Advertisement

12 ರಂದು ಬೆಂಗಳೂರಿಗೆ ಸರ್ವಪಕ್ಷ ನಿಯೋಗ

02:37 PM Sep 06, 2022 | Team Udayavani |

ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಲು ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಸೋಮವಾರ 145 ದಿನಗಳನ್ನು ಪೂರೈಸಿದೆ.

Advertisement

ಸೋಮವಾರ ನಡೆದ ತಾಲೂಕು ಹೋರಾಟ ಸಮಿತಿ ಸದಸ್ಯರ ಸಭೆಯಲ್ಲಿ ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿದ ಅವರು, ಮಹಾಲಿಂಗಪುರ ತಾಲೂಕು ಬೇಡಿಕೆಯು 30 ವರ್ಷಗಳ ಬೇಡಿಕೆಯಾಗಿದೆ. ಮಳೆಗಾಲದ ಅಧಿವೇಶನದ ವೇಳೆ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆಗೆ ಒತ್ತಾಯಿಸಿ ಸೆ. 12ರಂದು ಸರ್ವಪಕ್ಷಗಳ ನಿಯೋಗವು ಬೆಂಗಳೂರಿಗೆ ತೆರಳಲಿದೆ.

ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸರ್ವ ಪಕ್ಷಗಳ ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಗದೊಂದಿಗೆ ಬೆಂಗಳೂರಿಗೆ ಆಗಮಿಸಬೇಕೆಂದು ವಿನಂತಿಸಿದರು.

ಹೋರಾಟ ಸಮಿತಿ ನೂತನ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ತಾಲೂಕು ಕೇಂದ್ರಕ್ಕಾಗಿ ಒತ್ತಾಯಿಸಿ ಕಳೆದ 145 ದಿನಗಳಿಂದ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಹೋರಾಟ ನಡೆಯುತ್ತಿದೆ. 12ರಂದು ಬೆಂಗಳೂರಿಗೆ ತೆರಳುವ ನಿಯೋಗದಲ್ಲಿ ತಾಲೂಕಿಗೆ ಸಂಬಂಧಿ ಸಿದ ಎಲ್ಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ವ ಪಕ್ಷಗಳ ಮುಖಂಡರು ಬರಬೇಕು. ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ತಂದು ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿಕೊಳ್ಳೋಣ ಎಂದರು.

ಸಭೆಯಲ್ಲಿ ಹೋರಾಟ ಸಮಿತಿ ಸದಸ್ಯರು, ವಿವಿಧ ಸಂಘಟನೆ ಮತ್ತು ಸಮಾಜಗಳ ಹಿರಿಯರು ಇದ್ದರು.  ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.

Advertisement

ಹೋರಾಟ ಸಮಿತಿ ನೂತನ ಪದಾಧಿಕಾರಿಗಳು: ಸಂಗಪ್ಪ ಹಲ್ಲಿ (ಅಧ್ಯಕ್ಷರು), ಧರೆಪ್ಪ ಸಾಂಗ್ಲೀಕರ (ಕಾರ್ಯಾಧ್ಯಕ್ಷರು), ಸಿದ್ದುಗೌಡ ಪಾಟೀಲ, ಮಲ್ಲಪ್ಪ ಸಿಂಗಾಡಿ, ಎಸ್‌.ಎಂ.ಪಾಟೀಲ, ಮಹೇಶ ಮನ್ನಯ್ಯನವರಮಠ, ಜಾವೇದ ಬಾಗವಾನ, ಮಡಿವಾಳಯ್ಯ ಕಂಬಿ(ಉಪಾಧ್ಯಕ್ಷರು), ಚಂದ್ರಶೇಖರ ಮೋರೆ, ಚನ್ನಬಸು ಹುರಕಡ್ಲಿ (ಪ್ರಧಾನ ಕಾರ್ಯದರ್ಶಿಗಳು), ಗಂಗಾಧರ ಮೇಟಿ, ಸಿದ್ದು ಶಿರೋಳ (ಸಹ ಪ್ರಧಾನ ಕಾರ್ಯದರ್ಶಿಗಳು), ಶಿವಲಿಂಗ ಟಿರ್ಕಿ, ವೀರೇಶ ಆಸಂಗಿ, ಭೀಮಸಿ ಸಸಾಲಟ್ಟಿ, ಎಂ.ಎಸ್‌. ಮನ್ನಯ್ಯನವರಮಠ (ವಕೀಲರು), ಸುರೇಶ ಮಡಿವಾಳರ (ಕಾರ್ಯದರ್ಶಿಗಳು), ನಿಂಗಪ್ಪ ಬಾಳಿಕಾಯಿ, ಮಹಾದೇವ ಮೇಟಿ(ಖಜಾಂಚಿ), ಕಾರ್ಯಕಾರಿಣಿ ಸದಸ್ಯರಾಗಿ ರಾಜೇಂದ್ರ ಮಿರ್ಜಿ, ಈಶ್ವರ ಮುರಗೋಡ, ಪರಪ್ಪ ಸತ್ತಿಗೇರಿ, ಹಣಮಂತ ಭಜಂತ್ರಿ, ಮಲ್ಲು ಮಿರ್ಜಿ, ಚಂದ್ರಶೇಖರ ಮುಂಡಗನೂರ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next