ಗಂಗಾವತಿ :ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ರಾತ್ರಿ ಬೆಟ್ಟದಲ್ಲಿ ಡಿ. 3, 4 ಮತ್ತು 5 ರಂದು ಜರುಗಲಿರುವ ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನಾ ಕ್ರಮಕ್ಕೆ ಜಿಲ್ಲಾಡಳಿತ ,ತಾಲೂಕ ಆಡಳಿತ ಕಿಷ್ಕಿಂಧಾ ಅಂಜನಾದ್ರಿ ಗೆ ಮಾಲಾ ವಿಸರ್ಜನೆಗೆ ಆಗಮಿಸುವ ಹನುಮ ಭಕ್ತರಿಗೆ ವಿತರಿಸಲು ದೇವಸ್ಥಾನದ ವತಿಯಿಂದ 60ಸಾವಿರ ಪ್ರಸಾದದ ಲಾಡುಗಳು ತಯಾರಿಸಲಾಗಿದೆ. ಜೊತೆಗೆ 1.50 ಲಕ್ಷ ಹನುಮ ಭಕ್ತರಿಗೆ ಡಿ. 4ರಂದು ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಅನ್ನ ಪ್ರಸಾದದ ವ್ಯವಸ್ಥೆ ಯನ್ನು ಬೆಟ್ಟದ ಎಡಭಾಗದಲ್ಲಿರುವ ವೇದಪಾಠಶಾಲೆಯಲ್ಲಿ ಮಾಡಲಾಗಿದೆ.
ಅಂಜನಾದ್ರಿಗೆ ಆಗಮಿಸುವ ಹನುಮ ಭಕ್ತರು ಬೆಟ್ಟದ ಬಲ ಭಾಗದಿಂದ ಹತ್ತಿ ಎಡಭಾಗದಲ್ಲಿ ಇಳಿಯುವ ಮಾರ್ಗ ಮಾಡಲಾಗಿದೆ. ಶುದ್ಧ ಕುಡಿಯುವ ನೀರು ಸೇವೆ , ಸಂಚಾರಿ ದಟ್ಟಣೆ ತಪ್ಪಿಸಲು ಪೋಲಿಸ್ ವ್ಯವಸ್ಥೆ ,19 ಕಡೆ ಹನುಮಭಕ್ತರ ವಾಹನಗಳ ಪಾರ್ಕಿಂಗ್ ಮಾಡುವ ಜಾಗವನ್ನು ಗುರುತಿಸಲಾಗಿದೆ, ಪ್ರತಿಯೊಂದು ಸ್ಥಳಕ್ಕೆ ಹೋಗುವ ದಿಕ್ಸೂಚಿರುವ ನಾಮಫಲಕಗಳನ್ನು ಅಳವಡಿಸಲಾಗಿದೆ. ಆನೆಗೊಂದಿ ಉತ್ಸವ ಪ್ರದೇಶ ಮತ್ತು ಪಂಪಾ ಸರೋವರದ ಸುತ್ತಮುತ್ತಲಿರುವ ರೈತರ ಭೂಮಿಯನ್ನು ವಾಹನಗಳ ಪಾರ್ಕಿಂಗ್ ಜಾಗ ನಿಗದಿ ಮಾಡಲಾಗಿದೆ.ಬೆಟ್ಟದ ಕೆಳಗಿನ ಖಾಯಂ ಪಾರ್ಕಿಂಗ್ ಜಾಗದಲ್ಲಿ ತಾತ್ಕಲಿಕ ಪೊಲೀಸ್ ಠಾಣೆಯನ್ನು ಆರಂಭಿಸಲಾಗಿದೆ .ಆಸ್ಪತ್ರೆ ವ್ಯವಸ್ತೆಯನ್ನು ಮಾಡಲಾಗಿದೆ . ಹನುಮ ಭಕ್ತರಿಗೆ ಸೂಕ್ತ ಮಾಹಿತಿ ನೀಡಲು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.
ಡಿ. 3, 4 ಮತ್ತು 5 ರಂದು ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸಾದ ಲಡ್ಡು ತಯಾರಿಸಲಾಗಿದೆ. ಊಟದ ವ್ಯವಸ್ಥೆಗಾಗಿ 80 ಕ್ವಿಂಟಲ್ ಅಕ್ಕಿ, 500ಕ್ಕೂ ಹೆಚ್ಚು ಊಟ ಬಡಿಸುವ ಅಡಿಗೆ ಮಾಡುವ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ . ಅಂಜನಾದ್ರಿ ಸುತ್ತಲೂ ಗ್ರಾಪಂ ಮತ್ತು ಗಂಗಾವತಿ ನಗರಸಭೆಯ ಸಿಬ್ಬಂದಿಗಳಿಂದ ಸ್ವಚ್ಛತಾಕಾರ್ಯ ನಡೆಯುತ್ತಿದೆ. ಶುದ್ಧ ಕುಡಿಯುವ ನೀರು, ಆಸ್ಪತ್ರೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ,ಮೂರು ದಿನಗಳ ಕಾಲ ಸಂಚಾರಿ ದಟ್ಟಣೆಯನ್ನು ನಿಯಂತ್ರಣ ಮಾಡಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಗಂಗಾವತಿ ತಹಶೀಲ್ದಾರ್ ಯು. ನಾಗರಾಜ್ ತಿಳಿಸಿದ್ದಾರೆ.