Advertisement

ಎಲ್ಲ ಪಕ್ಷಗಳಿಗೂ ದೇಶದ್ರೋಹಿ ಕಾನೂನು ಇಷ್ಟ…!

08:53 PM Feb 02, 2023 | Team Udayavani |
ಕಾಂಗ್ರೆಸ್‌ ನಾಯಕ ಅಜಯ್‌ ರೈ ವಿರುದ್ಧ ಫೆ.5ರಂದು ವಾರಾಣಸಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಇಲ್ಲಿ ಅವರು ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಕಾರಣದಿಂದ ಈ ಪ್ರಕರಣ ಹೊರಿಸಲಾಗಿತ್ತು. ಸದ್ಯ ತನಿಖೆ ನಡೆಯುತ್ತಿದೆ.  ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಮಾಜಿ ರಾಜ್ಯಪಾಲ ಅಜೀಜ್‌ ಖುರೇಷಿ ಅವರು, ರಾಜ್ಯ ಸರಕಾರದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕಾಗಿ ಇವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಆಗ್ರಾ ಠಾಣೆಯಲ್ಲಿ ಕಾಶ್ಮೀರದ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್‌ ಪಂದ್ಯವನ್ನು ನೋಡುವ ವೇಳೆ ಇವರು...
Now pay only for what you want!
This is Premium Content
Click to unlock
Pay with

ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿರುವ ದೇಶದ್ರೋಹಿ ಕಾನೂನು(ಸೆಡಿಷನ್‌)ಅನ್ನು ರದ್ದು ಪಡಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಯುತ್ತಿದೆ. ಅರ್ಜಿದಾರರು, ಈ ಕಾನೂನನ್ನು ಸರಕಾರಗಳು ದುರುಪಯೋಗ ಮಾಡಿಕೊಳ್ಳುತ್ತಿವೆ. ವಾಕ್‌ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಗಟ್ಟಿಯಾಗಿರುವ ಈ ದಿನಗಳಲ್ಲೂ ಸೆಡಿಷನ್‌ ಕಾನೂನು ಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್‌, ಕೇಂದ್ರ ಸರಕಾರಕ್ಕೆ ಈ ಕಾನೂನು ರದ್ದು ಮಾಡಬಹುದೇ ಎಂದು ಕೇಳಿದೆ. ಆದರೆ ಕೇಂದ್ರ ಸರಕಾರ, ದೇಶದ್ರೋಹ ಕಾನೂನು ಇರಲಿ ಎಂದೇ ಹೇಳಿದೆ. ಹಾಗಾದರೆ ಯಾವ ರಾಜ್ಯಗಳಲ್ಲಿ ಈ ದೇಶದ್ರೋಹ ಕಾನೂನನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ.

Advertisement

ಯಾರ ಮೇಲೆ ದೇಶದ್ರೋಹದ ಕಾನೂನು?
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಯೊಂದರ ಸಂಪಾದಕೀಯ ಬರೆದವರಿಂದ ಹಿಡಿದು ವಾಟ್ಸ್‌ ಆ್ಯಪ್‌ನಲ್ಲಿ ಸಂದೇಶ ಕಳುಹಿ ಸಿದವರ ವಿರುದ್ಧವೂ ದೇಶದ್ರೋಹ ಕಾನೂನಿನಂತೆ ಕೇಸ್‌ ಹಾಕಲಾಗಿದೆ. ಅಂದರೆ ಐಪಿಸಿ ಸೆಕ್ಷನ್‌ 124ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಸಾಬೀತಾದರೆ ಜೀವಾವಧಿ ಶಿಕ್ಷೆ ಮತ್ತು ದಂಡ ಅಥವಾ 3 ವರ್ಷಗಳ ವರೆಗೆ ಜೈಲು ಮತ್ತು ದಂಡ ವಿಧಿಸಬ ಹುದಾಗಿದೆ. ಇಂಡಿಯನ್‌ ಎಕ್ಸ್‌ಪ್ರಸ್‌ನ ವರದಿಯೊಂದರ ಪ್ರಕಾರ, ಕಳೆದ ವರ್ಷ ದೇಶದಲ್ಲಿ ಒಟ್ಟು 14 ಪ್ರಕರಣ ದಾಖಲಾಗಿವೆ. ಇಲ್ಲಿ ಪಕ್ಷಬೇಧ ಮರೆತು, ಸರಕಾರ‌ಗಳು ಈ ಆರೋಪ ಹೊರಿಸಿದ್ದಾರೆ.

ಉತ್ತರ ಪ್ರದೇಶ, 4 ಪ್ರಕರಣ
ಫೆ.3ರಂದು ಬಿಕಾನೇರ್‌ ಠಾಣೆಯಲ್ಲಿ ಎಸ್‌ಪಿ-ಆರ್‌ಎಲ್‌ಡಿ ಅಭ್ಯರ್ಥಿ ಡಾ| ವೀರಜ್‌ ಚೌಧರಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ವೀಡಿಯೋವೊಂದರಲ್ಲಿ ಅವರ ಬೆಂಬಲಿಗರು ಪಾಕಿಸ್ಥಾನ್‌ ಜಿಂದಾಬಾದ್‌ ಎಂಬ ಘೋಷಣೆ ಕೂಗಿದ್ದರು ಎಂಬ ಕಾರಣಕ್ಕೆ ಆರೋಪ ಹೊರಿಸಲಾಗಿತ್ತು. ಸದ್ಯ ವೀಡಿಯೋ ಬಗ್ಗೆ ಫಾರೆನ್ಸಿಕ್‌ ತನಿಖೆ ನಡೆಯುತ್ತಿದೆ. ಹಾಗೆಯೇ ಕಾಂಗ್ರೆಸ್‌ ನಾಯಕ ಅಜಯ್‌ ರೈ ವಿರುದ್ಧ ಫೆ.5ರಂದು ವಾರಾಣಸಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಇಲ್ಲಿ ಅವರು ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಕಾರಣದಿಂದ ಈ ಪ್ರಕರಣ ಹೊರಿಸಲಾಗಿತ್ತು. ಸದ್ಯ ತನಿಖೆ ನಡೆಯುತ್ತಿದೆ.  ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಮಾಜಿ ರಾಜ್ಯಪಾಲ ಅಜೀಜ್‌ ಖುರೇಷಿ ಅವರು, ರಾಜ್ಯ ಸರಕಾರದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕಾಗಿ ಇವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಆಗ್ರಾ ಠಾಣೆಯಲ್ಲಿ ಕಾಶ್ಮೀರದ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್‌ ಪಂದ್ಯವನ್ನು ನೋಡುವ ವೇಳೆ ಇವರು ಭಾರತ ವಿರೋಧಿ ಸಂದೇಶಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ್ದರು ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಿದೆ.

ಛತ್ತೀಸ್‌ಗಢ, 2 ಪ್ರಕರಣ
ಕಾಂಗ್ರೆಸ್‌ ಆಡಳಿತವಿರುವ ಛತ್ತೀಸ್‌ಗಢದಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿಯೊಬ್ಬರು ಸರಕಾರದ ವಿರುದ್ಧ ಲೇಖನ ಬರೆದಿದ್ದರು ಎಂಬ ಕಾರಣಕ್ಕಾಗಿ ಭ್ರಷ್ಟಾಚಾರ ವಿರೋಧಿ ದಳ ಪ್ರಕರಣ ದಾಖಲಿಸಿದೆ. ಸದ್ಯ ಈ ಅಧಿಕಾರಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ಧರಮ್‌ ಸಂಸದ್‌ನಲ್ಲಿ ಧಾರ್ಮಿಕ ನಾಯಕ ಕಾಳಿಚರಣ್‌ ಅವರು, ಮಹಾತ್ಮಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕಾಗಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಕಳೆದ ಎ.6ರಂದು ಇವರಿಗೆ ಜಾಮೀನು ಸಿಕ್ಕಿದ್ದು, ತನಿಖೆ ನಡೆಯುತ್ತಿದೆ.

ಅಸ್ಸಾಂ
2021ರ ಡಿ.4ರಂದು ಅಸ್ಸಾಂನ ಪತ್ರಕರ್ತ ಅನಿರ್ಬನ್‌ ರಾಯ್‌ ಚೌಧರಿ ಅವರು ಪತ್ರಿಕೆಯೊಂದರಲ್ಲಿ ಸಂಪಾದಕೀಯ ಬರೆದು, ಸರಕಾರವನ್ನು ಅವಹೇಳನ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಸದ್ಯ ಇವರಿಗೂ ಜಾಮೀನು ಸಿಕ್ಕಿದೆ.

Advertisement

ಗುಜರಾತ್‌
ಫೆ.20ರಂದು ವಕೀಲ ಸಾಹಿಲ್‌ ಮೋರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಶಿವಾಜಿಯನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂಬ ಕಾರಣದಿಂದಾಗಿ ಪ್ರಕರಣ ದಾಖಲಾಗಿದೆ. ನೆರೆಯವರು ಈ ಬಗ್ಗೆ ದೂರು ನೀಡಿದ್ದರು. ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಹರ್ಯಾಣ
2021ರ ಜ.15ರಂದು ಖಾಪ್‌ ನಾಯಕ ಸುನಿಲ್‌ ಗುಲಿಯಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಕೋಲುಗಳನ್ನು ತೆಗೆದುಕೊಂಡು, ಸರಕಾರದವರನ್ನು ಹಿಡಿದು ಥಳಿಸಿ ಎಂದು ಇವರು ರೈತ ಪ್ರತಿಭಟನಕಾರರಿಗೆ ಸಲಹೆ ನೀಡಿದ್ದರು. ಈಗ ಇವರ ವಿರುದ್ಧ ದೇಶದ್ರೋಹ ಕಾನೂನು ಇಲ್ಲ. ರೈತರ ಪ್ರತಿ ಭಟನೆ ವಾಪಸ್‌ ತೆಗೆದುಕೊಳ್ಳುವಾಗ ಸರಕಾರ ಷರತ್ತಿಗೆ ಒಳಪಟ್ಟು ಎಲ್ಲ ಪ್ರಕರಣ ಕೈಬಿಟ್ಟಿತ್ತು.

ಜಮ್ಮು ಮತ್ತು ಕಾಶ್ಮೀರ
ದಿ ಕಾಶ್ಮೀರ ವಾಲಾ ಪತ್ರಿಕೆಯ ಸಂಪಾದಕ ಫ‌ಹಾದ್‌ ಶಾ ವಿರುದ್ಧ ಒಂದರ ಮೇಲೊಂದರಂತೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರು ಭದ್ರತಾ ಏಜೆನ್ಸಿಗಳ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹವಾಗಿ ಬರೆದುಕೊಂಡಿದ್ದರು ಎಂಬ ಕಾರಣಕ್ಕಾಗಿ ಕೇಸು ದಾಖಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೆ, ಇನ್ನೂ ಕೆಲವಲ್ಲಿ ಪಡೆದಿಲ್ಲ. ಹೀಗಾಗಿ ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾರೆ.

ಝಾರ್ಖಂಡ್‌
ಎ.20ರಂದು ಎಂಟು ಮಂದಿ ಪಾಕಿಸ್ಥಾನ್‌ ಜಿಂದಾಬಾದ್‌ ಎಂದು ಕೂಗಿದ್ದರು ಎಂಬ ಕಾರಣಕ್ಕಾಗಿ ಬಂಧಿಸಲಾಗಿದೆ. ಗಾಂಧೆ ಬ್ಲಾಕ್‌ನಲ್ಲಿ 50ರಿಂದ 60 ಮಂದಿ ಮುಂದೆ ಈ ಎಂಟು ಮಂದಿ ಪಾಕಿಸ್ಥಾನಕ್ಕೆ ಜೈಕಾರ ಹಾಕಿದ್ದಾರೆ. ಇವರೆಲ್ಲ ಈಗಲೂ ಜೈಲಿನಲ್ಲಿಯೇ ಇದ್ದಾರೆ.

ಮಹಾರಾಷ್ಟ್ರ
ಶಾಸಕ-ಸಂಸದ ದಂಪತಿಯಾದ ನವನೀತ್‌ ಮತ್ತು ರವಿ ರಾಣಾ ವಿರುದ್ಧ ಮಹಾರಾಷ್ಟ್ರದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಇವರು ಸಿಎಂ ಉದ್ಧವ್‌ ಠಾಕ್ರೆ ನಿವಾಸದ ಮುಂದೆ ಹನುಮಾನ್‌ ಚಾಲೀಸಾ ಹಾಡುವುದಾಗಿ ಹೇಳಿದ್ದರು. ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ತೆಗೆಯದಿದ್ದರೆ ಈ ರೀತಿ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದರು. ಇವರು ಸರಕಾರಕ್ಕೇ ಸವಾಲು ಹಾಕಿದ್ದಾರೆ ಎಂಬ ಕಾರಣದಿಂದಾಗಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಸದ್ಯ ಇವರೂ ಜಾಮೀನು ಪಡೆದು ಹೊರಗಿದ್ದಾರೆ.

ಮಣಿಪುರ
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಚಿತ್ರವನ್ನು ತಿರುಚಿದ್ದಾರೆ ಎಂದು ವಕೀಲ ಸನೋಜಾಮ್‌ ಸಾಮಚರಣ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಇವರು ಸ್ಥಳೀಯ ಟಿವಿ ವಾಹಿನಿಯಲ್ಲಿ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಸದ್ಯ ಇವರಿಗೂ ಜಾಮೀನು ನೀಡಲಾಗಿದೆ.

ತಮಿಳುನಾಡು
ತಮಿಳುನಾಡು ದಿನ ಆಚರಣೆ ದಿನ ಪ್ರತ್ಯೇಕ ಧ್ವಜ ಹಾರಿಸಿದ್ದರು ಎಂಬ ಕಾರಣಕ್ಕಾಗಿ ನಾಮ್‌ ತಮಿಳರ್‌ ಕಾಚಿ ನಾಯಕ ಸೀಮನ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಆದರೆ ಸದ್ಯ ಇವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.