾಗುತ್ತದೆ. ಆದರೆ ಕೆಲವೊಮ್ಮ ಅಪಘಾತ, ಅನಾರೋಗ್ಯ, ವೃತ್ತಿಯಲ್ಲಿ ಏರು ಪೇರು, ಉದ್ಯಮದಲ್ಲಿ ನಷ್ಠ ಇತ್ಯಾದಿಯೂ ಎದುರಾಗಬಹುದು. ಅನಿರಿಕ್ಷಿತ ಸಂದರ್ಭಗಳನ್ನು ಶ್ರೀಮಂತರು ಹೇಗೋ ಇಂತಹ ನಿಭಾಯಿಸಬಹುದು. ಆದರೆ ಮಧ್ಯಮವರ್ಗ ಮಾತ್ರ ಇಂತಹ ಆಘಾತಗಳಿಂದ ತತ್ತರಿಸುತ್ತದೆ. ಮುಖ್ಯವಾಗಿ, ಒಂದು ಕುಟುಂಬದ ವಾತಾವರಣವೇ ಬದಲಾಗುತ್ತದೆ. ಗುಣಮಟ್ಟದ ಜೀವನ ನಡೆಸುವುದು ಕಷ್ಟವಾಗುತ್ತದೆ. ಸಂಕಷ್ಟವೆಂದರೆ ಆರ್ಥಿಕ ಸಂಕಷ್ಟವೆಂದೇ ಹೇಳಬೇಕಾದ ಕಾಲದಲ್ಲಿ ನಾವು ಇದ್ದೇವೆ. ಹೀಗೆ ಸಮಸ್ಯೆ ಆದಾಗ ಸಾಲಕ್ಕೆ ಮೊರೆ ಹೋಗುವುದು ಸಾಮಾನ್ಯ. ಹಾಗೆ ಸಾಲ ಮಾಡಿದಾಗ, ಅದೂ ಕಷ್ಟಕಾಲದಲ್ಲಿ ಒಂದೆಡೆ ಹರಿದು ಇನ್ನೊಂದೆಡೆ ಹೊಲಿದ ಹಾಗೆ. ಮತ್ತೆ ಇನ್ನೊಂದೆಡೆ ಹೊಲಿಯಲು ಮತ್ತೂಂದೆಡೆ ಹರಿಯಬೇಕು. ಸಾಲ ಎನ್ನುವುದು ಸುಳಿಯಹಾಗೆ ಎಳೆದುಕೊಳ್ಳುತ್ತದೆ.ಸಾಲದೊಂದಿಗೆ ಸಂಬಂಧಗಳನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಆರ್ಥಿಕ ಸಂಕಷ್ಠ ಭವಿಷ್ಯದ ಬಗೆಗಿನ ಭರವಸೆಯನ್ನೇ ಕಸಿದುಕೊಳ್ಳುವಷ್ಟು ಸಶಕ್ತವಾಗಿರುತ್ತದೆ.
Related Articles
Advertisement
– ಸುಧಾಶರ್ಮ ಚವತ್ತಿ