Advertisement

ಕೇರಳ ನಿಫಾ ಸೋಂಕು : ಬಾಲಕನ ಸಂಪರ್ಕಕ್ಕೆ ಬಂದವರ ವರದಿ ನೆಗೆಟಿವ್ : ಸಚಿವೆ ವೀಣಾ ಜಾರ್ಜ್‌

12:24 PM Sep 07, 2021 | Team Udayavani |

ಕೇರಳ : ನಿಫಾ ವೈರಾಣು ಸೋಂಕಿನಿಂದ ಮೃತಪಟ್ಟ 12 ವರ್ಷದ ಬಾಲಕನ ನಿಕಟ ಸಂಪರ್ಕದಲ್ಲಿದ್ದವರ ಪರೀಕ್ಷಾ ವರದಿ ಇಂದು(ಮಂಗಳವಾರ, ಸಪ್ಟೆಂಬರ್ 7) ಬಂದಿದ್ದು, ನೆಗೆಟಿವ್‌ ಇರುವುದರಿಂದ ಕೇರಳದ ಮಂದಿ ನಿಟ್ಟುಸಿರು ಬಿಡುವಂತಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

Advertisement

ಈ ಕುರಿತಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಲಕನ ಪೋಷಕರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಬಾಲಕನ ನಿಕಟ ಸಂಪರ್ಕಕ್ಕೆ ಬಂದಿದ್ದ 8 ಜನರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇವರಲ್ಲಿ ಸೋಂಕಿನ ಲಕ್ಷಣಗಳೂ ಇದ್ದವು. ಆದರೆ, ಪರೀಕ್ಷೆ ವರದಿಯು ನೆಗೆಟಿವ್‌ ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ : ಸುನೀಲ ಹೆಗಡೆಯವರಿಗೆ ನಿಗಮ ಮಂಡಳಿಯಲ್ಲಿ ಅವಕಾಶದ ಬಾಗಿಲು

“ನಿಫಾ ಸೋಂಕು ಸುಮಾರು 48 ಮಂದಿಗೆ ಹರಡುವ ಸಾಧ್ಯೆತೆ ಹೆಚ್ಚಳವಾಗಿದ್ದು, ಅವರನ್ನು ಪ್ರತ್ಯೇಕಿಸಿ ವೈದ್ಯಕೀಯ ಕಾಲೇಜಿನ ವಾರ್ಡ್ ನಲ್ಲಿ ಇರಿಸಲಾಗಿದೆ. ಸದ್ಯಕ್ಕೆ ಆ 48 ಮಂದಿಯ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಅಥವಾ ವ್ಯತ್ಯಾಸ ಕಂಡು ಬಂದಿಲ್ಲ.

ಇನ್ನು, ಈ 48 ಮಂದಿಯ ಪೈಕಿಯಲ್ಲಿ ಕೋಯಿಕ್ಕೋಡ್‌ ನ 31 ಮಂದಿ, ವಯನಾಡ್‌  ನ 4 ಮಂದಿ, ಮಲಪ್ಪುರಂ ನ  ಎಂಟು ಮಂದಿ, ಕಣ್ಣೂರಿನ 3 ಮಂದಿ ಹಾಗೂ ಪಾಲಕ್ಕಾಡ್‌, ಎರ್ನಾಕುಲಂ  ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

ಮಾತ್ರವಲ್ಲದೇ, ಇಂದು(ಮಂಗಳವಾರ, ಸಪ್ಟೆಂಬರ್ 7) ಇನ್ನಷ್ಟು ಮಾದರಿಗಳನ್ನು ಪರೀಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ಆಹ್ವಾನ ನೀಡಿದ ತಾಲಿಬಾನ್

Advertisement

Udayavani is now on Telegram. Click here to join our channel and stay updated with the latest news.

Next