Advertisement
ನಗರದ ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ರೀಚ್ ವಾರ್ ಕಾಸ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್‌ನಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯ =ಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಪ್ರತಿವರ್ಷ ಜೂನ್ ತಿಂಗಳಲ್ಲಿ ವಿಶ್ವ ಪರಿಸರ ದಿನವನ್ನು ನಾವು ಆಚರಿಸುತ್ತಿದ್ದೇವೆ. ಇದು ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿ ನಿತ್ಯದ ಆಚರಣೆ ಯಾಗಬೇಕು. ಈ ಹಿನ್ನೆಲೆಯಲ್ಲಿ ನಾವು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ಹೊಂದಿ ಸಸಿಗಳನ್ನು ನೆಟ್ಟು ಮಗುವಿನಂತೆ ಪೋಷಣೆ ಮಾಡಬೇಕು ಎಂದು ನುಡಿದರು.
Related Articles
Advertisement
ಕೆರೆ ಕಟ್ಟೆ ರಕ್ಷಣೆಯಿಂದ ಅಂತರ್ಜಲ ವೃದ್ಧಿ:
ನಾವೆಲ್ಲರೂ ವೃಕ್ಷ ಪ್ರೇಮಿಗಳಾಗಿ ಪರಿಸರ ರಕ್ಷಿಸಬೇಕು. ಸಾಮಾಜಿಕ ಕಾಳಜಿ ಕೊರತೆಯಿಂದ ಪರಿಸರ ನಾಶವಾಗುತ್ತಿದೆ. ಕೆರೆ ಕಟ್ಟೆಗಳ ರಕ್ಷಿಣೆ ಯಿಂದ ಅಂತರ್ಜಲವೃದ್ಧಿಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ್.ಎಸ್ ತಿಳಿಸಿದರು.
ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ಶಿರಾ ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರಿಗೂ ಪ್ರಕೃತಿ ರಕ್ಷಣೆ ಬಗ್ಗೆ ಅರಿವಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಮನುಕುಲವನ್ನು ಉಳಿಸಲು ಸಾಧ್ಯ. ಭೂಮಿಯಲ್ಲಿ ಅಂತರ್ಜಲ ವೃದ್ಧಿಗಾಗಿ ಕೆರೆ ಕಟ್ಟೆಗಳನ್ನು ರಕ್ಷಿಸಬೇಕು. ಕೆರೆಯಲ್ಲಿ ಹೂಳೆತ್ತುವುದರ ಜೊತೆಗೆ ಕಾಲುವೆಗಳನ್ನು ಒತ್ತು ವರಿ ಮಾಡದೆ ನೀರು ಕೆರೆಗೆ ಹರಿಯಲು ಅನುವು ಮಾಡಿಕೊಡಬೇಕು. ಮಳೆಯ ನೀರಿನ ಪ್ರಮಾಣ ದಲ್ಲಿ ಕೇವಲ ಶೇ.20ರಷ್ಟು ಮಾತ್ರ ನೀರು ಭೂಮಿಗೆ ಸೇರಿಕೊಳ್ಳುತ್ತಿದೆ. ಇದರ ಪ್ರಮಾಣವನ್ನು ಹೆಚ್ಚಿಸಿ ದರೆ, ಅಂತರ್ಜಲ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಆಶಾ.ಕೆ.ಎಸ್. ಮಾತನಾಡಿದರು. ಈ ವೇಳೆ ನಗರಸಭೆ ಪ್ರಭಾರ ಆಯುಕ್ತ ಸೇತುರಾಂ ಸಿಂಗ್, ತಾಪಂ ಇಒ ಮೋಹನ್‌ಕುಮಾರ್, ಶಿರಾ ವಕೀಲರ ಸಂಘದ ಅಧ್ಯಕ್ಷ ಸಿ.ಎಚ್.ಜಗದೀಶ್, ಉಪಾಧ್ಯಕ್ಷ ಎಸ್. ಪಿ.ಮಂಜುನಾಥ್, ಕಾರ್ಯದರ್ಶಿ ಸಣ್ಣಕರೇ ಗೌಡ, ಹಿರಿಯ ವಕೀಲರಾದ ಕೆ.ರಂಗನಾಥ್, ಆರ್‌ಎಫ್ಒ ರಾಧ, ಅನುಷಾ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಸ್.ವೈ.ನರೇಶ್ ಬಾಬು, ಜಯರಾಮಯ್ಯ, ಡಾ.ವಿನಯ್, ಎಸ್.ಎಲ್.ರಂಗನಾಥ್, ಎಸ್.ವೈ.ಸುರೇಶ್, ಎಸ್.ಎನ್.ಅರುಣ್‌ಕುಮಾರ್, ರಾಷ್ಟ್ರಪತಿ ಪದಕ ವಿಜೇತ ರೇವಣ್ಣ, ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ, ಗೋವಿಂದಪ್ಪ, ಬಸವರಾಜು, ಸುಚೇತ್ ಹಾಗು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.