Advertisement

ಪಾಕ್‌ ಜತೆ ವ್ಯವಹರಿಸಲು ಎಲ್ಲ ಆಯ್ಕೆಗಳು ಮುಕ್ತ: ಶ್ವೇತಭವನ

12:15 PM Jan 06, 2018 | Team Udayavani |

ವಾಷಿಂಗ್ಟನ್‌ : ಪಾಕಿಸ್ಥಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್‌ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ನಾಮಾವಶೇಷ ಮಾಡುವ ನಿರ್ಣಾಯಕ ಕ್ರಮ ತೆಗೆದುಕೊಳ್ಳದಿದ್ದಲ್ಲಿ  ಪಾಕಿಸ್ಥಾನದೊಂದಿಗೆ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳು ತನ್ನ ಮೇಜಿನ ಮೇಲೆ ಇವೆ ಎಂದು ಶ್ವೇತ ಭವನ ಇಂದು ಇಸ್ಲಾಮಾಬಾದ್‌ಗೆ ಕಠಿನ ಎಚ್ಚರಿಕೆ ನೀಡಿದೆ.

Advertisement

ಉಗ್ರ ಜಾಲವನ್ನು ಮಟ್ಟ ಹಾಕಲು ವಿಫ‌ಲವಾಗಿರುವ ಪಾಕಿಸ್ಥಾನಕ್ಕೆ ತಾನು ನೀಡಲಿದ್ದ 2 ಶತಕೋಟಿ ಡಾಲರ್‌ಗಳ ಭದ್ರತಾ ನೆರವನ್ನು  ಅಮಾನತು ಮಾಡಿದ ಒಂದು ದಿನದ ತರುವಾಯ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಂದ ಪಾಕಿಗೆ ಈ ಖಡಕ್‌ ಸಂದೇಶವನ್ನು ರವಾನಿಸಲಾಗಿದೆ.

ಕಳೆದ ಹದಿನೈದು ವರ್ಷಗಳಿಂದ ಪಾಕಿಸ್ಥಾನ ಅಮೆರಿಕದಿಂದ 33 ಶತಕೋಟಿ ಡಾಲರ್‌ಗಳ ಭದ್ರತಾ ನೆರವನ್ನು ಪಡೆದಿದ್ದು ಇದಕ್ಕೆ ಪ್ರತಿಯಾಗಿ ಅದು ಅಮೆರಿಕಕ್ಕೆ ಕೇವಲ ಸುಳ್ಳಿನ ಕಂತೆಯನ್ನು ನೀಡಿದೆಯಲ್ಲದೆ ನೆರವುದಾತನ ವಿರುದ್ಧವೇ ಡಬಲ್‌ ಗೇಮ್‌ ಆಡಿದೆ ಎಂದು ಟ್ರಂಪ್‌ ಕೆಲ ದಿನಗಳ ಹಿಂದೆ ಪಾಕಿಗೆ ಬಲವಾದ ತಪರಾಕಿ ನೀಡಿದ್ದರು. 

ತಾಲಿಬಾನ್‌ ಮತ್ತು ಹಕ್ಕಾನಿ ಉಗ್ರ ಜಾಲವನ್ನು ನಿರ್ನಾಮ ಮಾಡಬೇಕೆಂದು ಪಾಕಿಸ್ಥಾನಕ್ಕೆ ಮನವರಿಕೆ ಮಾಡವಲ್ಲಿನ ಕ್ರಮವಾಗಿ ಭದ್ರತಾ ನೆರವನ್ನು ನಿಲ್ಲಿಸುವ ಮಾರ್ಗವಲ್ಲದೆ ಬೇರೆ ಉಪಾಯಗಳೂ ಇವೆ ಎಂಬುದನ್ನು ಪಾಕಿಸ್ಥಾನ ತಿಳಿಯಬೇಕು ಎಂದು ಟ್ರಂಪ್‌ ಆಡಳಿತೆಯ ಹಿರಿಯ ಅಧಿಕಾರಿ ಇಸ್ಲಾಮಾಬಾದ್‌ ಗೆ ಕಠಿನ ಕ್ರಮದ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next