Advertisement

ಕಾಂಗ್ರೆಸ್‌ನಿಂದ ಹೊರ ಹೋದವರೆಲ್ಲ ಒಡೆಯರೇ!

01:32 AM Mar 19, 2021 | Team Udayavani |

ಕಾಂಗ್ರೆಸ್‌ ಹೋಳಾಗುವುದು, ಮತ್ತೆ ಸೇರುವ ಪ್ರಕ್ರಿಯೆ ಅಲ್ಲಿಗೇ ನಿಲ್ಲಲಿಲ್ಲ. 2003ರಲ್ಲಿ ಪಿ.ಸಿ. ಜಾರ್ಜ್‌ ತಮ್ಮ ಪಕ್ಷದ ಮುಖಂಡ ಪಿ.ಜೆ. ಜೋಸೆಫ್ರ ಕಾಂಗ್ರೆಸ್‌(ಜೆ)ಯಿಂದ ಹೊರಬಂದು ಕೇರಳ ಪ್ರದೇಶ (ಸೆಕ್ಯುಲರ್‌)ನ್ನು ಸ್ಥಾಪಿಸಿದರು. ಅಲ್ಲಿಗೆ ಕಾಂಗ್ರೆಸ್‌(ಎಸ್‌) ಆಟ ಆರಂಭವಾಯಿತು. ಮತ್ತೆರಡು ವರ್ಷ ಗಳಲ್ಲಿ ಈ ಐಎಫ್ಡಿಪಿ ಜೋಸೆಫ್ರ ಕಾಂಗ್ರೆಸ್‌ನಲ್ಲಿ ವಿಲೀನವಾದರೆ, ಈ ಎಸ್‌ ಕಾಂಗ್ರೆಸ್‌ನ ಜಾರ್ಜ್‌ ತಮ್ಮ ಪಕ್ಷ ದೊಂದಿಗೆ ಮಾಣಿ ಗುಂಪಿನ ಕಾಂಗ್ರೆಸ್‌ ಸೇರಿದರು. ಆದರೆ ಆ ಸೆಕ್ಯುಲರ್‌ನಲ್ಲಿದ್ದ ಒಂದು ಗುಂಪು ವಿಲೀನಕ್ಕೆ ಒಪ್ಪದೇ ತಮ್ಮನ್ನು ತಾವು ಕೇರಳ ಕಾಂಗ್ರೆಸ್‌ (ಸೋಶಿಯಲಿಸ್ಟ್‌) ಎಂದು ಕರೆದುಕೊಂಡಿತು. ಕ್ರಮೇಣ ಇದು
ಜೆಡಿಎಸ್‌ನೊಂದಿಗೆ ವಿಲೀನಗೊಂಡಿತು.

Advertisement

1979ರ ಸುಮಾರಿನಲ್ಲಿ ಎಲ್ಲ ಕಾಂಗ್ರೆಸ್‌ನ್ನು ಒಟ್ಟುಗೂಡಿಸುವ ಅನಧಿಕೃತ ಪ್ರಯತ್ನಗಳು ನಡೆಯಿತಾದರೂ ಯಶಸ್ವಿ ಯಾಗಲಿಲ್ಲ. ಅದೇ ರೀತಿ 2007ರಲ್ಲಿ ಈ ಎಂ, ಎಸ್‌, ಬಿ ಹಾಗೂ ಜಾಕೋಬ್‌ ಪಕ್ಷಗಳನ್ನು ಒಟ್ಟುಗೂಡಿಸಲು ವಿಫ‌ಲ ಪ್ರಯತ್ನ ನಡೆಯಿತು.
2010ರಲ್ಲಿ ಈ ಮಾಣಿ ಕಾಂಗ್ರೆಸ್‌ ಮತ್ತು ಜೋಸೆಫ್ ಗುಂಪು ಒಟ್ಟಾ ಗಿ ಎಲ್‌ಡಿಎಫ್ನಿಂದ ಹೊರಬರಲು ನಿರ್ಧರಿಸಿತು. ಅದನ್ನು ವಿರೋಧಿಸಿದ್ದು ಜೋಸೆಫ್ ಕಾಂಗ್ರೆಸ್‌ನಲ್ಲಿದ್ದ ಪಿ.ಸಿ. ಥಾಮಸ್‌. ಹಾಗಾಗಿ ಪಿ.ಸಿ. ಥಾಮಸ್‌ ಕೇರಳ ಕಾಂಗ್ರೆಸ್‌ (ವಿಲೀನಕ್ಕೆ ವಿರೋಧ ಗುಂಪು) ಎಂದು ಗುರುತಿಸಿಕೊಂಡು ಎಸ್‌. ಥಾಮಸ್‌ ಜತೆ ಉಳಿದುಕೊಂಡು ಎಲ್‌ಡಿಎಫ್ನೊಂದಿಗೆ ಮುಂದುವರಿದರು. ಕ್ರಮೇಣ ಈ ಪಿ.ಸಿ. ಥಾಮಸ್‌ ಕೇರಳ ಕಾಂಗ್ರೆಸ್‌ (ಥಾಮಸ್‌) ಎಂದು ರಚಿಸಿಕೊಂಡು ಎನ್‌ಡಿಎ ಜತೆಗೆ ಫೋಟೋಗೆ ನಿಂತರೆ, ಎಸ್‌. ಥಾಮಸ್‌ ತಮ್ಮದೇ ಪಕ್ಷ ಕೇರಳ ಕಾಂಗ್ರೆಸ್‌ (ಸ್ಕೇರಿಯಾ ಥಾಮಸ್‌) ಎಂದು ಹೇಳಿ ಎಲ್‌ಡಿಎಫ್ ಜತೆಗೆ ಕುಳಿತರು.

2011ರ ವಿಧಾನಸಭಾ ಚುನಾವಣೆ ಯಲ್ಲಿ ಪಿ.ಜೆ. ಜೋಸೆಫ್ ಮತ್ತು ಪಿ.ಸಿ. ಥಾಮಸ್‌ ಇಬ್ಬರೂ ಸೈಕಲ್‌ ಗುರುತಿನಲ್ಲಿ ಕೇರಳ ಕಾಂಗ್ರೆಸ್‌ ಎಂದು ಕರೆದುಕೊಂಡರು. ಆಗ ಚುನಾವಣ ಆಯೋಗ ಕೇರಳ ಕಾಂಗ್ರೆಸ್‌ ಹೆಸರಿನಲ್ಲಿ ಪಕ್ಷವನ್ನು ನೋಂದಣಿ ಮಾಡುವುದನ್ನು ತಾತ್ಕಾಲಿಕವಾಗಿ ತಡೆಯಿತು. ಜತೆಗೆ ಮಾಣಿ ಗುಂಪಿನ ಜತೆಗೆ ಗುರುತಿಸಿಕೊಂಡ ಜಾಕೋಬ್‌ ಕಾಂಗ್ರೆಸ್‌ಗೆ ಒಟ್ಟಾಗಿ ಕೇರಳ ಕಾಂಗ್ರೆಸ್‌(ಎಂ) ಅಡಿ ಜೋಡಿ ಎಲೆ ಚಿಹ್ನೆ ಗುರುತಿನೊಂದಿಗೆ ಸ್ಪರ್ಧಿಸಲು ಸೂಚಿ ಸಲಾಯಿತು. ಪಿ. ಸಿ. ಥಾಮಸ್‌ ಅವರ ಗುಂಪನ್ನು ಕೇರಳ ಕಾಂಗ್ರೆಸ್‌ (ವಿಲೀನ ವಿರೋಧಿ ಗುಂಪು ಎಂದೇ ಪರಿಗಣಿಸಿ ಕುರ್ಚಿಯ ಚಿಹ್ನೆಯನ್ನು ನೀಡಲಾಯಿತು.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೇರಳ ಕಾಂಗ್ರೆಸ್‌ನಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ವಿಷಯ ದಲ್ಲಿ ಗೊಂದಲ ಏರ್ಪಟ್ಟಿತು. ಆ ಸಂದರ್ಭದಲ್ಲಿ ನೋಬಲ್‌ ಮ್ಯಾಥ್ಯೂ ಕಾಂಗ್ರೆಸ್‌ನಿಂದ ಹೊರಬಂದು ಕೇರಳ ಕಾಂಗ್ರೆಸ್‌ (ಎನ್‌)- ನ್ಯಾಶನಲಿಷ್ಟ್ ಆರಂಭಿಸಿದರು. ಬಳಿಕ ಎನ್‌ಡಿಎಯೊಂದಿಗೆ ಗುರುತಿಸಿಕೊಂಡಿತು.

2016ರಲ್ಲಿ ಕೇರಳ ಕಾಂಗ್ರೆಸ್‌ ಸಂಸ್ಥಾಪಕ ಕೆ.ಎಂ. ಜಾರ್ಜ್‌ ಅವರ ಪುತ್ರ ಫ್ರಾನ್ಸಿನ್‌ ಜಾರ್ಜ್‌ ಮತ್ತೂಂದು ಪಕ್ಷ ಕೇರಳ ಕಾಂಗ್ರೆಸ್‌ (ಡೆಮಾಕ್ರಟಿಕ್‌) ಸ್ಥಾಪಿಸಿ ಎಡರಂಗ ಮೈತ್ರಿಕೂಟದೊಂದಿಗೆ ಗುರುತಿ ಸಿಕೊಂಡರು. ಇದೇ ಸಂದರ್ಭ ಪಿ.ಸಿ. ಜಾರ್ಜ್‌ ಕೇರಳ ಜನಪಕ್ಷಂ (ಸೆಕ್ಯುಲರ್‌) ಆರಂಭಿಸಿದರು. 2019ರಲ್ಲಿ ಕೆ.ಎಂ. ಮಾಣಿ ಅವರ ನಿಧನದ ಬಳಿಕ ಫ್ರಾನ್ಸಿಸ್‌ ಕೇರಳ ಕಾಂಗ್ರೆಸ್‌ ಜೋಸೆಫ್ ಬಣಕ್ಕೆ ವಾಪಸಾದರು. ಇವರೊಂದಿಗಿನ ಇನ್ನೂ ಕೆಲವರು ಪ್ರತ್ಯೇಕವಾಗಿದ್ದುಕೊಂಡು ಕೇರಳ ಕಾಂಗ್ರೆಸ್‌ (ಡಿ) ಎಂದು ಅಸ್ತಿತ್ವ ಕಂಡುಕೊಂಡು ಎಡರಂಗ ಮೈತ್ರಿಕೂಟ ದೊಂದಿಗೆ ಸೇರಿಕೊಂಡರು.

Advertisement

ಇತ್ತೀಚಿನ ಸುದ್ದಿ ಏನೆಂದರೆ ಮಾ. 17ರಂದು ಪಿ.ಜೆ. ಜೋಸೆಫ್ ಅವರು ಪಿ.ಸಿ. ಥಾಮಸ್‌ ಅವರ ಕೇರಳ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿದ್ದು, ಹೊಸ ಪಕ್ಷ ಸ್ಥಾಪನೆಯಾಗಲಿದೆ ಎಂದಿದ್ದಾರೆ. ಆದರಿನ್ನೂ ಹೊಸ ಇನಿಶಿಯಲ್‌ ಕೊಡದ ಕಾರಣ ಇನ್ನೂ ಕೇರಳ ಕಾಂಗ್ರೆಸ್‌ ಎಂದಷ್ಟೇ ಇದೆ. ಅದರೊಂದಿಗೆ ಪಿ.ಸಿ. ಥಾಮಸ್‌ ಅವರ ಕಾಂಗ್ರೆಸ್‌ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಯುಡಿಎಫ್ ಜತೆ ಗುರುತಿಸಿಕೊಂಡಿರುವುದು ಈ ಹೊತ್ತಿನ ಸುದ್ದಿ. ಕೊನೆಯ ಆಸಕ್ತಿಕರ ಸಂಗತಿಯೆಂದರೆ, ಹೀಗೆ ಹೊರ ಹೋಗಿ ಪಕ್ಷ ಕಟ್ಟಿದವರಲ್ಲಿ ಬಹುತೇಕರು ತಮ್ಮ ತಮ್ಮ ನೆಲೆಯಲ್ಲಿ ಒಂದಿಷ್ಟು ಅಸ್ತಿತ್ವ, ಅಧಿಕಾರ ಹಾಗೂ ಪ್ರಭಾವ ಉಳಿಸಿಕೊಂಡವರೇ.

– ಅಶ್ವಘೋಷ

Advertisement

Udayavani is now on Telegram. Click here to join our channel and stay updated with the latest news.

Next