Advertisement
ಗ್ರಾಮಸ್ಥರು ಪ್ರತಿಕ್ರಿಯಿಸಿ, ಬಿಎಸ್‌ಎಸ್‌ಕೆ ಪುನಃ ಆರಂಭಗೊಳ್ಳಬೇಕಾದರೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳುಸೇರಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಯಾವ ಮೂಲದಿಂದ ಕಾರ್ಖಾನೆ ಪ್ರಾರಂಭಿಸಿ ಉತ್ತಮವಾಗಿ ಕಾರ್ಯ
ನಿರ್ವಹಿಸಲು ಸಾಧ್ಯ ಎಂಬುದನ್ನು ಎಲ್ಲರೂ ಆಲೋಚಿಸಿ ಮುಂದಿನ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಹೆಚ್ಚಿದೆ
ಎಂದರು.
Related Articles
Advertisement
ಹಣ ಹಣ: ಗ್ರಾಮದ ವಿವಿಧ ಯೋಜನೆಗಳ ಫಲಾನುಭವಿಗಳು ಹಣ ನೀಡಿದರೆ ಮಾತ್ರ ಅವುಗಳ ಲಾಭ ದೊರೆಯುವಂತಾಗುತ್ತಿದೆ. ಮನೆ ಹಂಚಿಕೆಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಜಿಪಿಎಸ್ ಮಾಡಲು ಕೂಡ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ದನಗಳ ಕೊಟ್ಟಿಗೆ ನಿರ್ಮಾಣಕ್ಕೆ ಪಿಡಿಒ ಸೇರಿ ಇತರರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದಿದ್ದರೆ ಯಾವ ಕಾರ್ಯವೂ ಆಗುತ್ತಿಲ್ಲ ಎಂದು ಗ್ರಾಮದ ಲಕ್ಷ್ಮಣ ಶಾಸಕರ ಗಮನಕ್ಕೆ ತಂದರು.
ದಯಾನಂದ ರೆಡ್ಡಿ ಮಾತನಾಡಿ, ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೇಟ್ರಿಕ್ ಅಳವಡಿಸಿದ್ದು, ಹೆಬ್ಬೆಟ್ಟು ಗುರುತಿಗಾಗಿ 10 ರೂ. ಪಡೆಯಲಾಗುತ್ತಿದೆ. ಅಲ್ಲದೇ ವಿವಿಧ ಪಿಂಚಣಿ ವಿತರಣೆಗೆ ಪೋಸ್ಟ್‌ಮನ್ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಹಣ ನೀಡುವುದಿಲ್ಲ ಎಂದಿದಕ್ಕೆ ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ಹಣ ವಿತರಣೆ ಮಾಡಿಲ್ಲ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಶಾಸಕರು, ಮನೆ ಹಂಚಿಕೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಪಂ ಸದಸ್ಯರೆ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸುತ್ತೇನೆ. ಯಾರೇ ತಪ್ಪಿಸ್ಥರು ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸುವುದಾಗಿ ಭರವಸೆ ನೀಡಿದರು. ಜಿಪಂ ಸದಸ್ಯ ಲಕ್ಷ್ಮಣರಾವ್ ಬುಳ್ಳಾ, ತಹಶೀಲ್ದಾರ ದೇವೆಂದ್ರಪ್ಪ ಪಾಣಿ, ತಾಪಂ ಇಒ ಡಾ| ಗೋವಿಂದ, ಗ್ರಾಪಂ ಅಧ್ಯಕ್ಷ ಪಾಂಡುರಂಗ ಪಿರಾಜಿ, ಮಲ್ಲಿಕಾರ್ಜುನ ಮಹೇಂದ್ರಕರ್, ಪಿಡಿಒ ಸೋಮಶೇಖರ, ರಾಜೇಂದ್ರ ದಾಂಡೆಕರ್, ಸಂಜೀವರೆಡ್ಡಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.